ಪಿಯು ಕಾಮರ್ಸ್: ಚಿತ್ಕಲಾಗೆ ೯ನೇ ರ್‍ಯಾಂಕ್

395

ಸಾಗರ : ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಚಿತ್ಕಲಾ ವಿ. ಭಟ್ ಶೇ. ೯೮ ಫಲಿತಾಂಶ ಪಡೆಯುವ ಮೂಲಕ ರಾಜ್ಯಕ್ಕೆ ೯ನೇ ರ್‍ಯಾಂಕ್ ಪಡೆದಿzರೆ.
ಚಿತ್ಕಲಾ ವಿ. ಭಟ್ ೬೦೦ಕ್ಕೆ ೫೮೮ ಅಂಕ ಪಡೆದಿದ್ದು, ಸಂಸ್ಕೃತ ೧೦೦, ಎಕನಾಮಿಕ್ಸ್ ೧೦೦ ಹಾಗೂ ಬಿಜನೆಸ್ ಸ್ಟಡಿಯಲ್ಲಿ ೧೦೦ ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿzರೆ. ಚಿತ್ಕಲಾ ವಿ. ಭಟ್ ಸಾಗರದ ಕೆಳದಿ ರಸ್ತೆ ವಾಸಿಯಾಗಿರುವ ವೆಂಕಟೇಶ್ ಬರಿಗೆ ಮತ್ತು ಛಾಯಾ ದಂಪತಿಗಳ ಪುತ್ರಿಯಾಗಿzರೆ. ಉತ್ತಮ ಫಲಿತಾಂಶ ದಾಖಲಿಸಿದ ಚಿತ್ಕಲಾ ವಿ. ಭಟ್ ಅವರಿಗೆ ಕಾಲೇಜಿನ ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.