ಪ್ರೊಟೆಸ್ಟ್ ಫ್ರಮ್ ಹೋಂ

440

ಶಿವಮೊಗ್ಗ : ಮುಖ್ಯಮಂತ್ರಿ ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಪ್ರತಿಭಟನೆ ಮತ್ತು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ದಿನಕ್ಕೊಂದು ಸಂಘ ಸಂಸ್ಥೆಗಳು ಮುಂದಾಗುತ್ತಿವೆ. ಸಿಮ್ಸ್‌ನ ಹೊರಗುತ್ತಿಗೆ ನೌಕರರ ಸಮಸ್ಯೆ ಇನ್ನೂ ಜೀವಂತವಾಗಿರುವಾಗಲೇ ಮತ್ತೊಂದು ಸಂಘಟನೆ ಕೆಲಸಕ್ಕೆ ಗೈರಾಗಿ ಮನೆಯಲ್ಲಿಯೇ ಮುಷ್ಕರಕ್ಕೆ ಕುಳಿತು ಪ್ರೋಟೆಸ್ಟ್ ಫ್ರಮ್ ಹೋಂ ಎಂಬ ವಿನೂತನ ಪ್ರತಿಭಟನೆಗೆ ಮುಂದಾಗಿವೆ. ಈ ಮೂಲಕ ಸಮಾಜವಾದಿ ನೆಲೆಯಾದ ಶಿವಮೊಗ್ಗ ಮತ್ತೊಮ್ಮೆ ಹೋರಾಟದ ಕೇಂದ್ರ ಬಿಂದುವಾಗಿದೆ.
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘವು ಸೇವಾ ಭದ್ರತೆ ಹಾಗು ಖಾಯಂ ಗೊಳಿಸಿ ಸಮಾನ ವೇತನ ನೀಡುವಂತೆ ಒತ್ತಾಯಿಸಿ ಈ ಹಿಂದೆ ಕೋವಿಡ್-೧೯ ಆರಂಭಕ್ಕೂ ಮುನ್ನಾ ಹಾಗೂ ಕೋವಿಡ್-೧೯ ನಂತರದ ದಿನಗಳಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿತ್ತು. ಸರ್ಕಾರವೂ ಸಹ ಸಂಘದ ಬೇಡಿಕೆಯನ್ನ ಮೂರು ತಿಂಗಳಲ್ಲಿ ಈಡೇರಿಸುವಂತೆ ಭರವಸೆ ನೀಡಿತ್ತು.
ಭರವಸೆಯನ್ನ ನಂಬಿದ ಸಂಘ ಒಂದು ವೇಳೆ ಮೂರು ತಿಂಗಳ ಒಳಗೆ ಬೇಡಿಕೆ ಈಡೇರದಿದ್ದರೆ ನಾವು ಮತ್ತೆ ಪ್ರತಿಭಟನೆಗೆ ತೆರಳುವುದಾಗಿ ಎಚ್ಚರಿಸಿತ್ತು. ಅದರಂತೆ ಸರ್ಕಾರ ಕೊಟ್ಟ ಮಾತು ಇದುವರೆಗು ಈಡೇರಿಸದ ಇರುವ ಹಿನ್ನಲೆಯಲ್ಲಿ ಕಳೆದ ೬ ದಿನಗಳಿಂದ ಸಂಘದ ಎ ನೌಕರರು ರಾಜದ್ಯಂತ ಕೆಲಸ ತ್ಯಜಿಸಿ ಮನೆಯಲ್ಲಿಯೇ ಉಳಿದುಕೊಳ್ಳುವ ಮೂಲಕ ವಿನೂತನ ಪ್ರತಿಭಟನೆಗೆ ನಾಂದಿ ಹಾಡಿವೆ.
ಶಿವಮೊಗ್ಗದಲ್ಲಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ೮೦೦ ಜನರಿದ್ದು ಇಷ್ಟು ಜನ ಕೆಲಸ ತ್ಯಜಿಸಿ ಮನೆಯ ಲ್ಲಿಯೇ ಮುಷ್ಕರ ನಡೆಸುತ್ತಿzರೆ. ಇಂದು ಶಾಸಕ ಆಯನೂರು ಮಂಜುನಾಥ್ ನೇತೃತ್ವದಲ್ಲಿ ಸಭೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನೂ ಕೂಡ ಸಲ್ಲಿಸಿzರೆ.