ನೋಟು ಬ್ಯಾನ್ ಕುರಿತು ಲೆಕ್ಕ ಕೊಟ್ಟ ಮೋದಿ

430

ನವದೆಹಲಿ: ನೋಟು ನಿಷೇಧ ನಿರ್ಧಾರದಿಂದ ಕಪ್ಪು ಹಣ ಕಡಿಮೆ ಯಾಗಿದ್ದು, ತೆರಿಗೆ ಹೆಚ್ಚಳವಾಗಿದೆ ಎಂದು ಪ್ರಧಾನಿ ಮೋದಿ ಹೇಳಿzರೆ.
ಐತಿಹಾಸಿಕ ನೋಟು ನಿಷೇಧ ನಿರ್ಧಾರಕ್ಕೆ ೪ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮೋದಿ, ಈ ನಿರ್ಧಾರದಿಂದ ಪಾರದರ್ಶಕತೆ ಹೆಚ್ಚಾಗಿದ್ದು ರಾಷ್ಟ್ರೀಯ ಅಭಿವೃದ್ಧಿಗೆ ನೆರವಾಗಿದೆ ಎಂದು ತಿಳಿಸಿzರೆ. ಟ್ವೀಟ್‌ನ ಏನು ಬದಲಾವಣೆಯಾಗಿದೆ ಎಂಬುದನ್ನು ಕೂಡ ಪ್ರಧಾನಿ ಮೋದಿ ತಿಳಿಸಿzರೆ.
ನೋಟು ನಿಷೇಧದ ಬಳಿಕ ಆಪರೇಷನ್ ಕ್ಲೀನ್ ಮನಿ ಬಳಿಕ ಸ್ವ ಮಲ್ಯ ಮಾಪನ ಮಾಡಿ ೧೩ ಸಾವಿರ ಕೋಟಿಗೂ ಅಧಿಕ ಹಣ ಪಾವತಿಯಾಗಿದೆ.
೩.೪ ಲಕ್ಷ ಜನರು ೧೦ ಲಕ್ಷ ಮತ್ತು ಅದಕ್ಕಿಂತ ಹೆಚ್ಚು ಹಣವನ್ನು ಠೇವಣಿ ಇಟ್ಟಿದ್ದರು. ಈ ಮೂಲಕ ಐಟಿ ರಿಟರ್ನ್ ಸಲ್ಲಿಸಿದವರ ವಿವರ ಬಹಿರಂಗಗೊಂಡಿತು. ಇದಾದ ಬಳಿಕ ೨.೯ ಲಕ್ಷ ಜನ ತೆರಿಗೆಯಾಗಿ ೬,೫೩೧ ಕೋಟಿ ರೂ. ಹಣವನ್ನು ಪಾವತಿ ಮಾಡಿzರೆ.
ನೋಟು ನಿಷೇಧದ ಬಳಿಕ ತೆರಿಗೆ/ ಜಿಡಿಪಿ ಅನುಪಾತ ಹೆಚ್ಚಳವಾಗಿದೆ. ೨೦೧೫-೧೬ರ ಹಣಕಾಸು ವರ್ಷದಲ್ಲಿ ೧೬.೪೧ ಲಕ್ಷ ರೂ. ಮಲ್ಯದ ನೋಟುಗಳು ಚಲಾವಣೆಯಲ್ಲಿತ್ತು ೨೦೧೪-೧೫ಕ್ಕೆ ಹೋಲಿಸಿದರೆ ಶೇ.೧೪.೫೧ ಹೆಚ್ಚಳವಾಗಿತ್ತು. ಇದೇ ಲೆಕ್ಕಾಚಾರವನ್ನು ಪರಿಗಣಿಸಿದ್ದರೆ ೨೦೧೯-೨೦ರ ವೇಳೆಗೆ ದೇಶದಲ್ಲಿ ೨೮.೪೯ ಲಕ್ಷ ಕೋಟಿ ರೂ. ಮಲ್ಯದ ನೋಟುಗಳು ಚಲಾವಣೆಯಲ್ಲಿ ಇರಬೇಕಿತ್ತು. ಆದರೆ ಸದ್ಯ ೨೦೧೯-೨೦ರ ಹಣಕಾಸು ವರ್ಷದಲ್ಲಿ ೨೪.೨೦ ಲಕ್ಷ ಕೋಟಿ ರೂ. ಹಣ ಚಲಾವಣೆಯಲ್ಲಿದೆ. ಡಿಜಿಟಲ್ ಹಣ ಪಾವತಿ ಹೆಚ್ಚಳದಿಂದಾಗಿ ನೋಟುಗಳ ಸಂಖ್ಯೆ ಕಡಿಮೆಯಾಗಿದೆ.
ದೇಶದಲ್ಲಿ ಕಪ್ಪುಹಣ, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಯನ್ನು ಮಟ್ಟ ಹಾಕುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ೨೦೧೬ರ ನವೆಂಬರ್ ೮ರ ರಾತ್ರಿ ಏಕಾಏಕಿಯಾಗಿ ೫೦೦ರೂ ಹಾಗೂ ೧,೦೦೦ ರೂ. ನೋಟುಗಳನ್ನು ನಿಷೇಧ ಮಾಡಿದ್ದನ್ನು ಸ್ಮರಿಸಬಹುದಾಗಿದೆ.