ಪಾಲನೆಯಾಗದ ಲಾಕ್‌ಡೌನ್: ೪೬ ಪಾಸಿಟಿವ್ – ಹೆಚ್ಚುತ್ತಿದೆ ಕೊರೋನಾತಂಕ

480

ಶಿವಮೊಗ್ಗ: ಜಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಈಗಾಗಲೇ ೮೦೦ರ ಗಡಿ ದಾಟಿದ್ದು, ಜು.೧೯ರ ಭಾನುವಾರ ೪೬ ಕೋರೋನಾ ಪಾಸಿಟಿವ್ ಪ್ರಕರಣ ಪತ್ತೆ ಆಗಿದೆ.
ಜಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೮೫೭ಕ್ಕೆ ಏರಿದೆ. ಈವರೆಗೆ ೪೨೮ ಜನರು ಗುಣಮುಖರಾಗಿzರೆ.
ಭಾನುವಾರದ ೪೬ ಪಾಸಿಟಿವ್ ಪ್ರಕರಣಗಳ ಪೈಕಿ ಶಿವಮೊಗ್ಗ ತಾಲೂಕಿನ ೨೩ ಜನರು, ಶಿಕಾರಿಪುರ ತಾಲೂಕಿನ ೨೦ ಜನರು ಹಾಗೂ ಭದ್ರಾವತಿ ತಾಲೂಕಿನ ಮೂವರಿಗೆ ಕರೊನಾ ಸೋಂಕು ದೃಢಪಟ್ಟಿದೆ ಎಂದು ಜಿಡಳಿತ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಿದೆ.
ರಾಜ್ಯ ಸರ್ಕಾರ ಮತ್ತು ಜಿಡಳಿತ ಪ್ರತ್ಯೇಕವಾಗಿ ಕೋವಿಡ್ ಸೋಂಕಿತರ ವರದಿ ಬಿಡುಗಡೆ ಮಾಡುತ್ತಿದೆ. ಜಿಡಳಿತ ಒದಗಿಸುವ ಆಯಾ ದಿನದ ಮಾಹಿತಿ ಆಧರಿಸಿ ಕರೊನಾ ಅಂಕಿ ಅಂಶದ ಮಾಹಿತಿ ನೀಡಲಾಗಿದೆ. ರಾಜ್ಯದ ವರದಿಯಲ್ಲಿ ಪಾಸಿಟಿವ್ ಸಂಖ್ಯೆ ೧೦೪ ಎಂದು ವರದಿಯಾಗಿದೆ.
ಜಿಯ ಕೋವಿಡ್-೧೯ ಸ್ಟೇಟಸ್ ಹೀಗಿದೆ: ಈವರೆಗೆ ಶಿವಮೊಗ್ಗ ಜಿಯಲ್ಲಿ ೨೩,೩೯೫ ಜನರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದೆ. ೨೧,೭೬೫ ಜನರ ವರದಿ ನೆಗೆಟಿವ್ ಬಂದಿದೆ. ೮೫೭ ಪಾಸಿಟಿವ್ ಬಂದಿದೆ. ಜಿಯಲ್ಲಿ ಒಟ್ಟು ೨೩೬ ಕಂಟೈನ್‌ಮೆಂಟ್ ಜೋನ್‌ಗಳಿವೆ.