ನಾಳೆಯಿಂದ ಅಡಿಕೆ ವಹಿವಾಟು ಆರಂಭಕ್ಕೆ ಮನವಿ

434

ಸಾಗರ : ತಾಲ್ಲೂಕಿನ ರೈತರ ಹಿತದೃಷ್ಟಿಯಿಂದ ಗುರುವಾರದಿಂದ ಅಡಿಕೆ ವಹಿವಾಟು ಪ್ರಾರಂಭ ಮಾಡು ವಂತೆ ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಮನವಿ ಮಾಡಿzರೆ.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ರೈತ ಭವನದಲ್ಲಿ ಅಡಿಕೆ ವರ್ತಕರು, ದಲರು ಮತ್ತು ವ್ಯಾಪಾರಸ್ಥರ ಜೊತೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿzರೆ. ಈ ಸಂಕಷ್ಟ ಸಂದರ್ಭದಲ್ಲಿ ಅಡಿಕೆ ವ್ಯಾಪಾರ ನಿಲ್ಲಿಸಿದರೆ ಬೆಳೆಗಾರರು ಇನ್ನಷ್ಟು ಸಮಸ್ಯೆ ಎದುರಿಸುವಂತೆ ಆಗುತ್ತದೆ ಎಂದರು.
ಈಗಾಗಲೆ ಎಪಿಎಂಸಿ ಕಾಯ್ದೆ ತಿದ್ದುಪಡಿ ಸಂಬಂಧ ಸಂಸದರು, ಶಾಸಕ ಎಚ್.ಹಾಲಪ್ಪ ಹರತಾಳು, ಅಡಿಕೆ ಟಾಸ್ಕ್‌ಫೋರ್ಸ್ ಅಧ್ಯಕ್ಷ ಅರಗ eನೇಂದ್ರ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಕೆ.ಎಸ್. ಅವರ ಜೊತೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲಿಯೆ ಎಪಿಎಂಸಿ ಕಾಯ್ದೆ ತಿದ್ದುಪಡಿ ಪುನರ್ ಪರಿಶೀಲಿಸುವಂತೆ ಮುಖ್ಯಮಂತ್ರಿ ಗಳನ್ನು ಸಹ ಭೇಟಿ ಮಾಡಿ ಮನವಿ ಮಾಡಲಾಗುತ್ತದೆ.
ಕೊರೋನಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ವಿಳಂಬವಾಗುತ್ತಿದೆ. ಆದ್ದರಿಂದ ಜುಲೈ ತಿಂಗಳ ಅಂತ್ಯದವರೆಗೆ ಅಡಿಕೆ ವರ್ತಕರು ಅಡಿಕೆ ವಹಿವಾಟು ನಡೆಸಿದರೆ ರೈತರಿಗೆ ಅನುಕೂಲ ವಾಗುತ್ತದೆ. ಗುರುವಾರ ಮತ್ತು ಸೋಮವಾರ ಅಡಿಕೆ ವಹಿವಾಟು ಪ್ರಾರಂಭ ಮಾಡುವಂತೆ ಮನವಿ ಮಾಡಿದ ಚೇತನರಾಜ್, ಸರ್ಕಾರಕ್ಕೆ ಪ್ರಾಂಗಣದ ಒಳಗೆ ನಡೆಯುವ ಅಡಿಕೆ ವಹಿವಾಟಿಗೆ ಶೂನ್ಯ ತೆರಿಗೆಯನ್ನು, ಪ್ರಾಂಗಣದ ಹೊರಗೆ ನಡೆಯುವ ವಹಿವಾಟಿಗೆ ತೆರಿಗೆ ವಿಧಿಸುವಂತೆ ಮನವಿ ಸಹ ಮಾಡಲಾಗಿದೆ ಎಂದರು.
ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಬಸವರಾಜ್, ಈಗಾಗಲೆ ರಾಜ್ಯ ಸರ್ಕಾರ ಅಡಿಕೆ ಸೆಸ್ ಶೇ. ೧.೫ ವಿಧಿಸಿದೆ ಎಂದು ಹೇಳಲಾಗುತ್ತಿದ್ದರೂ, ಅಧಿಕೃತ ಆದೇಶ ಹೊರಗೆ ಬಂದಿಲ್ಲ. ಈಗಾಗಲೆ ಜಿ.ಎಸ್.ಟಿ. ಪಾವತಿ ಮಾಡುತ್ತಿದ್ದು, ಹೊಸ ತೆರಿಗೆ ಹಾಕಿದರೆ ವ್ಯಾಪಾರಸ್ಥರು ಸಂಕಷ್ಟ ಎದುರಿಸಬೇಕಾ ಗುತ್ತದೆ. ನಾವು ಎಪಿಎಂಸಿ, ಅಡಿಕೆ ಬೆಳೆಗಾರರು, ಸರ್ಕಾರದ ವಿರೋಧಿಯಲ್ಲ. ಇತರೆ ಯಾವ ರಾಜ್ಯದಲ್ಲೂ ಮಾರುಕಟ್ಟೆ ಪ್ರಾಂಗಣದ ಒಳಗೆ ತೆರಿಗೆ ವಿಧಿಸುತ್ತಿಲ್ಲ. ಆದರೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ತೆರಿಗೆ ಪಾವತಿ ಮಾಡುವಂತೆ ಸೂಚನೆ ನೀಡಲಾಗು ತ್ತಿದೆ. ಗುರುವಾರದಿಂದ ಅಡಿಕೆ ವಹಿವಾಟು ಪ್ರಾರಂಭಿಸುವ ಬಗ್ಗೆ ಅಡಿಕೆ ಛೇಂಬರ್ ಜೊತೆ ಚರ್ಚೆ ಮಾಡಿ ಬೆಳೆಗಾರರಿಗೆ ಪೂರಕವಾದ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು.
ವರ್ತಕ ಅಶ್ವಿನಿಕುಮಾರ್ ಮಾತನಾಡಿ, ಸರ್ಕಾರ ಹೊಸಹೊಸ ತೆರಿಗೆಗಳನ್ನು ವಿಧಿಸಬಾರದು. ಈಗಾಗಲೆ ಕೇಂದ್ರ ಸರ್ಕಾರ ಒಂದು ದೇಶ, ಒಂದು ತೆರಿಗೆ ಪದ್ದತಿ ಜರಿಗೆ ತಂದ ಮೇಲೆ ಹೊಸ ತೆರಿಗೆ ವಿಧಿಸುವುದು ಸರಿಯಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಿಎಸ್‌ಟಿ ಹೆಸರಿನಲ್ಲಿ ತೆರಿಗೆ ಸಂಗ್ರಹಿಸುತ್ತಿದ್ದು, ಇದರಲ್ಲಿ ಸ್ವಲ್ಪಭಾಗವನ್ನು ಎಪಿಎಂಸಿ ಅಭಿವದ್ದಿಗೆ ನೀಡಬೇಕು. ವರ್ತಕರು ಮತ್ತು ಬೆಳೆಗಾರರ ಮೇಲೆ ಆಗುತ್ತಿರುವ ಹೊರೆ ತಪ್ಪಿಸಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಆಪ್ಸ್‌ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಗೌಡ, ದಲಾಲರ ಸಂಘದ ಅಧ್ಯಕ್ಷ ಎಂ.ವಿ.ಮೋಹನ್, ಕೆ.ಎಸ್.ಸುಬ್ರಾವ್, ತೋಟಗಾರ್‍ಸ್ ಅಧ್ಯಕ್ಷ ಕೆ.ಸಿ.ದೇವಪ್ಪ, ಎಪಿಎಂಸಿ ಸದಸ್ಯ ರವಿಕುಮಾರ್ ಇನ್ನಿತರರು ಮಾತನಾಡಿದರು.
ಮ್ಯಾಮೆಸ್ ನಿರ್ದೇಶಕರಾದ ದಿನೇಶ್ ಬರದವಳ್ಳಿ, ತಿಮ್ಮಪ್ಪ ಶ್ರೀಧರಪುರ, ವೆಂಕಟೇಶ್, ಅಣ್ಣಪ್ಪ ಭೀಮನೇರಿ, ಆರ್.ಎಸ್.ಗಿರಿ ಇನ್ನಿತರರು ಹಾಜರಿದ್ದರು.