ಪಾಲಿಕೆಯಿಂದ ಇಂದು ವರಾಹ ಸಂಹಾರ…

524

ಶಿವಮೊಗ್ಗ: ಮಹಾನಗರಪಾಲಿಕೆ ವತಿಯಿಂದ ನಗರದಲ್ಲಿನ ಕೆಲ ಬಡಾವಣೆಗಳಲ್ಲಿ ವರಹಾ ಸಂಹಾರ ಮಾಡಲಾಯಿತು. ವಿವಿಧ ಬಡಾವಣೆಗಳಲ್ಲಿ ಸುಮಾರು ೧೦೦ರಿಂದ ೧೨೦ ಹಂದಿಗಳನ್ನ ಹಿಡಿಯಲಾಗಿಯಿತು.
ಕಳೆದ ಒಂದು ವರ್ಷಗಳಿಂದ ಪಾಲಿಕೆಯಲ್ಲಿ ಹಂದಿಗಳನ್ನು ಸೆರೆಹಿಡಿಯುವ ಕಾರ್ಯ ಸ್ಥಗಿತವಾಗಿತ್ತು. ೬ ತಿಂಗಳಿಗೊಮ್ಮೆ ಹಂದಿಗಳನ್ನು ಹಿಡಿಯುವ ಕಾರ್ಯವನ್ನ ಪಾಲಿಕೆ ನಡೆಸುತ್ತಾ ಬಂದಿದ್ದರೂ ಕಾರಾಣಾಂತರದಿಂದಾಗಿ ಇದಕ್ಕೆ ಬ್ರೇಕ್ ಹಾಕಲಾಗಿತ್ತು.
ಆದರೆ ಹಂದಿಗಳ ಹಾವಳಿಯಿಂದ ನಗರದ ಜನರು ಪಾಲಿಕೆಗೆ ಹಲವು ಬಾರಿ ಮನವಿ ಮಾಡಿಕೊಂಡು ಹಂದಿಗಳನ್ನ ಹಿಡಿಯುವಂತೆ ದೂರು ಸಲ್ಲಿಸಿದ್ದರು. ಬೇಸಿಗೆಯಲ್ಲಿ ಸಾಂಕ್ರಮಿಕ ಕಾಯಿಲೆ ಹರಡದಂತೆ ಮುನ್ನಚ್ಚರಿಕಾ ಕ್ರಮವಾಗಿ ಪಾಲಿಕೆಯ ಆಯುಕ್ತರು ಇಂದು ಹಂದಿ ಹಿಡಿಯುವ ಕೆಲಸಕ್ಕೆ ಆದೇಶ ನೀಡಿದ್ದರು.
ಆಯುಕ್ತರ ಆದೇಶದನ್ವಯ ನಗರದ ಮಂಡ್ಲಿ, ತುಂಗಾ ನಗರ, ಚಾಲುಕ್ಯ ನಗರ, ಗೋಪಾಳ, ಗೋಪಾಳ ಗೌಡ ಬಡಾವಣೆ, ವಿನೋಬ ನಗರ, ವಿನೋಬ ನಗರ ಚೌಕಿ, ಚಿಕ್ಕಲ್, ಶಾಂತಮ್ಮ ಲೇಔಟ್, ಹೊಳೆಹೊನ್ನೂರು ರಸ್ತೆಗಳಲ್ಲಿ ಹಂದಿಯನ್ನ ಹಿಡಿಯಲಾಗಿದ್ದು ಸುಮಾರು ೧೦೦-೧೨೦ ಹಂದಿಗಳನ್ನ ಹಿಡಿಯಲಾಗಿದೆ.
ಇಷ್ಟು ವರ್ಷ ತಮಿಳು ನಾಡಿನಿಂದ ಪರಿಣಿತರನ್ನು ಕರೆಯಿಸಿ ಹಂದಿಗಳನ್ನ ಹಿಡಿಯಲಾಗುತ್ತಿತ್ತು. ಆದರೆ ಕೊರೋನ ಲಾಕ್‌ಡೌನ್ ಹಿನ್ನಲೆಯಲ್ಲಿ ಹಾಸನದಿಂದ ಹಂದಿಹಿಡಿಯುವರರನ್ನ ಕರೆಯಿಸಲಾಗಿತ್ತು.
ಈ ಕಾರ್ಯಾಚರಣೆಗೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪಾಲಿಕೆ ಅಧಿಕಾರಿಗಳಾದ ಡಾ| ರೇಖಾ ಉಪಸ್ಥಿತರಿದ್ದರು.