ಶಿವಮೊಗ್ಗ: ೨ ವರ್ಷ ೮ ತಿಂಗಳ ಮಗುವೊಂದು ವಯಸ್ಸಿಗೆ ಮೀರಿ ಪ್ರತಿಭೆ ಪ್ರದರ್ಶನ ಮಾಡುತ್ತಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ನಗರದ ಮಿಷನ್ ಕಾಂಪೌಂಡ್ನ ತನಿಷಾ ಎಂಬ ಪುಟಾಣಿ ತನ್ನ ಕಿರಿವಯಸ್ಸಿನಲ್ಲೇ ಇಂಗ್ಲೀಷ್ ಅಕ್ಷರ ಮಾಲೆ ವಾಚನ, ೧೫ ಕವನ ಓದುವಿಕೆ, ವರ್ಷದ ತಿಂಗಳು, ವಾರದ ದಿನಗಳು, ಸೂರ್ಯಮಂಡಲ, ದೇಶದ ಎಲ್ಲ ರಾಜ್ಯದ ರಾಜಧಾನಿಗಳ ಹೆಸರು, ರಾಷ್ಟ್ರೀಯ ಲಾಂಛನಗಳು, ಮನುಷ್ಯನ ದೇಹದ ೧೯ ಅಂಗಾಂಗಗಳು, ೧೦ ಆಕಾರಗಳು ಹಾಗೆಯೇ ೨೦ ಪ್ರಾಣಿಗಳ ಗುರುತಿಸು ಜಿಕೆಯಲ್ಲಿ ಪ್ರತಿಭೆ ಪ್ರದರ್ಶಿಸುತ್ತಿದ್ದಾಳೆ. ಇದೀಗ ಈ ಪ್ರತಿಭಾನ್ವಿತೆಯ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ.
ಈ ಪ್ರತಿಭಾನ್ವಿತೆ ನಗರದ ಮಿಷನ್ ಕಾಂಪೌಂಡ್ ನಿವಾಸಿ, ಕೆಪಿಟಿಸಿಎಲ್ ಉದ್ಯೋಗಿ ಟೆರೆನ್ಸ್ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಯನೂರು ಶಾಖೆ ಉದ್ಯೋಗಿ ರಕ್ಷಿತ ದಂಪತಿಗಳ ಸುಪುತ್ರಿ. ಈ ಪುಟಾಣಿಯ ಜ್ಞಾನ ಭಂಡಾರ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಜ್ವಲಿಸಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂಬುದೇ ನಮ್ಮೆಲ್ಲರ ಹಾರೈಕೆ.
- ಸುದ್ದಿಗಳು
- ಅಂತರಾಷ್ಟ್ರೀಯ
- ತಾಜಾ ಸುದ್ದಿ
- ಶಿವಮೊಗ್ಗ
- ತೀಥ೯ಹಳ್ಳಿ
- ಭದ್ರಾವತಿ
- ರಾಜ್ಯ
- ರಾಷ್ಟ್ರೀಯ
- ಶಿಕಾರಿಪುರ
- ಮತ್ತಷ್ಟು
- ಶಿಕ್ಷಣ
- ಸಾಗರ
- ಸೊರಬ
- ಹೊಸನಗರ