ನರಸೀಪುರದ ನಾಟಿ ಔಷಧಿಗೆ ಬ್ರೇಕ್…

398

ಶಿವಮೊಗ್ಗ: ಸಾಗರ ತಾಲೂಕು ನರಸೀಪುರದಲ್ಲಿ ನೀಡಲಾಗುತ್ತಿದ್ದ ನಾಟಿ ಔಷಧಿಗೆ ಬ್ರೇಕ್ ಬಿದ್ದಿದೆ. ನಿನ್ನೆ ನಡೆದ ಸಾಗರ ಉಪವಿಭಾಗಾಧಿಕಾರಿ ನೇತೃತ್ವ ದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದೆ.
ಉಪವಿಭಾಗಾಧಿಕಾರಿ ನಾಗರಾಜ್ ಎಲ್ ನೇತೃತ್ವದಲ್ಲಿ ಗ್ರಾಮಸ್ಥರು, ನಾಟಿ ಔಷಧಿ ವೈದ್ಯ ರಾಘವೇಂದ್ರರವರ ಸೇರಿದಂತೆ ಅನೇಕ ಅಧಿಕಾರಿಗಳು ಸೇರಿದ ಸಭೆಯಲ್ಲಿ ಕೊರೋನ ಹಿನ್ನಲೆಯಲ್ಲಿ ಕೊರಿಯರ್ ಮೂಲಕ ರೋಗಿಗಳಿಗೆ ಔಷಧ ನೀಡಬೇಕು. ಗ್ರಾಮಸ್ಥರು ನಾಟಿ ವೈದ್ಯರ ವಿರುದ್ಧ ಅವರ ಪ್ರತಿಭಟನೆ ಇಲ್ಲ. ಆದರೆ ಹೊರಗಿನಿಂದ ಬರುವವರಿಗೆ ಗ್ರಾಮದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಮೂಲಭೂತ ಸೌಕರ್ಯಗಳನ್ನ ಒದಗಿಸಿದ ನಂತರ ಔಷಧ ನೀಡಬೇಕು ಎಂಬುದು ಗ್ರಾಮಸ್ಥರ ವಾದವಾಗಿರು ವುದರಿಂದ ಉಪವಿಭಾಗಾಧಿಕಾರಿ ನಾಗರಾಜ್.ಎಲ್ ರವರು ಈ ವ್ಯವಸ್ಥೆ ಮಾಡಿಕೊಂಡು ಕೊರೋನ ಮುಗಿದ ನಂತರ ಔಷಧ ನೀಡಲು ಸೂಚಿಸಿರುವುದಾಗಿ ಸಭೆ ತೀರ್ಮಾನಿಸಿದೆ.
ಇದು ಕೇವಲ ನಾಮಕಾವಸ್ಥೆಗೆ ಮಾತ್ರ ತೀರ್ಮಾನವೋ ಅಥವ ಜಿಡಳಿತದ ನೈಜ ಕಾರ್ಯ ವೈಖರಿಯೋ ಕಾದು ನೋಡಬೇಕಿದೆ. ಇದರ ಜೊತೆಗೆ ನಾಟಿ ವೈದ್ಯರು ಎಂಬುದಕ್ಕೆ ನಾಟಿ ವೈದ್ಯರಾದ ರಾಘವೇಂದ್ರರವರಿಗೆ ಸರ್ಕಾರಿ ಪ್ರಮಾಣ ಪತ್ರ ಲಭ್ಯವಿಲ್ಲದಿರುವುದು ಸಭೆಯಲ್ಲಿ ತಿಳಿದುಬಂದಿದೆ.
ಸಭೆಯಲ್ಲಿ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಟಿಹೆಚ್ ಒ ಡಾ.ಮೋಹನ್, ಡಿವೈರಸ್ಪಿ ವಿನಾಯಕ್ ಎನ್.ಶಟಗೇರಿ, ಇನ್ ಸ್ಪೆಕ್ಟರ್ ಸುನೀಲ್ ಕುಮಾರ್ ಮೆದಲಾದ ಅಧಿಕಾರಿಗಳಿದ್ದರು. ಶಿವಮೊಗ್ಗ: ಸಾಗರ ತಾಲೂಕು ನರಸೀಪುರದಲ್ಲಿ ನೀಡಲಾಗುತ್ತಿದ್ದ ನಾಟಿ ಔಷಧಿಗೆ ಬ್ರೇಕ್ ಬಿದ್ದಿದೆ. ನಿನ್ನೆ ನಡೆದ ಸಾಗರ ಉಪವಿಭಾಗಾಧಿಕಾರಿ ನೇತೃತ್ವ ದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದೆ.
ಉಪವಿಭಾಗಾಧಿಕಾರಿ ನಾಗರಾಜ್ ಎಲ್ ನೇತೃತ್ವದಲ್ಲಿ ಗ್ರಾಮಸ್ಥರು, ನಾಟಿ ಔಷಧಿ ವೈದ್ಯ ರಾಘವೇಂದ್ರರವರ ಸೇರಿದಂತೆ ಅನೇಕ ಅಧಿಕಾರಿಗಳು ಸೇರಿದ ಸಭೆಯಲ್ಲಿ ಕೊರೋನ ಹಿನ್ನಲೆಯಲ್ಲಿ ಕೊರಿಯರ್ ಮೂಲಕ ರೋಗಿಗಳಿಗೆ ಔಷಧ ನೀಡಬೇಕು. ಗ್ರಾಮಸ್ಥರು ನಾಟಿ ವೈದ್ಯರ ವಿರುದ್ಧ ಅವರ ಪ್ರತಿಭಟನೆ ಇಲ್ಲ. ಆದರೆ ಹೊರಗಿನಿಂದ ಬರುವವರಿಗೆ ಗ್ರಾಮದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಮೂಲಭೂತ ಸೌಕರ್ಯಗಳನ್ನ ಒದಗಿಸಿದ ನಂತರ ಔಷಧ ನೀಡಬೇಕು ಎಂಬುದು ಗ್ರಾಮಸ್ಥರ ವಾದವಾಗಿರು ವುದರಿಂದ ಉಪವಿಭಾಗಾಧಿಕಾರಿ ನಾಗರಾಜ್.ಎಲ್ ರವರು ಈ ವ್ಯವಸ್ಥೆ ಮಾಡಿಕೊಂಡು ಕೊರೋನ ಮುಗಿದ ನಂತರ ಔಷಧ ನೀಡಲು ಸೂಚಿಸಿರುವುದಾಗಿ ಸಭೆ ತೀರ್ಮಾನಿಸಿದೆ.
ಇದು ಕೇವಲ ನಾಮಕಾವಸ್ಥೆಗೆ ಮಾತ್ರ ತೀರ್ಮಾನವೋ ಅಥವ ಜಿಡಳಿತದ ನೈಜ ಕಾರ್ಯ ವೈಖರಿಯೋ ಕಾದು ನೋಡಬೇಕಿದೆ. ಇದರ ಜೊತೆಗೆ ನಾಟಿ ವೈದ್ಯರು ಎಂಬುದಕ್ಕೆ ನಾಟಿ ವೈದ್ಯರಾದ ರಾಘವೇಂದ್ರರವರಿಗೆ ಸರ್ಕಾರಿ ಪ್ರಮಾಣ ಪತ್ರ ಲಭ್ಯವಿಲ್ಲದಿರುವುದು ಸಭೆಯಲ್ಲಿ ತಿಳಿದುಬಂದಿದೆ.
ಸಭೆಯಲ್ಲಿ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಟಿಹೆಚ್ ಒ ಡಾ.ಮೋಹನ್, ಡಿವೈರಸ್ಪಿ ವಿನಾಯಕ್ ಎನ್.ಶಟಗೇರಿ, ಇನ್ ಸ್ಪೆಕ್ಟರ್ ಸುನೀಲ್ ಕುಮಾರ್ ಮೆದಲಾದ ಅಧಿಕಾರಿಗಳಿದ್ದರು.