ಪೊಲೀಸ್-ಪತ್ರಕರ್ತನ ಹೆಸರಲ್ಲಿ ಸುಲಿಗೆ: ಅರೆಸ್ಟ್

446

ಶಿವಮೊಗ್ಗ: ಲಾಕ್ ಡೌನ್ ಸಮಯದಲ್ಲಿ ಸುಲಿಗೆಗಳಿಗೆ ಕೆಲ ಕಿಡಿಗೇಡಿಳು ಇಳಿದು ಬಿಟ್ಟಿದ್ದಾರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಲಾಕ್ ಡೌನ್ ಇರುವ ವೇಳೆ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಹಣದ ವಸೂಲಿಗೆ ಇಳಿದ ವ್ಯಕ್ತಿಯೋರ್ವನನ್ನ ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಬೆಳ್ಳಂಬೆಳಿಗ್ಗೆ ನಡೆದಿದೆ.
ಎರಡು ಮೂರು ದಿನಗಳ ಹಿಂದೆ ಇದೇ ವಿನೋಬ ನಗರದಲ್ಲಿ ನಕಲಿ ಇನ್ಸುರೆನ್ಸ್ ಏಜೆಂಟ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಅದೂ ಕೂಡ ವಿನೋಬ ನಗರದಲ್ಲಿ ಕಾಣಿಸಿಕೊಂಡಿರುವುದು ಜನರಲ್ಲಿ ಮತ್ತಷ್ಟು ಭಯ ಮೂಡಿಸಿದೆ.
ಎಪಿಎಂಸಿಯಲ್ಲಿ ಇಂದು ಬೆಳಿಗ್ಗೆ ಪತ್ರಕರ್ತನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ, ಕೊರೋನಾ ಕುರಿತು ಕಾರ್ಯಕ್ರಮವನ್ನ ನಡೆಸಲಾಗುತ್ತಿದೆ ಈ ಕಾರ್ಯಕ್ರಮಕ್ಕೆ ದೇಣಿಗೆ ನೀಡಿ ಎಂದು ಹೇಳಿ ಹಣ ವಸೂಲಿ ಮಾಡಿರುವ ವ್ಯಕ್ತಿ, ಅದೇ ಎಪಿಎಂಸಿಯಲ್ಲಿ ಮತ್ತೊಂದು ಅಂಗಡಿಗೆ ಹೋಗಿ ಡಿಎಆರ್ ಪೊಲೀಸ್‌ನಿಂದ ಬಂದಿದ್ದೀವಿ. ಕಾರ್ಯಕ್ರಮ ನಡೆಸಲು ದೇಣಿಗೆ ಬೇಕು ದೇಣಿಗೆ ನೀಡಿ ಎಂದು ಹೇಳಿಕೊಂಡಿದ್ದಾನೆ. ಈತನ ನಡುವಳಿಕೆ ಅನುಮಾನ ಮೂಡಿಸಿದೆ.
ಅನುಮಾನಗೊಂಡ ಸಾರ್ವಜನಿಕರು ಹಾಗೂ ಅಂಗಡಿ ಯವರು ಸದರಿ ವ್ಯಕ್ತಿಯನ್ನು ವಿನೋಬ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈತನನ್ನ ಸಂತೋಷ್ ನಾಯಕ್ ಎಂದು ಗುರುತಿಸಲಾಗಿದೆ. ಈತ ಈ ಹಿಂದೆಯೂ ಕೂಡ ಬೇರೆ ಬೇರೆ ಪತ್ರಿಕೆಗಳ ಹೆಸರನ್ನೇಳಿಕೊಂಡು ಅಧಿಕಾರಿಗಳು ಸೇರಿದಂತೆ ಇತರ ವ್ಯಕ್ತಿಗಳಿಂದ ಸುಲಿಗೆ ಮಾಡಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.