ಪಾಸಿಟಿವ್ ಇಲ್ಲ ಎಂದು ನಿರ್ಲಕ್ಷ್ಯ ಸಲ್ಲದು: ಸಚಿವ ರಾಮುಲು

634

ಹೊಸನಾವಿಕ ಪತ್ರಿಕೆಗೆ ಚಂದಾದಾರರಾಗಲು ಮತ್ತು ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ: +91 948 248 2182, e-mail:hosanavika@gmail.com

ಶಿವಮೆಗ್ಗ: ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಇಲ್ಲದಿರುವುದು ಸಂತಸದ ಸಂಗತಿ. ಆದರೆ ಪಾಸಿಟಿವ್ ಇಲ್ಲವೆಂದು ನಿರ್ಲಕ್ಷ್ಯ ಬೇಡ ಎಂದು ಆರೋಗ್ಯ ಸಚಿವ ಶ್ರೀರಾಮುಲು ಮನವಿಮಾಡಿಕೊಂಡರು.
ಅವರು ಡಿಸಿ ಸಭಾಂಗಣದಲ್ಲಿ ಆರೋಗ್ಯ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಕೋವಿಡ್ ೧೯ ಇಂದಿಗೆ ನಾಳೆಗೆ ಮುಗಿಯುವುದಲ್ಲ. ಅದು ಹಲ ವರ್ಷಗಳವರಗೆ ನಮ್ಮ ಜೊತೆ ಇರುತ್ತೆ. ಹಾಗಾಗಿ ಕೇಂದ್ರ ಸರ್ಕಾರ ಕೋವಿಡ್ ೧೯ ಕುರಿತು ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಭೆ ನಡೆಸಲು ಮಾಸ್ಕ್ ಖಡ್ಡಾಯ ಎಂದು ಆರ್ಡಿನನ್ಸ್ ತರಲಿದೆ ಎಂದರು.
ಹಾಗಾಗಿ ಎಲ್ಲರೂ ಕೋವಿಡ್-೧೯ ಕುರಿತು ಎಚ್ಚರಿಕೆಯಿಂದಲೇ ಮುಂದೆ ನಡೆಯಬೇಕು ಎಂದು ಕರೆ ನೀಡಿದರು. ಬ್ಲಡ್ ಕ್ಯಾಂಪ್‌ಗಳನ್ನ ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಿದ್ದೇನೆ ಎಂದರು.
ಕೆಎಫ್‌ಡಿ ಕುರಿತು ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಮತ್ತು ಕಾಯಿಲೆ ಕುರಿತು ಸಂಶೋಧನೆ ನಡೆಯಬೇಕಿದೆ. ಶಾಸಕ ಆರಗ ಜನೇಂದ್ರ ಮತ್ತು ಹರತಾಳ ಹಾಲಪ್ಪ ನವರು ಹೇಳಿದಂತೆ ಕೆಎಫ್‌ಡಿ ಭಯ ಜಿಲ್ಲೆಯಲ್ಲಿದೆ. ಹಾಗಾಗಿ ಸಂಶೋಧನೆ ಅಗತ್ಯವೆಂದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಆಯುಷ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿಗಳು ಹಾಗೂ ಶುಶ್ರೂಷಕರು ಮತ್ತು ಎನ್.ಆರ್.ಹೆಚ್.ಎಂ ಯೋಜನೆ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರು ಹಾಗೂ ಇತರೆ ವರ್ಗದ ಕಾರ್ಮಿಕರ ಸೇವಾ ಭದ್ರತೆ ಹಾಗೂ ವೇತನ ಹೆಚ್ಚಳ ಕುರಿತಾಗಿ ಸಚಿವರಲ್ಲಿ ಮನವಿಯನ್ನು ಸಲ್ಲಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ರಾಜ್ಯದಲ್ಲಿ ಕೋವಿಡ್ ಮುಗಿದ ನಂತರ ೨೫೦೦ ವೈದ್ಯರನ್ನ ನೇಮಕ ಮಾಡಿಕೊಳ್ಳಲಾಗುವುದು. ಮೆಗ್ಗಾನ್ ಮತ್ತು ಸಿಮ್ಸ್ ನ ವೈದ್ಯರ, ಹೊರಗುತ್ತಿಗೆ ಒಳಗುತ್ತಿಗೆ ಸ್ಕ್ಯಾಫ್ ನರ್ಸ್ ನ ವೇತನ ತಾರಮ್ಯವನ್ನ ಹೋಗಲಾಡಿಸಲಾಗುವುದು ಭರವಸೆ ನೀಡಿದರು.