ಪೈಯಿಂಟ್ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ..

551

ಸುದ್ದಿ ಹಾಗೂ ಜಹೀರಾತಿಗಾಗಿ ಸಂಪರ್ಕಿಸಿ:+91 948 248 2182, +91 725 971 4220 ಇ ಮೇಲ್: hosanavika@gmail.com

ಶಿವಮೊಗ್ಗ: ಲಾಕ್‌ಡೌನ್ ಸಂಕಷ್ಟಕ್ಕೆ ಪೈಯಿಂಟ್ ಕಾರ್ಮಿಕರೂ ಸಹ ಒಳಗಾಗಿದ್ದು, ಅವರ ಸಂಕಷ್ಟಕ್ಕೆ ಜಿಲ್ಲಾ ಪೈಯಿಂಟ್ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ.
ಮಲೆನಾಡು ಶಿವಮೊಗ್ಗ ಜಿಲ್ಲಾ ಪೈಂಟಿಂಗ್ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಂದು ಬೆಂಕಿ ನಗರದ ಸಮುದಾಯ ಭವನದಲ್ಲಿ ಆಹಾರದ ಕಿಟ್ಟನ್ನು ವಿತರಿಸಿತು.
ಕೊರೋನಾ ತಡೆಗೆ ಅಗತ್ಯವಿದ್ದ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪನವರ ಮೂಲಕ ಸುಮಾರು ೧೫೦ ಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು. ಈ ಆಹಾರ ಕಿಟ್‌ನಲ್ಲಿ ಅಕ್ಕಿ, ಗೋಧಿ, ಸಕ್ಕರೆ ಎಣ್ಣೆ ಮೊದಲಾದ ದಿನಸಿಗಳು ಇದ್ದವು.
ಸಂಘದ ಅಧ್ಯಕ್ಷ ಎಂಆರ್ ಮುರಳಿಧರ್ ಗೌರವಾಧ್ಯಕ್ಷ ಕೃಷ್ಣಪ್ಪ .ಟಿಎಲ್ ಬಾಬು .ಎಚ್ ಎಂ ಆಂಥೋನಿ ಮೋಜಸ್ .ನಿತ್ಯಾನಂದ ರಾಜು, ಪಾಲಿಕೆ ಸದಸ್ಯ ರಾಹುಲ್ ಬಿದರೆ ಮತ್ತು ಬಿಜೆಪಿ ಮುಖಂಡ ನಾಗರಾಜ್ ಉಪಸ್ಥಿತರಿದ್ದರು.