ನೀರು ಕೇಳುವ ನೆಪದಲ್ಲಿ ಒಂಟಿ ಮನೆ ದರೋಡೆಗೆ ವಿಫಲ ಯತ್ನ

423

ಹೊನ್ನಾಳಿ: ಮರಿಯಮ್ಮನಹಳ್ಳಿ- ಶಿವಮೊಗ್ಗ ರಾಜ್ಯ ಹೆzರಿ ೨೫ರಲ್ಲಿನ ತಾಲೂಕಿನ ದಿಡಗೂರು ಗ್ರಾಮದ ಹೊರವಲಯದಲ್ಲಿ, ಹೊನ್ನಾಳಿ -ಶಿವಮೊಗ್ಗ ರಸ್ತೆ ಬದಿಯಲ್ಲಿನ ಒಂಟಿ ಮನೆ ದರೋಡೆ ಯತ್ನ ವಿಫಲಗೊಂಡಿದೆ.
ಮೂರು ಜನರ ಗುಂಪೊಂದು ನೀರು ಕೇಳುವ ನೆಪದಲ್ಲಿ ಬುಧವಾರ ರಾತ್ರಿ ಮನೆ ಬಾಗಿಲು ಬಡಿದಿzರೆ. ಆಗ ಮನೆ ಮಾಲೀಕ ಡಿ.ಜಿ. ಬಸವರಾಜಪ್ಪ ಅವರ ಮೇಲೆ ದುರುಳರು ಹ ಮಾಡಿzರೆ. ಮನೆಯವರು ಪೊಲೀಸರಿಗೆ ಫೋನ್ ಮಾಡುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿzರೆ.
ಘಟನೆ ವಿವರ: ದಿಡಗೂರು ಗ್ರಾಮದ ಡಿ.ಜಿ. ಬಸವರಾಜಪ್ಪ ತಮ್ಮ ಪತ್ನಿ ನಿರ್ಮಲಮ್ಮ ಜೊತೆ ಗ್ರಾಮದ ಹೊರವಲಯದ ಹೊಲದ ಮನೆಯಲ್ಲಿ ವಾಸಿಸುತ್ತಿದ್ದು, ಅವರ ಮಗ ಆಂಜನೇಯ ತನ್ನ ಮಗ ಯಶವಂತನೊಂದಿಗೆ ಬುಧವಾರ ತನ್ನ ತಂದೆ ಬಸವರಾಜಪ್ಪ ಅವರ ಮನೆಗೆ ಆಗಮಿಸಿ ಅಲ್ಲಿಯೇ ತಂಗಿzರೆ.
ಬುಧವಾರ ತಡ ರಾತ್ರಿ ಸುಮಾರು ೨.೧೫ರ ಹೊತ್ತಿಗೆ ಒಂಟಿ ಮನೆ ಬಳಿ ಬಂದ ೩ ಜನರ ಗುಂಪು ಮನೆಯ ವರನ್ನು ಕೂಗಿ ಕರೆದಿದೆ. ಮನೆಯ ಮಾಲೀಕ, ೬೬ ವರ್ಷ ವಯಸ್ಸಿನ ಡಿ.ಜಿ. ಬಸವರಾಜಪ್ಪ ಅವರು ಎದ್ದು ಬಂದು ಕಿಟಕಿಯಿಂದ ನೋಡಿzರೆ. ಅವರ ಜೊತೆ ಅವರ ಮೊಮ್ಮಗ ಯಶವಂತ(೯) ಕೂಡ ಎದ್ದು ಬಂದಿzನೆ. ಡಿ.ಜಿ. ಬಸವರಾಜಪ್ಪ ಏನು ಬೇಕು ಎಂದು ಕಿಟಕಿಯಿಂದಲೇ ಕೇಳಿzರೆ. ಆಗ, ದುಷ್ಕರ್ಮಿಗಳ ಗುಂಪಿನವರು ತಮ್ಮ ಕಾರು ಪಂಕ್ಚರ್ ಆಗಿದೆ. ಜಾಕ್ ಇದ್ದರೆ ಕೊಡಿ ಎಂದು ಕೇಳಿzರೆ. ಮನೆಯ ಮಾಲೀಕ ಇಲ್ಲ ಎಂದು ಉತ್ತರಿಸಿzರೆ. ಆಗ ಹಾರೆಕೋಲು ಇದ್ದರೆ ಕೊಡಿ ಎಂದಿzರೆ. ಅದಕ್ಕೂ ಇಲ್ಲ ಎಂದಿzರೆ. ಆಗ ದುರುಳರು ಕುಡಿಯಲು ನೀರು ಕೊಡಿ ಎಂದು ಕೇಳಿzರೆ. ಮನೆ ಮಾಲೀಕ ಬಸವರಾಜಪ್ಪ ಅವರು ನೀರು ತಂದು ಕೊಡಲು ಬಾಗಿಲು ತೆರೆಯುತ್ತಿದ್ದಂತೆ ಗುಂಪಿನಲ್ಲಿದ್ದ ಒಬ್ಬಾತ ಯಶವಂತನ ಕುತ್ತಿಗೆಗೆ ಚಾಕು ಹಿಡಿದಿzನೆ. ಮತ್ತೊಬ್ಬ ಕಬ್ಬಿಣದ ರಾಡ್‌ನಿಂದ ಬಸವರಾಜಪ್ಪ ಅವರ ತಲೆಗೆ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ರಕ್ತ ಸುರಿಯಲಾರಂಭಿಸಿದೆ. ಬಸವರಾಜಪ್ಪ ಅವರ ಮಗ ಆಂಜನೇಯನಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ನೋವಿನಿಂದ ಬಸವರಾಜಪ್ಪ ಅವರು ಕೂಗಿಕೊಂಡಾಗ ಪತ್ನಿ ನಿರ್ಮಲ ಹಾಗೂ ಮಗ ಆಂಜನೇಯ ಆಗಮಿಸಿzರೆ. ಕೂಡಲೇ ಪೊಲೀಸರಿಗೆ ಫೋನ್ ಮಾಡು ಎಂದು ಆಂಜನೇಯನಿಗೆ ಬಸವರಾಜಪ್ಪ ಹೇಳಿzರೆ. ಪೊಲೀಸ್ ಸಹಾಯವಾಣಿ ೧೧೨ಕ್ಕೆ ಫೋನ್ ಮಾಡಲು ಮುಂದಾದಾಗ ಹೆದರಿದ ದುಷ್ಕರ್ಮಿಗಳ ಗುಂಪು ದರೋಡೆಗಾಗಿ ತಂದಿದ್ದ ವಸ್ತುಗಳನ್ನು ಸ್ಥಳದ ಬಿಟ್ಟು ಪರಾರಿಯಾಗಿzರೆ ಎಂದು ತಿಳಿದುಬಂದಿದೆ. ಗುಂಪಿನಲ್ಲಿದ್ದ ೩ ಜನರು ಟಿ ಷರ್ಟ್ ಮತ್ತು ಪ್ಯಾಂಟ್ ಧರಿಸಿದ್ದರು. ಕನ್ನಡದಲ್ಲಿ ಮಾತನಾಡುತ್ತಿದ್ದರು ಎಂದು ಬಸವರಾಜಪ್ಪ ತಿಳಿಸಿದರು.
ಸುದ್ದಿ ತಿಳಿದ ಕೊಡಲೇ ಸ್ಥಳಕ್ಕೆ ಹೊಯ್ಸಳ ತುರ್ತು ಸೇವಾ ವಾಹನ ಆಗಮಿಸಿದೆ. ಕರ್ತವ್ಯನಿರತ ಸಿಬ್ಬಂದಿ ಕೆ.ಎಲ್. ಉಮೇಶ್ ಮತ್ತು ಹನುಮಂತಪ್ಪ ಗಾಯಾಳುಗಳನ್ನು ಸಕಾಲದಲ್ಲಿ ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ ಕಾರಣಕ್ಕೆ ತಂದೆ, ಮಗ ಪ್ರಾಣಾಪಾಯ ದಿಂದ ಪಾರಾಗಿzರೆ ಎಂದು ಪಿಎಸ್‌ಐ ಬಸನಗೌಡ ಬಿರಾದಾರ ವಿವರಿಸಿದರು.
ಎಸ್ಪಿ ಹನುಮಂತರಾಯ, ಡಿವೈಎಸ್ಪಿ ಡಾ. ಸಂತೋಷ್, ಸಿಪಿಐ ಟಿ.ವಿ. ದೇವರಾಜ್, ಪಿಎಸ್‌ಐ ಬಸನಗೌಡ ಬಿರಾದಾರ ಘಟನೆ ನಡೆದ ದಿಡಗೂರು ಗ್ರಾಮದ ಹೊರವಲಯದ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಾಣ ಉಳಿಸಿದ ಬೀಟ್ ಪೊಲೀಸರು ಅಂಟಿಸಿದ್ದ ಮಾಹಿತಿ ಚೀಟಿ
ಬೀಟ್ ಪೊಲೀಸರು ಅಂಟಿಸಿದ್ದ ಮಾಹಿತಿ ಚೀಟಿ ದಿಡಗೂರು ಹೊರವಲಯದ ಮನೆ ದರೋಡೆ ಯತ್ನದ ಸಂದರ್ಭದಲ್ಲಿ ಪ್ರಾಣ ಉಳಿಸಿದೆ. ಒಂಟಿ ಮನೆ ಎಂಬ ಕಾರಣಕ್ಕೆ ಈ ಭಾಗದ ಬೀಟ್ ಪೊಲೀಸರು ಕೆಲ ದಿನಗಳ ಹಿಂದೆ ಪೊಲೀಸ್ ಅಧಿಕಾರಿಗಳು, ಪೊಲೀಸ್ ಠಾಣೆ, ಹೊಯ್ಸಳ ಸಹಾಯವಾಣಿಯ ಫೋನ್ ನಂಬರ್‌ಗಳನ್ನೊಳಗೊಂಡ ಚೀಟಿಯನ್ನು ಮನೆಗೆ ಅಂಟಿಸಿ ಬಂದಿದ್ದರು. ಇದು ದರೋಡೆ ಯತ್ನ ಸಂದರ್ಭದಲ್ಲಿ ಮನೆ ಮಾಲೀಕರ ಸಹಾಯಕ್ಕೆ ಬಂದಿದೆ. ಮನೆಯವರು ತುರ್ತು ಸೇವಾ ಸ್ಪಂದನಾ ವ್ಯವಸ್ಥೆ ಸಹಾಯವಾಣಿ ಸಂಖ್ಯೆ ೧೧೨ಕ್ಕೆ ಕರೆ ಮಾಡಿzರೆ. ತಕ್ಷಣ ಆಗಮಿಸಿದ ಪೊಲೀಸರು ಗಾಯಾಳುಗಳ ಪ್ರಾಣ ಉಳಿಸುವಲ್ಲಿ ನೆರವಾಗಿzರೆ.