ಪದವಿ ಪರೀಕ್ಷೆ ಕೈಬಿಡಲು ಭಾರತ ವಿದ್ಯಾರ್ಥಿ ಫೆಡರೇಷನ್‌ನಿಂದ ಆಗ್ರಹ

480

ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಸೋಂಕು ದಿನೇದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವ ಯುಜಿಸಿ ವಿಶ್ವವಿದ್ಯಾಲಯಗಳ ಕ್ರಮವನ್ನು ಭಾರತ ವಿದ್ಯಾರ್ಥಿ ಫೆಡರೆಷನ್ ಖಂಡಿಸುತ್ತದೆ ಎಂದು ಸಂಚಾಲಕ ಅನಂತರಾಜ್ ಅವರು ತಿಳಿಸಿದ್ದಾರೆ.
ವಿವಿಗಳು ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳ ಹಿಂದಿನ ಸಮಿಸ್ಟರ್‌ಗಳ ಅಂಕಗಳನ್ನು ಆಧರಿಸಿ ಕೊನೆ ಸೆಮಿಸ್ಟರ್ ಪರೀಕ್ಷೆಯನ್ನು ಉತ್ತೀರ್ಣ ಮಾಡಬೇಕು, ಗ್ರಾಮೀಣ ಪ್ರದೇಶ ದಿಂದ ಬರುವಂತಹ ವಿದ್ಯಾರ್ಥಿಗಳಿಗೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಇರಲು ಹಾಸ್ಟೆಲ್, ಬಸ್ ಪಾಸ್ ವ್ಯವಸ್ಥೆ ಸೇರಿದಂತೆ ಹಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗಿದೆ.
ವಿದ್ಯಾರ್ಥಿಗಳ ಬೇಡಿಕೆಗಳನ್ನು ನಿರ್ಲಕ್ಷಿಸಿದ್ದಲ್ಲಿ ಮುಂಬರುವ ದಿನಗಳಲ್ಲಿ ಫೆಡರೇಷನ್ ನೇತೃತ್ವದಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದೆಂದು ಫೆಡರೇಷನ್‌ನ ಪ್ರಮುಖರಾದ ಲಕ್ಷ್ಮಣ್, ಇಫ್ತೇಕಾರ್ ಅಹಮದ್, ಬಿಳಿಚೋಡು, ಕುಮಾರ್, ಮೈಲೇಶ್, ಅಂಜಿನಪ್ಪ, ಸಿದ್ದೇಶ್ ಅವರುಗಳು ಎಚ್ಚರಿಕೆ ನೀಡಿದ್ದಾರೆ.