ನ್ಯಾಯಕ್ಕಾಗಿ ಪ್ರಯತಮನ ಮನೆಯ ಮುಂದೆ ಧರಣಿ ಕುಳಿತ ಪ್ರೇಯಸಿ

408

ಉಡುಪಿ: ಯುವತಿಯನ್ನು ಸುಮಾರು ೧೩ ವರ್ಷಗಳಿಂದ ಪ್ರೀತಿಸಿ ಮದುವೆಯ ದಿನ ಮಂಟಪಕ್ಕೆ ಬಾರದೆ ಕೈಕೊಟ್ಟ ಎಸ್ಕೇಪ್ ಆದ ಘಟನೆ ಉಡುಪಿಯಲ್ಲಿ ನಡೆದಿದೆ.
ಮಣಿಪಾಲದ ಪ್ರೇಮಿಗಳಾದ ಮಮತಾ ಮತ್ತು ಪರ್ಕಳದ ಗಣೇಶ್ ಅವರ ದಶಕದ ಪ್ರೇಮ ಕಥೆಯಿದು. ಹ್ಯಾಂಗ್ಯೋ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ನಡುವೆ ೧೩ ವರ್ಷದ ಹಿಂದೆ ಪ್ರೇಮಾಂಕುರ ವಾಗಿತ್ತು. ಈ ಅವಧಿಯಲ್ಲಿ ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದಿದೆ. ಮದುವೆಯಾಗುವುದಾಗಿ ಯುವಕ ನಂಬಿಸಿ ೧೩ ವರ್ಷ ದಿನ ದೂಡಿzನೆ.
ಎರಡು ಬಾರಿ ಅಬಾರ್ಷನ್ ಕೂಡಾ ಮಾಡಿಸಿzನೆ ಎನ್ನಲಾಗಿದ್ದು, ನ.೪ಕ್ಕೆ ಬೇರೆ ಹುಡುಗಿಯನ್ನು ಮದುವೆಯಾಗಲು ಮಹೂರ್ತ ಕೂಡ ಫಿಕ್ಸ್ ಮಾಡಿದ್ದ. ಈ ವಿಚಾರ ಪ್ರೇಯಸಿ ಮಮತಾಳಿಗೆ ಗೊತ್ತಾಗಿ, ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿzಳೆ. ಪೊಲೀಸರ ಮಧ್ಯಪ್ರವೇಶದ ನಂತರ ನ.೬ಕ್ಕೆ ಪ್ರೀತಿಸಿದ ಮಮತಾಳನ್ನೇ ಮದುವೆಯಾಗುವುದಾಗಿ ಗಣೇಶ್ ಒಪ್ಪಿಕೊಂಡಿzನೆ.
ಮದುವೆಯ ಸಂಭ್ರಮದಲ್ಲಿ ಯುವತಿಯ ಮನೆಯವರು ಎಲ್ಲ ಶಾಸ್ತ್ರಗಳನ್ನು ಮುಗಿಸಿದ್ದರು. ಯುವತಿ ಮದರಂಗಿ ಚಿತ್ತಾರ ಮಾಡಿಕೊಂಡು ಮದುವೆ ಮಂಟಪಕ್ಕೆ ಬಂದಿzಳೆ. ಆದರೆ ಯುವಕ ಕೈಕೊಟ್ಟು ಪರಾರಿ ಯಾ ಗಿzನೆ. ಆಕಾಶವೇ ಕುಸಿದು ಬಿದ್ದಂ ತಾದ ಯುವತಿ ಆಕ್ರೋಶ ಗೊಂಡು ಯುವಕನ ಮನೆ, ಸಂಬಂಧಿಕರ ಮನೆಯನ್ನೆಲ್ಲ ಪ್ರಿಯಕರನನ್ನು ಜಲಾಡಿ zಳೆ. ಯುವಕ ಒಂದು ದಿನ ಕಳೆದರೂ ಬರದಿzಗ ಆತನ ಮನೆಯ ಮುಂದೆ ಪ್ರತಿಭಟನೆ ಕೂತಿzಳೆ. ಜೀವನದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿ zಳೆ. ಕಳೆದೊಂದು ದಶಕ ದಿಂದ ಪ್ರೀತಿ ಪ್ರೇಮದ ನಾಟಕವಾಡಿ ಇದೀಗ ಕೈಕೊಟ್ಟ ಪ್ರಿಯಕರನಿಗಾಗಿ ಸಿಂಗಾರ ಗೊಂಡ ಮದುಮಗಳು ನ್ಯಾಯಕ್ಕಾಗಿ ಬೀದಿಯಲ್ಲಿ ಕುಳಿತುಕೊಂಡಿದ್ದಾಳೆ.