ನಾಳೆ ಭಾರತ್ ಬಂದ್…

646

ಬೆಂಗಳೂರು: ಕೇಂದ್ರದ ವಿರುದ್ಧ ಅನ್ನದಾತನ ಹೋರಾಟದ ಕಿಚ್ಚು, ನೂತನ ಕೃಷಿ ಮಸೂದೆಯ ವಿಚಾರಕ್ಕೆ ದೆಹಲಿಯಂಗಳದಲ್ಲಿ ಈಗ ಹಸಿರು ಹೋರಾಟದ ಕಾವು. ಈಗ ಇದು ಬೆಂಗಳೂರಿನಲ್ಲೂ ಆರಂಭವಾಗಲಿದ್ದು, ರಾಜ್ಯದ ವಿವಿಧೆಡೆಗಳಿಂದ ರಾಜಧಾನಿಯತ್ತ ಅನ್ನದಾತರು ದೌಡಾಯಿಸುತ್ತಿದ್ದಾರೆ.
ಇಂದು ಅಧಿವೇಶನದ ಬೆನ್ನ ನಾಳೆ ಭಾರತ್ ಬಂದ್ ಪ್ರಯುಕ್ತ ರೈತ ಸಂಘಟನೆಗಳು ಕರ್ನಾಟಕ ಬಂದ್ ಗೂ ಕರೆಕೊಟ್ಟಿದೆ. ಈ ಮಧ್ಯೆ ನಾಳೆಯುಂದ ಕುರುಬೂರು ಶಾಂತಕುಮಾರ್ ಹಾಗೂ ಐಕ್ಯ ಹೋರಾಟ ಸಮಿತಿಯಿಂದ ಮರ್ಯ ಸರ್ಕಲ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಯೂ ನಡೆಯಲಿದೆ. ನಾಳೆ ಸರ್ಕಾರದ ವಿರುದ್ಧ ಹೋರಾಟದ ರಣಕಹಳೆಯನ್ನು ರಾಜ್ಯದಲ್ಲೂ ಅನ್ನದಾತರು ಮೊಳಗಿಸಲಿzರೆ.
ಬೆಂಗಳೂರಲ್ಲಿ ಬುಧವಾರ ರೈತರು ಸಿಡಿದೇಳಲಿzರೆ. ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಅನ್ನದಾತರು ಬರಲಿzರೆ. ರಾಜಧಾನಿಗೆ ನಾಳೆಯೇ ಸಾವಿರಾರು ರೈತರು ಬರಲಿzರೆ. ಡಿ.೯ ರಂದು ಬೆಳಗ್ಗೆ ರೈಲು ಮೂಲಕ ಸಾವಿರಾರು ಮಂದಿ ರೈಲ್ವೆ ನಿಲ್ದಾಣಕ್ಕೆ ಎಂಟ್ರಿ ಕೊಡಲಿದ್ದು, ೯ ರಂದು ೧೦ ಸಾವಿರ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿzರೆ.
ಬುಧವಾರ ೧೧ ಗಂಟೆಗೆ ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೂ ಬೃಹತ್ ಪ್ರತಿಭಟನೆ ನಡೆಯಲಿದೆ. ನಂತರ ವಿಧಾನಸೌಧಕ್ಕೆ ಅನ್ನದಾತರು ಮುತ್ತಿಗೆ ಹಾಕಲಿzರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬಂದ್‌ಗೆ ವಾಟಾಳ್ ನೇತತ್ವದ ಕನ್ನಡ ಒಕ್ಕೂಟ, ರೈತ ಹೋರಾಟಗಾರರು, ಎಪಿಎಂಸಿ ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಅಂಗನವಾಡಿ ನೌಕರರ ಸಂಘ ಹಾಗೂ ಸಿಐಟಿಯು ಅವರು ಬೆಂಬಲ ಕೊಡಲಿzರೆ. ಇನ್ನು ಕರವೇ ಪ್ರವೀಣ್ ಶೆಟ್ಟಿ ಬಣ, ಓಲಾ, ಊಬರ್ ಟ್ಯಾಕ್ಸಿ, ಸಾರಿಗೆ ನೌಕರರ ಸಂಘ, ಹೋಟೆಲ್ ಮಾಲೀಕರ ಸಂಘ, ಕರ್ನಾಟಕ ರಾಜ್ಯ ಟ್ರಾವೆಲ್ ಮಾಲೀಕರ ಸಂಘ ನೈತಿಕ ಬೆಂಬಲ ನೀಡಲಿದೆ. ಆದರೆ ಆಟೋ ಸಂಘಟನೆಗಳು ಮಾತ್ರ ತಟಸ್ಥ ನೀತಿ ತಾಳಿವೆ.
ಬಂದ್ ದಿನ ಏನಿರುತ್ತೆ..?
* ಹೋಟೆಲ್ ಇರುತ್ತೆ.
* ಬಸ್
* ಆಟೋ
* ಒಲಾ ಉಬರ್ ಕ್ಯಾಬ್
* ದಿನಸಿ ಅಂಗಡಿ ಗಳು.
* ಆಸ್ಪತ್ರೆಗಳು.
ಏನಿರಲ್ಲ..?
* ರಾಜ್ಯ ಹೆzರಿಗಳು ಬಂದ್ ಸಾಧ್ಯತೆ.
* ಕೆಲವಡೆ ವಾಹನ ತಡೆಯುವ ಪ್ರಯತ್ನಗಳು ಆಗಬಹುದು.
* ಮೆಜೆಸ್ಟಿಕ್ ರೈಲ್ವೇ ನಿಲ್ದಾಣ, ಫ್ರೀಡಂ ಪಾರ್ಕ್ ಮಾರ್ಗವಾಗಿ ವಿಧಾನಸೌಧಕ್ಕೆ ಮುತ್ತಿಗೆ ಯೋಜನೆ ರೈತರದ್ದು ಹೀಗಾಗಿ ಈ ಭಾಗದಲ್ಲಿ ವಾಹನ ಸಂಚಾರ ವ್ಯತ್ಯಯ.
* ಜಿದ್ಯಾಂತ ರೈತರ ಪ್ರತಿಭಟನೆಯಿರೋದ್ರಿಂದ ಮಾರ್ಕೆಟ್‌ಗಳಲ್ಲಿ ಸೊಪ್ಪು ತರಕಾರಿಗಳ ಪೂರೈಕೆಯಲ್ಲಿ ಕೊರತೆ ಎದುರಾಗುವ ಸಾಧ್ಯತೆ.