ಪಿಜಿಸಿಇಟಿ-ಡಿಪ್ಲೊಮಾ ಸಿಇಟಿ ಸಹಾಯವಾಣಿ ಆರಂಭ…

417

ಶಿವಮೊಗ್ಗ :- ಪದವಿ ಪೂರ್ವ ಶಿಕ್ಷಣ ಇಲಾಖೆಯು ಅಕ್ಟೋಬರ್ ೧೩ ಮತ್ತು ೧೪ರಂದು ನಡೆಯುವ ಪಿಜಿಸಿಇಟಿ ಮತ್ತು ಡಿಪ್ಲೊಮಾ ಸಿಇಟಿ ಪರೀಕ್ಷೆಗೆ ಹಾಜರಾಗುವ ಕೋವಿಡ್ ಪಾಸಿಟಿವ್ ಇರುವ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಬರೆಯಲು ಅನುಕೂಲ ವಾಗುವಂತೆ ಕುವೆಂಪು ರಸ್ತೆಯ ಜಿಲ್ಲಾ ತರಬೇತಿ ಸಂಸ್ಥೆಯನ್ನು ಕೋವಿಡ್ ಪರೀಕ್ಷಾ ಕೇಂದ್ರವನ್ನಾಗಿ ಗುರುತಿಸಿದೆ.
ನಗರದಲ್ಲಿ ೬ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಎಂ.ಟೆಕ್- ೫೪೦, ಎಂಸಿಎ-೪೮೦, ಎಂಬಿಎ- ೧೧೭೬, ಡಿಪ್ಲೊಮಾ ಸಿ.ಇ.ಟಿ-೧೧೨೦ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿರುತ್ತಾರೆ.
ಪರೀಕ್ಷೆ ಬರೆಯುವ ಕೋವಿಡ್ ಪಾಸಿಟೀವ್ ಇರುವ ವಿದ್ಯಾರ್ಥಿಗಳು ಮುಂಚಿತವಾಗಿ ತಮ್ಮ ವಿವರಗಳನ್ನು ಉಪನಿರ್ದೇಶಕರು ಪ.ಪೂ.ಶಿ. ಇಲಾಖೆ, ಮೊ. ೯೪೮೨೨೦೮೩೧೮, ದೂ. ೦೮೧೮೨-೨೭೬೯೦೪ಗಳಿಗೆ ಕರೆ ಮಾಡಿ ತಿಳಿಸುವುದು.
ಪರೀಕ್ಷೆಗೆ ಹಾಜರಾಗುವ ಇತರೆ ವಿದ್ಯಾರ್ಥಿಗಳು ಮಾಹಿತಿಗೆ ಜಿಲ್ಲಾ ನಿಯಂತ್ರಣ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ಸಹಾಯವಾಣಿ ೦೮೧೮೨-೨೭೬೯೦೪/೯೪೮೨೨ ೦೮೩೧೮ ಗಳನ್ನು ಸಂಪರ್ಕಿಸಲು ಉಪನಿರ್ದೇಕರು ತಿಳಿಸಿದ್ದಾರೆ.