ನವುಲೆಯ ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನಕ್ಕೆ ಭಕ್ತರಿಗಿಲ್ಲ ಪ್ರವೇಶ

267

ಶಿವಮೊಗ್ಗ : ನಗರಕ್ಕೆ ಸಮೀಪದ ಸವಳಂಗ ರಸ್ತೆಯಲ್ಲಿರುವ ನವುಲೆ ಸಂಕಟ ವಿಮೋಚನ ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನವನ್ನು ಸರ್ಕಾರದ ಆದೇಶದ ಮೇರೆಗೆ ಇಂದಿನಿಂದ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ದೇಶ, ರಾಜ್ಯ ಹಾಗೂ ಜಿ ಯಲ್ಲಿ ಮಹಾಮಾರಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿ ರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪಕ ಹೆಚ್ ಚೈತನ್ಯ ಪ್ರಕಟಣೆಯಲ್ಲಿ ತಿಳಿಸಿzರೆ.
ಸರ್ಕಾರದ ಮುಂದಿನ ಆದೇಶದವರೆಗೆ ಈ ತಾತ್ಕಾಲಿಕ ದೇವಸ್ಥಾನ ಬಂದ್ ಆಗಲಿದ್ದು, ನಿತ್ಯ ಪೂಜ ಕೈಂಕರ್ಯಗಳು ನಿಗದಿತ ಸಮಯದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು. ಈ ಸಮಯದಲ್ಲಿ ದೇವಸ್ಥಾನದ ವ್ಯವಸ್ಥಾಪಕರು, ಅರ್ಚಕರು ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗದವರು ಮಾತ್ರ ಭಾಗವಹಿಸಲಿzರೆ ಎಂದು ತಿಳಿಸಿದರು.
ಸದ್ಭಕ್ತರು ಈ ಕುರಿತು ಸಹಕರಿಸಬೇಕಾಗಿ ಅವರು ಕೋರಿzರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೯೮೮೬೧೯೮೯೧೮, ೯೧೬೪೬೩೩೯೯೬ ಗೆ ಸಂಪರ್ಕಿಸಬೇಕಾಗಿ ಅವರು ಕೋರಿzರೆ.