ಪದವೀಧರರ ಸೊಸೈಟಿಯಿಂದ ಶೇ.೧೩ ಡಿವಿಡೆಂಡ್…

359

ಶಿವಮೊಗ್ಗ: ಪದವೀಧರರ ಸೊಸೈಟಿ ಸದಸ್ಯರಿಗೆ ಶೇ.೧೩ ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎಸ್.ಪಿ. ದಿನೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ೨೦೨೧ರ ಕ್ಯಾಲೆಂಡರ್, ಡೈರಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಂಘದ ೫೦ನೇ ವರ್ಷವು ಕಳೆದ ಸೆ.೨೧ರಿಂದ ಆರಂಭವಾಗಿದ್ದು, ವರ್ಷವಿಡೀ ವಿನೂತನ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇದರ ಸವಿನೆನಪಿಗಾಗಿ ಕೃಷಿ ನಗರದಲ್ಲಿ ಒಂದು ನಿವೇಶನವನ್ನು ಕೊಂಡು ಕಟ್ಟಡ ನಿರ್ಮಿಸಿ ಹೊಸ ಶಾಖೆ ಪ್ರಾರಂಭಿಸಲು ಉದ್ದೇಶಿಸ ಲಾಗಿದೆ. ಅಂಗವಿಕಲ, ವಿಧವೆ ಮತ್ತು ಮಾಜಿ ಸೈನಿಕ ಸದಸ್ಯರುಗಳಿಗೆ ನಿಗದಿ ಠೇವಣಿ ಮೇಲೆ ಶೇ.೦.೫೦ರಷ್ಟು ಹೆಚ್ಚಿನ ಬಡ್ಡಿ ನೀಡಲಾಗುವುದು ಹಾಗೂ ಸದಸ್ಯರು ನಿವೇಶನ ಕೊಳ್ಳಲು ಶೇ.೮.೫೦ ಬಡ್ಡಿದರದಲ್ಲಿ ಸುಮಾರು ೭೫ ಲಕ್ಷದವರೆಗೂ ಸಾಲ ನೀಡಲಾಗುವುದು ಎಂದರು.
೬೨೭೩ ಸದಸ್ಯರನ್ನು ಹೊಂದಿರುವ ಸಂಘವು ೨.೮೩ ಕೋಟಿ ರೂ.ಷೇರು ಬಂಡವಾಳ ಹೊಂದಿದೆ. ಸಂಘದ ಒಟ್ಟು ವಹಿವಾಟು ಮಾರ್ಚ್ ಅಂತ್ಯಕ್ಕೆ ೧೩೧ ಕೋಟಿ ಆಗಿದ್ದು, ೫.೧೨ ಕೋಟಿ ರೂ. ಆದಾಯ ಹೊಂದಿ ೧.೧೧ ಕೋಟಿ ರೂ.ನಿವ್ವಳ ಲಾಭ ಗಳಿಸಿದೆ. ೪೪.೩೬ ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, ೩೮.೮೨ ಕೋಟಿ ರೂ. ಸಾಲ ನೀಡಲಾಗಿದೆ ಎಂದರು.
ಪದವೀಧರರ ಸಹಕಾರ ಸಂಘದ ಸರ್ವಸದಸ್ಯರ ಸಭೆ ಡಿ.೧೩ರ ನಾಳೆ ಸವಳಂಗ ರಸ್ತೆಯ ಸರ್ಜಿ ಸಮುದಾಯ ಭವನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ನಗರದ ಕೊರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸಲಾಗುವುದು ಎಂದರು.
ಸಂಘದ ಉಪಾಧ್ಯಕ್ಷೆ ಎಸ್. ಮಮತಾ, ನಿರ್ದೆಶಕರುಗಳಾದ ಜೋಗದ ವೀರಪ್ಪ, ಹೆಚ್.ಸಿ. ಸುರೇಶ್, ಎಸ್.ಕೆ. ಕೃಷ್ಣಮೂರ್ತಿ, ಎಸ್. ರಾಜಶೇಖರ್, ಡಾ.ಯು. ಚಂದ್ರಶೇಖರ್, ಯು.ರಮ್ಯ, ಕವಿತಾ, ಕಾರ್ಯದರ್ಶಿ ಗೋಪಾಲಕೃಷ್ಣ ಉಪಸ್ಥಿತರಿದ್ದರು.