ಪುಟ್ಟಸ್ವಾಮಿ ಅವರ ವ್ಯಕ್ತಿತ್ವ ಸಮಾಜಕ್ಕೆ ಮಾರ್ಗದರ್ಶನ

434

ಸಾಗರ : ಐದು ದಶಕಗಳಿಗೂ ಹೆಚ್ಚು ಕಾಲ ನ್ಯಾಯಾವಾದಿಯಾಗಿ ಕರ್ತವ್ಯ ನಿರ್ವಹಿಸಿರುವ ಎಂ.ಬಿ. ಪುಟ್ಟಸ್ವಾಮಿ ಅವರ ಸ್ಥಿತಪ್ರಜ್ಞ ವ್ಯಕ್ತಿತ್ವ ಸಮಾಜಕ್ಕೆ ಮಾರ್ಗದರ್ಶನ ವಾಗುವಂತಹzಗಿದೆ ಎಂದು ಹಿರಿಯ ವಿಭಾಗದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜಿ.ರಾಘವೇಂದ್ರ ತಿಳಿಸಿದರು.
ಇಲ್ಲಿನ ಭಾರತೀತೀರ್ಥ ಸಭಾ ಭವನದಲ್ಲಿ ಸಹದಯ ಬಳಗ, ಶಂಗೇರಿ ಶಂಕರಮಠ, ನಿವೃತ್ತ ನೌಕರರ ಸಂಘ, ಆರೋಗ್ಯ ಇಲಾಖೆ ನೌಕರರ ಒಕ್ಕೂಟ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಪತ್ರಕರ್ತ ಜಿ. ನಾಗೇಶ್ ಬರೆದಿರುವ `ಸ್ಥಿತಪ್ರಜ್ಞ ಎಂ.ಬಿ. ಪುಟ್ಟಸ್ವಾಮಿ ಕೃತಿಯನ್ನು ಬಿಡು ಗಡೆ ಮಾಡಿ ಮಾತನಾಡಿದ ಅವರು, ಜೀವನ ಚರಿತ್ರೆ ಬರೆಯಬೇಕಾದರೆ ಅನೇಕ ಸವಾಲುಗಳು ಲೇಖಕ ಎದುರಿಸ ಬೇಕಾಗುತ್ತದೆ. ಆತ್ಮಚರಿತ್ರೆ ಬರೆಯುವಾಗ ಪರಾಕಾಯ ಪ್ರವೇಶ ಮಾಡಬೇಕಾಗುತ್ತದೆ. ಆದರೆ ಕೃತಿ ರಚಿಸಿ ಬಿಡುಗಡೆಯಾದ ಮೇಲೆ ಲೇಖಕನಿಗೆ ಆತ್ಮತೃಪ್ತಿ ಸಿಗುತ್ತದೆ. ಎಂ.ಬಿ.ಪುಟ್ಟಸ್ವಾಮಿ ಅವರು ನ್ಯಾಯವಾದಿಯಾಗಿದ್ದರೂ ಪ್ರಗತಿಪರ ಕೃಷಿಕರಾಗಿ, ಸಾಮಾಜಿಕ, ಸಹಕಾರಿ, ಶೈಕ್ಷಣಿಕ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ವರು. ಎಂತಹ ಸಂದರ್ಭದಲ್ಲಿಯೂ ಕಷ್ಟ, ನೋವುಗಳಿಗೆ ಜಗ್ಗದೆ ಸಮಚಿತ್ತದಿಂದ ಸಮಾಜಮುಖಿಯಾಗಿ ಕೆಲಸ ಮಾಡಿದವರು. ಅಂತಹವರ ಆತ್ಮಚರಿತ್ರೆ ಯುವ ಸಮೂಹಕ್ಕೆ ಸ್ಪೂರ್ತಿಯಾಗುತ್ತದೆ ಎಂದರು.
ನ್ಯಾಯವಾದಿಯೊಬ್ಬರು ಯಶಸ್ವಿ ನ್ಯಾಯವಾದಿಯೊಬ್ಬರು ಆಗಬಹುದು. ಆದರೆ ಒಳ್ಳೆಯ ಲಾಯರ್ ಆಗಲು ಸಾಧ್ಯವಿಲ್ಲ. ಆದರೆ ಎಂ.ಬಿ.ಪುಟ್ಟಸ್ವಾಮಿ ಅವರು ಯಶಸ್ವಿ ನ್ಯಾಯವಾದಿ ಜೊತೆಗೆ ಒಳ್ಳೆಯ ಲಾಯರ್ ಎಂದು ಸಹ ಹೆಸರು ಗಳಿಸಿzರೆ. ಇಂತಹ ಸಾಧಕರ ಕುರಿತು ಸಮಾಜಕ್ಕೆ ಅರಿವು ಮೂಡಿಸುವ ಕೆಲಸವನ್ನು ಲೇಖಕರು ಮಾಡಿzರೆ ಎಂದರು.
ಕೊರೋನಾ ವಾರಿಯರ್ಸ್ ಗಳನ್ನು ಸನ್ಮಾನಿಸಿ ಮಾತನಾಡಿದ ಶಾಸಕ ಎಚ್.ಹಾಲಪ್ಪ ಹರತಾಳು, ಎಂ.ಬಿ. ಪುಟ್ಟಸ್ವಾಮಿ ಅವರದ್ದು ಸೌಮ್ಯ ಮತ್ತು ಗಾಂಭೀರ್ಯ ವ್ಯಕ್ತಿತ್ವ. ನನಗೆ ಪದವಿ ದಿನಗಳಲ್ಲಿ ಮರ್‍ಕಂಟೈನ್ ಲಾ ಬೋಧಿಸಿರುವ ಎಂ.ಬಿ.ಪುಟ್ಟಸ್ವಾಮಿ ಅವರದ್ದು ಆಕರ್ಷಕ ವ್ಯಕ್ತಿತ್ವ. ಅಂತಹವರ ಕುರಿತು ಲೇಖಕ ಜಿ. ನಾಗೇಶ್ ಕೃತಿ ರಚಿಸುವ ಮೂಲಕ ಅವರ ಪರಿಚಯವನ್ನು ಸಮಾಜಕ್ಕೆ ಮಾಡಿಕೊಡುವ ಸಾರ್ಥಕ ಕೆಲಸ ಮಾಡಿzರೆ ಎಂದರು.
ಕೊರೋನಾ ಸಂದರ್ಭದಲ್ಲಿ ಹಗಲಿರುಳು ಕೆಲಸ ಮಾಡುತ್ತಿರುವ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮೋಹನ್, ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ, ಆರೋಗ್ಯ ಇಲಾಖೆಯ ಶ್ರೀನಿವಾಸ್, ರೇವಣಪ್ರಸಾದ್ ಹಾಗೂ ಆಶಾ ಕಾರ್ಯಕರ್ತೆ ಶರಾವತಿ ವೈ. ಅವರನ್ನು ಸನ್ಮಾನಿಸಿರುವುದು ನಿಜಕ್ಕೂ ಸಂತೋಷದ ಸಂಗತಿ. ಸಾಗರ ತಾಲ್ಲೂಕಿನಲ್ಲಿ ಕೊರೋನಾ ಸೋಂಕು ಕಡಿಮೆ ಇದೆ ಎಂದರೆ ಅದಕ್ಕೆ ಇವರೆಲ್ಲರ ಶ್ರಮ ಕಾರಣವಾಗಿದೆ. ಅಂತಹವರನ್ನು ಗುರುತಿಸಿ, ಗೌರವಿಸಿರುವುದು ನಿಜಕ್ಕೂ ಸಾರ್ಥಕ ಕ್ಷಣವಾಗಿದೆ ಎಂದು ತಿಳಿಸಿದರು.
ಪುಸ್ತಕ ಕುರಿತು ನ್ಯಾಯವಾದಿ ಎಂ.ರಾಘವೇಂದ್ರ ಮಾತನಾಡಿದರು. ಇದೇ ಸಂದರ್ಭಧಲ್ಲಿ ೮೬ನೇ ವರ್ಷಕ್ಕೆ ಕಾಲಿರಿಸಿದ ಎಂ.ಬಿ.ಪುಟ್ಟಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಕೊರೋನಾ ಸಂದರ್ಭದಲ್ಲಿ ಅಹೋ ರಾತ್ರಿ ಕರ್ತವ್ಯ ನಿರ್ವಹಿಸುತ್ತಿರುವ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮೋಹನ್, ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ, ಆರೋಗ್ಯ ಇಲಾಖೆಯ ಶ್ರೀನಿವಾಸ್, ರೇವಣಪ್ರಸಾದ್ ಹಾಗೂ ಆಶಾ ಕಾರ್ಯಕರ್ತೆ ಶರಾವತಿ ವೈ. ಅವರನ್ನು ಸನ್ಮಾನಿಸಲಾಯಿತು.
ಲೋಕೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಜಿಧ್ಯಕ್ಷ ಮ.ಸ.ನಂಜುಂಡಸ್ವಾಮಿ, ಶಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಉಪಸ್ಥಿತರಿದ್ದರು.
ವಿ.ಶಂಕರ್ ಪ್ರಾರ್ಥಿಸಿದರು. ಎಸ್.ಬಸವರಾಜ್ ಸ್ವಾಗತಿಸಿದರು. ಕತಿಕಾರ ಜಿ. ನಾಗೇಶ್ ಪ್ರಾಸ್ತಾವಿಕ ಮಾತನಾಡಿದರು. ಪರಮೇಶ್ವರ ಕರೂರು ವಂದಿಸಿದರು. ವಿ.ಟಿ.ಸ್ವಾಮಿ ನಿರೂಪಿಸಿದರು.