ಪಂಚಾಯ್ತಿ ಕಾರ್‍ಯದರ್ಶಿ ಎಸಿಬಿ ಬಲೆಗೆ

428

ಶಿವಮೊಗ್ಗ : ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹಣ ಬಿಡುಗಡೆ ಮಾಡಲು ಲಂಚ ಪಡೆಯುವಾಗ ಎಸಿಬಿ ದಾಳಿ ನಡೆಸಿದ್ದು ದಾಳಿಯಲ್ಲಿ ಗ್ರಾಪಂ ಕಾರ್ಯದರ್ಶಿ ಶಿವಪ್ಪ ಅವರನ್ನ ಬಂಧಿಸಲಾಗಿದೆ.
ಶಿಕಾರಿಪುರ ತಾಲೂಕು ಹೊಸೂರು ಗ್ರಾಮ ಪಂಚಾಯತಿಯ ಶಿವಪ್ಪ ಎಸಿಬಿ ದಾಳಿ ವೇಳೆ ಸಿಕ್ಕಿ ಬಿದ್ದಿzರೆ. ಶಿವಪ್ಪ ಅವರು ನರೇಗಾದ ೨.೧೦ ಲಕ್ಷ ಹಣ ಬಿಡುಗಡೆಗೆ ೮ ಸಾವಿರ ರೂಪಾಯಿ ಲಂಚ ನೀಡುವಂತೆ ಗುತ್ತಿಗೆದಾರ ಮಂಜುನಾಥ ಬಳಿ ಬೇಡಿಕೆ ಇಟ್ಟಿದ್ದರು. ಇಂದು ಹಣ ಪಡೆಯುವಾಗ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಯೇ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರ.
ಡಿವೈಎಸ್ಪಿ ಲೋಕೇಶ್ ನೇತತ್ಚದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು, ಇನ್‌ಸ್ಪೆಕ್ಟರ್ ತಿಪ್ಪೇಸ್ವಾಮಿ, ವಿರೇಂದ್ರ ಹಾಗೂ ಸಿಬ್ಬಂದಿ ಯೋಗೀಶ್ ಇಂದಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.