ಪಾಲಕರ ಪತ್ತೆಗಾಗಿ ಮನವಿ…

437

ಶಿವಮೊಗ್ಗ: ಸೊರಬ ತಾ. ಕೊಡಕಣಿ ಗ್ರಾಮದ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದ 15 ದಿನದ ಹೆಣ್ಣು ಮಗುವನ್ನು ಸೊರಬ ಟೌನ್ ಪೊಲೀಸ್ ಠಾಣಾಧಿಕಾರಿಗಳು ರಕ್ಷಿಸಿ ಶಿವಮೊಗ್ಗ ನಗರದ ಆಲ್ಕೊಳದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ದಾಖಲಿಸಿರುತ್ತಾರೆ.
ಮಗುವಿನ ಮುಂದಿನ ಪುನರ್ವಸತಿ ಹಿತದೃಷ್ಠಿಯಿಂದ ಮಗುವಿನ ಪಾಲಕರು/ಪೋಷಕರ ಬಗ್ಗೆ ಮಾಹಿತಿ ದೊರತಲ್ಲಿ ಸೂಕ್ತ ದಾಖಲಾತಿಯೊಂದಿಗೆ ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲಮಂದಿರ, ಆಲ್ಕೊಳ, ಶಿವಮೊಗ್ಗ ಇವರ ಕಚೇರಿಗೆ ಖುದ್ದಾಗಿ ಅಥವಾ 08182-251511 ನ್ನು ಸಂಪರ್ಕಿಸುವಂತೆ  ತಿಳಿಸಿದೆ.