ನಿಜವಾದ ಹೀರೋಗಳು ನಮ್ಮ ಯೋಧರೇ ಹೊರತು ಸಿನಿಮಾ ನಟರಲ್ಲ: ಎಂಪಿಆರ್

426

ನ್ಯಾಮತಿ : ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ನಾಡಿನ ಜನತೆ ತೃಪ್ತಿಪಡುವಂತ ಪಾರದರ್ಶಕ ಆಡಳಿತವನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿzರೆ. ಪ್ರವಾಹ ಬಂದಾಗಲ್ಲೂ ಎದೆಗುಂದದೆ ಹಾಗೂ ಕರೋನಾ ಬಂದಾಗಲ್ಲೂ ಆತಂಕ ಪಡದೆ ಎಲ್ಲವನ್ನೂ ಸರ್ವ ರೀತಿಯಲ್ಲಿ ನಿಭಾಯಿಸಿರುವವರ ಸಾಲಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲಿಗರಾಗಿ ನಿಲ್ಲುತ್ತಾರೆ ಎಂದು ಸಿ.ಎಂ.ರಾಜಕೀಯ ಕಾರ್ಯದರ್ಶಿ , ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಅವರು ನ್ಯಾಮತಿ ತಾಲೂಕಿನ ದಾನಿಹಳ್ಳಿ ಗ್ರಾಮದಲ್ಲಿ ೪೫ ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿ ಮತ್ತು ಕೆಂಚಿಕೊಪ್ಪ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆ ಸೇರಿದಂತೆ ೧.೬೭ ಕೋಟಿ ವೆಚ್ಚದಲ್ಲಿ ವಿವಿಧ ಅಭಿವದ್ಧಿ ಮಾಡಿಸಿದ್ದು, ೪೫ ಲಕ್ಷ ವೆಚ್ಚದ ಸಿಸಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಪ್ರವಾಹ ಹಾಗೂ ಕರೋನಾದಂತಹ ಸಂಕಷ್ಟದಲ್ಲೂ ರಾಜ್ಯವನ್ನು ಅಭಿವೃದ್ಧಿ ಪಥದೆಡೆಗೆ ಕೊಂಡೋಯ್ದಿದಿzರೆ ಎಂದ ಅವರು, ಬಿಜೆಪಿ ಸರ್ಕಾರ ಮಾಡಿರುವ ಅಭಿವಧ್ದಿ ಸಾಧನೆಗಳನ್ನು ಸಹಿಸದ ವಿಪಕ್ಷಗಳು ಸುಖಾಸುಮ್ಮನೆ ಆರೋಪ ಮಾಡುತಿವೆ ಅದರಲ್ಲು ಹುರುಳಿಲ್ಲ ಎಂದರು.
ಕಾರ್ಗಿಲ್ ವಿಜಯೋತ್ಸವ : ಜಿಹಾದಿಗಳ ವೇಷದಲ್ಲಿ ಬಂದಿದ್ದ ಪಾಕಿಸ್ಥಾನದ ಸೈನಿಕರನ್ನು ಹಾಗೂ ನಸುಳುಕೋರರನ್ನು ನಮ್ಮ ವೀರ ಯೋಧರು ಹೆಡೆಮುರಿ ಕಟ್ಟಿದ ಈ ಕಾರ್ಗಿಲ್ ವಿಜಯ ದಿವಸವನ್ನು ನಾವೆಲ್ಲರೂ ಸಂಭ್ರಮಿಸಬೇಕಾದ ದಿನ,ಈ ದಿನವನ್ನು ಯೋಧರ ಸ್ಮರಣೆಗಾಗಿ ಮೀಸಲಿಡೋಣ ಎಂದರು.
ಅಂದಿನ ಪ್ರಧಾನಿ ಅಟಲ್ ಜಿ, ಭದ್ರತಾ ಸಲಹೆಗಾರ ಬ್ರಿಜೇಶ್ ಮಿಶ್ರ, ರಕ್ಷಣಾ, ಗೃಹ ಸಚಿವರು ಹಾಗೂ ಮೂರು ಸೇನಾ ಮುಖ್ಯಸ್ಥರು ಏಕ ಮನಸ್ಕರಾಗಿ ಶ್ರಮಿಸಿದ್ದರಿಂದ ನಮಗೆ ಕಾರ್ಗಿಲ್‌ನಲ್ಲಿ ವಿಜಯ ಲಭಿಸಿತು. ಹಾಗೆಯೇ ಚೀನಾ ಕೂಡ ನಮ್ಮ ಮೇಲೆ ಮೊನ್ನೆ ಮೊನ್ನೆ ಗಡಿ ದಾಟಿ ಬಂದಾಗಲ್ಲೂ ನಮ್ಮ ಹೆಮ್ಮೆಯ ಪ್ರಧಾನಿ ಮೋದಿಯವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ನಮ್ಮ ವೀರ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿದ್ದು ಅಲ್ಲದೆ,ಸೈನಿಕರ ರಕ್ಷಣೆಗಾಗಿ ಬೇಕಾದ ಎ ವ್ಯವಸ್ಥೆ ಮಾಡಿ ಬಂದ ಪ್ರಧಾನಿಗಳ ಬಗ್ಗೆ ದೇಶವಾಸಿಗಳಲ್ಲಿ ಮತ್ತಷ್ಟು ಗೌರವ ಹೆಚ್ಚಾಯಿತು ಎಂದರು.
ಯುವಕರು ಸಿನಿಮಾ ಹಾಗೂ ಕ್ರಿಕೆಟ್ ಕಲಿಗಳನ್ನು ತಮ್ಮ ಹಿರೋ ಎಂದಿಕೊಂಡಿದ್ದಿರಿ. ತಮ್ಮ ಪ್ರಾಣವವನ್ನೂ ಲಕ್ಕಿಸದೆ ಗಡಿಯಲ್ಲಿ ನಿಂತು ಹೋರಾಟ ಮಾಡುವ ಧೀರ ಯೋಧರು ನಮ್ಮ ಹಿರೋಗಳು, ಅವರೇ ನಮ್ಮ ಆದರ್ಶವಾಗಬೇಕೆ ಹೊರತು ಸಿನಿಮಾ ನಟರಲ್ಲ ಎಂದರು.
ಕೋವಿಡ್ ಆತಂಕದ ನಡುವೆಯೂ ಅವಳಿ ತಾಲೂಕಿನಲ್ಲಿ ಅಭಿವೃಧ್ಧಿ ಕಾರ್ಯಗಳು ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದ್ದು , ಅವಳಿ ತಾಲೂಕಿನ ಎಚ್.ಕಡದಕಟ್ಟೆ, ಸೊರಟೂರು , ಮಾದನಬಾವಿ, ದಾನಿಹಳ್ಳಿ, ಆರಂಡಿ, ಕೆಂಚಿಕೊಪ್ಪ ಸೇರಿದಂತೆ ೧೯ ಗ್ರಾಮಗಳಲ್ಲಿ ೫.೬೭ ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಮಾಡಿಸಿರುವುದರಿಂದ ದೂಳು ಮುಕ್ತ ಗ್ರಾಮಗಳಾಗಿವೆ. ಈ ಗ್ರಾಮಗಳಲ್ಲಿ ಮತ್ತೆ ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮಸ್ಥರು ಮನವಿ ಮಾಡಿzರೆ. ಅವಳಿ ತಾಲೂಕಿನ ಅಭಿವೃಧ್ಧಿಗೆ ಸರಕಾರ ಮತ್ತಷ್ಟು ಅನುದಾನ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮುಖ್ಯಮಂತ್ರಿಗಳಿಗೂ ಮನವಿ ಮಾಡಿ ಹಣ ಬಿಡುಗಡೆ ಮಾಡುವಂತೆ ವಿನಂತಿಸಿದ್ದೇನೆ ಎಂದು ಹೇಳಿದರು.
ಜಿ.ಪಂ.ಅಧ್ಯಕ್ಷೆ ದೀಪಾ ಜಗದೀಶ್, ಜಿ.ಪಂ.ಸದಸ್ಯೆ, ತಾ.ಪಂ.ಅಧ್ಯಕ್ಷ ,ಉಪಾಧ್ಯಕ್ಷ , ಎಪಿಎಂಸಿ ಅಧ್ಯಕ್ಷ ಸೇರಿದಂತೆ ಇತರರು ಉಪಸ್ಥಿತರಿದ್ದರು.