ನಮ್ಮ ಮಕ್ಕಳನ್ನು ರಕ್ಷಿಸುವವರು ಯಾರು..?!

378

ಈಗಿನ ಕಾಲದ ಮಕ್ಕಳು ಎಷ್ಟು ಫಾಸ್ಟ್ ಎಂಬ ಮಾತು ನೀವು ಕೇಳಿರುವಿರಿ. ಈಗಿನ ಜನರೇಷನ್ ಮಕ್ಕಳೇ ತುಂಬಾನೇ ಫಾಸ್ಟ್. ಫಾಸ್ಟ್ ಅಷ್ಟೇ ಅಲ್ಲ ಸ್ಪೀಡ್ ಮತ್ತು ಸ್ಟೈಲ್. ೨೧ನೇ ಶತಮಾನದ ಮಕ್ಕಳು ಡಿಜಿಟಲ್ ಮಕ್ಕಳು ಮಾಹಿತಿ ತಂತ್ರeನದ ನೂತನ ಆವಿಷ್ಕಾರಗಳು ಮಕ್ಕಳನ್ನು ಈ ರೀತಿ ಮಾಡಿವೆ.
ಈಗಿನ ಮಕ್ಕಳಿಗೆ ಕಂಪ್ಯೂಟರ್, ಇಂಟರ್‌ನೆಟ್, ವಿಡಿಯೋ ಗೇಮ್‌ಗಳೆಂದರೆ ಇನ್ನಿಲ್ಲದ ಕುತೂಹಲ. ಇಲ್ಲಿ ಅವರಿಗೆ ಮಾಹಿತಿ ಇದೆ, ಮನರಂಜನೆ ಇದೆ. ಹಾಗೆ ಕ್ರಿಯೇಟಿವಿಟಿಗೆ ಸಜ್ಜುಗೊಳಿಸಲು ಸಾಕಷ್ಟು ಅವಕಾಶವಿದೆ. ಪೋಷಕರಿಗೆ ತಿಳಿಯದಿರುವುದು ಈಗಿನ ಮಕ್ಕಳಿಗೆ ತಿಳಿದಿರುತ್ತದೆ. ನಾವೇ ಅವರ ಮಟ್ಟಕ್ಕೆ ಅಪ್‌ಡೆಟ್ ಆಗಬೇಕಿದೆ.
ಈಗಿನ ಚಿಕ್ಕಮಕ್ಕಳು ಆಟವಾಡುವುದು ಎಲೆಕ್ಟ್ರಿಕಲ್ ರಿಮೋಟ್ ಕಂಟ್ರೋಲ್ ಟ್ರೈನ್, ಕಾರ್, ಹೆಲಿಕಾಪ್ಟರ್ ಗೊಂಬೆಗಳ ಮುಖಾಂತರ. ಎಲ್‌ಕೆಜಿ ಮಕ್ಕಳಿಗೆ ಏರೋಪ್ಲೇನ್ ಮತ್ತು ಹೆಲಿಕಾಪ್ಟರ್ ನಡುವಿನ ವ್ಯತ್ಯಾಸ ತಿಳಿದಿದೆ. ೭-೮ನೇ ತರಗತಿಯ ಮಕ್ಕಳಿಗೆ ಹೊಸ ಮಾದರಿಯ ಆಟೋಮೊಬೈಲ್, ಗ್ಯಾಜೆಡ್‌ಗಳು ತಿಳಿದಿರುತ್ತದೆ. ಮೊಬೈಲ್ ಉಪಯೋಗಿಸುವುದು ಆಟಿಕೆಯಷ್ಟೇ ಸುಲಭವಾಗಿದೆ. ಮೊಬೈಲ್‌ನಲ್ಲಿ ಏನುಂಟು ಏನಿಲ್ಲವೆಂಬುದು ಮಕ್ಕಳಿಗೆ ಗೊತ್ತು. ಇನ್ನು ಮನೆಯಲ್ಲಿ ಟಿ.ವಿ. ಕಂಪ್ಯೂಟರ್ ಇರುವುದರಿಂದ ಟಾಕಿಂಗ್, ವಾಕಿಂಗ್, ಡ್ರೆಸಿಂಗ್, ಡ್ಯಾನ್ಸಿಂಗ್ ಮತ್ತು ಡೈಲಾಗ್ ಡೆಲಿವರಿ ಸ್ಟೈಲುಗಳನ್ನು ಕಾಲಕಾಲಕ್ಕೆ ಬದಲಾಯಿಸುತ್ತಾರೆ.
ಆಗಿನ ಚಿಣ್ಣಿದಾಂಡು, ಗೋಲಿ, ಲಗೋರಿ, ಕಬಡ್ಡಿ ಕಡಿಮೆಯಾಗಿ ಇವರ ಆಟಗಳೆ ಕಂಪ್ಯೂಟರ್ ಮುಂದೆ ವಿಡಿಯೋ ಗೇಮಿಂಗ್ ಸೆಂಟರ್‌ಗಳಲ್ಲಿ.
ಲ್ಯಾಪ್‌ಟಾಪ್, ಡೆಸ್ಕ್‌ಟಾಪ್‌ಗಳ ಮೂಲಕ ಅಂತಜಲದಲ್ಲಿ ಹಡಿದಾಡುವ ಮಕ್ಕಳು ಏನೇನೆ ನೋಡುತ್ತಾರೆಂಬ ಬಗ್ಗೆ ಪಾಲಕರಿಗೆ ತಿಳಿಯುವುದಿಲ್ಲ.
ಒಂದು ಸಮೀಕ್ಷೆಯ ಪ್ರಕಾರ;
೧. ಎಂಟರಿಂದ ಹನ್ನೊಂದು ವರ್ಷದ ಮಕ್ಕಳು ಶೇ.೫೨ರಷ್ಟು ೫ ಗಂಟೆಗಳ ಕಾಲ ಆನ್‌ಲೈನ್ ಚಾಟಿಂಗ್ ಗೇಮ್ ಶೋನಲ್ಲಿ ಕಾಲಕಳೆದರೆ ಶೇ.೩೦ರಷ್ಟು ೫ಗಂಟೆ ಕಾಲ ನೆಟ್‌ನಲ್ಲಿ ಕಾಲಕಳೆಯುತ್ತಾರೆ.
೨. ೧೨ ರಿಂದ ೧೫ ವರ್ಷದ ಮಕ್ಕಳು ಶೇ.೫೮ ನೆಟ್‌ನಲ್ಲಿ ಶೇ.೩೨ ರಷ್ಟು ಕಂಪ್ಯೂಟರ್‌ನಲ್ಲಿ ಶೇ.೧೦ ರಷ್ಟು ಅಭ್ಯಾಸದಲ್ಲಿ ಕಾಲಕಳೆಯುತ್ತಾರೆ.
೩. ೧೬ ರಿಂದ ೧೮ ವರ್ಷದವರು ಶೇ.೫೬ ರಷ್ಟು ಚಾಟಿಂಗ್ ಗೇಮ್ಸ್‌ನಲ್ಲಿ ಶೇ. ೩೬ ರಷ್ಟು ನೆಟ್‌ನಲ್ಲಿ ಜಲಡುತ್ತಾರೆ.
೪. ಭಾರತದ ಯುವಜನತೆ ವಿಡಿಯೋ ಗೇಮ್ಸ್ ನಲ್ಲಿ ವಾರಕ್ಕೆ ೧೫ ತಾಸುಗಳಿಗೂ ಹೆಚ್ಚು ಕಾಲ ನಿರತರಾಗಿರುತ್ತಾರೆ.
ಇಂದಿನ ಪೋಷಕರಿಗೆ ತಮ್ಮ ದುಡಿಮೆಯ ಬಗ್ಗೆ ಹೆಚ್ಚು ಲಕ್ಷ್ಯವಿರುವುದರಿಂದ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗದೆ ಮನೆಕೆಲಸದವರನ್ನು ಅಥವಾ ಅಜ್ಜ ಅಜ್ಜಿಯರನ್ನು ನಂಬುವ ಸ್ಥಿತಿ ಬಂದಿದೆ. ಮನೆಯವರೆ ಟಿ.ವಿ. ನೋಡುತ್ತಾ ಕುಳಿತೆ ಮಕ್ಕಳೂ ಜೊತೆಗೂಡುತ್ತಾರೆ. ಟಿ.ವಿ. ಸೀರಿಯಲ್ ಗೀಳು ಹಚ್ಚಿಕೊಂಡ ಮಕ್ಕಳಿಗೆ ಮಾತು ಸರಿಯಾಗಿ ಬರುವುದಿಲ್ಲ. ಭಾವನೆಗಳನ್ನು ಮರೆಯುತ್ತಾರೆ. ಬರೀ ಅನುಕರಣೆ ಮಾತ್ರ ಅವರಲ್ಲಿ ಪ್ರತಿಬಿಂಬಿಸುತ್ತದೆ. ಕೌಟುಂಬಿಕ ಬಾಂಧವ್ಯ ದೂರವಾಗುತ್ತದೆ.
ಮೊಬೈಲ್ ಕೇವಲ ಸಂಪರ್ಕ ಸಾಧನವಾಗದೇ ಚಾಟಿಂಗ್‌ಗಾಗಿ, ಮೇಸೇಜ್ ಸಂವಹನಕ್ಕೆ, ಹಾಡುಗಳನ್ನು ಕೇಳಲಿಕ್ಕೆ , ಅಶ್ಲೀಲ ದಶ್ಯಗಳನ್ನು ನೋಡುವುದಕ್ಕೆ ಹೆಚ್ಚು ಉಪಯೋಗವಾಗುತ್ತದೆ. ಇದರಿಂದ ಮಕ್ಕಳು ಇತರರ ಜೊತೆ ಬೆರೆಯುವದರಲ್ಲಿ ಹಿಂಜರಿಯುತ್ತಾರೆ. ಶಾಲೆಯ ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ನಿರಾಸಕ್ತಿ ಹೊಂದುತ್ತಾರೆ. ಇಂಥವರ ಮನೋಸ್ಥಿತಿಯಲ್ಲಿ ಹಠಾತ್ ಬದಲಾವಣೆಗಳಾಗುತ್ತವೆ. ಸಿಟ್ಟು, ಖಿನ್ನತೆ, ಹಿಂಜರಿತ, ಭಿನ್ನ ಲಿಂಗಿಗಳೊಡನೆ ಋಣಾತ್ಮಕ ವಿಚಾರಗಳು ಇವೆ ಮೊಬೈಲ್‌ನಲ್ಲಿ ಮಾತನಾಡುವ ಮಕ್ಕಳ ಲಕ್ಷಣಗಳು.
ಈ ರೀತಿಯ ಮಾನಸಿಕ ಅಸ್ವಸ್ಥತೆ, ವರ್ತನೆ ಕಂಡುಬಂದರೆ ಪೋಷಕರು ಅವರೊಡನೆ ಮಾತನಾಡಿ ಮುಂದೆ ಆಗುವ ಪರಿಣಾಮಗಳ ಬಗ್ಗೆ ಎಚ್ಚರಿಕೆ ಕೊಡಬೇಕು. ಮೊಬೈಲ್ ದುರ್ಬಳಕೆಯ ಬಗ್ಗೆ ಎಚ್ಚರವಹಿಸಬೇಕು.
ಆದಷ್ಟು ದುಬಾರಿ ಬೆಲೆಯ ಹೆಚ್ಚು ಅನುಕೂಲಗಳಿರುವ ಮೊಬೈಲ್ ಕೊಡಿಸಬಾರದು. ಮೊಬೈಲ್ ಉಪಯೋಗಿಸುವ ಸಮಯದ ಚೌಕಟ್ಟನ್ನು ವಿಧಿಸಬೇಕು. ಹೆಚ್ಚಿಗೆ ಮೇಸೆಜ್ ಕಳಿಸುವುದನ್ನು ಪ್ರತಿಬಂಧಿಸಬೇಕು. ಮಕ್ಕಳಿಗೆ ತಿಳಿಯದ ಹಾಗೆ ಮೊಬೈಲ್ ಪರಿಶೀಲಿಸಬೇಕು. ತಂದೆ ತಾಯಿಗಳು ವಾರಕ್ಕೊಮ್ಮೆ ಅವರ ಶಾಲೆಗೆ ಹೋಗಿ ಶಿಕ್ಷಕರನ್ನು ಕಂಡು ತಮ್ಮ ಮಕ್ಕಳ ಪ್ರಗತಿ ನಡವಳಿಕೆಗಳ ಬಗ್ಗೆ ವಿಚಾರಿಸುವುದು ಅವಶ್ಯ. ಟಿ.ವಿ. ವೀಕ್ಷಣೆಗೆ ಮಿತಿ ಹಾಕಬೇಕು. ಕೊಠಡಿಯಲ್ಲಿ ಒಬ್ಬರೇ ಕಂಪ್ಯೂಟರ್ ಅಂತಜಲ ವೀಕ್ಷಿಸುವುದನ್ನ ತಡೆಹಾಕಬೇಕು. ಮಕ್ಕಳೊಂದಿಗೆ ಕುಳಿತು ಊಟ ಮಾಡುವುದನ್ನು ರೂಢಿಸಬೇಕು. ಅಂದಿನ ಶಾಲಾ ಚಟುವಟಿಕೆಗಳ ಬಗ್ಗೆ ಕೇಳಿ ಅವರಲ್ಲಿ ಉತ್ಸಾಹ ಮೂಡಿಸಬೇಕು.
ಇಂದು ಟಿ.ವಿ. ಜಲಗಳ ವಿರುದ್ಧ ಬರುತ್ತಿರುವ ದೂರಿನಲ್ಲಿ ಬಹುಪಾಲು ಹಿಂಸೆ ಮತ್ತು ಲೈಂಗಿಕ ಅಂಶಗಳ ವಿರುದ್ಧವಿದೆ. ಇಂಥ ದೃಶ್ಯಗಳನ್ನು ಸರ್ಕಾರ ನಿಯಂತ್ರಿಸಬೇಕು. ಶಾಲಾ ಕಾಲೇಜುಗಳಲ್ಲಿ ಶಿಕ್ಷಕರಾದಿಯಾಗಿ ಮಕ್ಕಳು ಮೊಬೈಲ್ ಉಪಯೋಗಿಸುವುದನ್ನು ಕಡ್ಡಾಯವಾಗಿ ಸರ್ಕಾರ ನಿಷೇಧಿಸಬೇಕು. ಶಿಕ್ಷಕರಿಗಾಗಿ ಪ್ರತಿ ಶಾಲೆಗಳಲ್ಲಿ ಸ್ಥಿರದೂರವಾಣಿ ಒದಗಿಸಬೇಕು. ಪಾಲಕರು ವಿದ್ಯಾರ್ಥಿಗಳನ್ನು, ವಿದ್ಯಾರ್ಥಿಗಳು ಪಾಲಕರನ್ನು ಸಂಪರ್ಕಿಸುವುದಾದರೆ ಸ್ಥಿರ ದೂರವಾಣಿ ಮೂಲಕ ಸಂಪರ್ಕಿಸಬೇಕು.
೧೯೭೦ ರಿಂದ ೧೯೯೦ರ ಅವಧಿಯಲ್ಲಿ ೧೫ ರಿಂದ ೨೦ ವಯಸ್ಸಿನ ಮಕ್ಕಳ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದ್ದು ಈಗ ಅದು ಮೂರುಪಟ್ಟಾಗಿದೆ. ಸ್ವಯಂ ದೂಷಣೆ, ಅವಮಾನ, ವ್ಯತಿರಿಕ್ತ ಮನೋಭಾವ ಪ್ರೇಮ ಪ್ರಕರಣ ಆತ್ಮಹತ್ಯೆಗೆ ಕಾರಣವಾಗಿವೆ. ಕೆಲವೊಂದು ಸಲ ಭಾವನೆಗಳನ್ನು ಹಂಚಿಕೊಳ್ಳಲಾಗದೇ ಕಾಡುವ ಒಂಟಿತನವು ಕಾರಣವಾಗಬಹುದು.
ಇಂದು ಹದಿಹರೆಯದವರಲ್ಲದೇ ಅಪ್ರಾಪ್ತ ವಯಸ್ಕರು ಸಹ ಆಧುನಿಕ ಜೀವನ ಶೈಲಿಯಿಂದ ತಪ್ಪು ದಾರಿಗೆ ಹೋಗುತ್ತಿzರೆ. ಇಂಥವರು ಸ್ನೇಹಿತರ, ಸಿನಿಮಾ ಅಥವಾ ಅಂತಜಲದ ಮೂಲಕ ಅಪೂರ್ಣ ಮಾಹಿತಿಯನ್ನು ಹೊಂದುತ್ತಾರೆ. ಈ ಸಂದರ್ಭದಲ್ಲಿ ತಂದೆ ತಾಯಿಗಳ ಪಾತ್ರ ದ್ವಿಗುಣವಾಗುತ್ತದೆ. ಕೆಲವು ಮಕ್ಕಳು ಪರಿಸರ ಜಗತಿ ಉಳ್ಳವರಾಗಿ ಮನೆಯಲ್ಲಿ ಯಾರದರೂ ಧೂಮಪಾನ ಮಾಡುತ್ತಿದ್ದರೆ ಬುದ್ಧಿ ಹೇಳುವುದರಲ್ಲಿಯೂ, ಪ್ಲಾಸ್ಟಿಕ್ ಬಳಕೆಯ ಬಗ್ಗೆ ಆಗುವ ಅನಾಹುತವನ್ನು ತಿಳಿಸುವುದರಲ್ಲಿ ಇzರೆ.
ಮಕ್ಕಳಿಗೆ ಚಿಕ್ಕಂದಿನಿಂದಲೂ ಸ್ವಾತಂತ್ರ್ಯ ಮತ್ತು ಸ್ವಚ್ಚಾಚಾರದ ಅಂತರದ ಬಗ್ಗೆ ಅರಿವು ಮೂಡಿಸಬೇಕು. ಅವರಿಗೆ ಏನೇ ತೊಂದರೆ ಬಂದರೂ ತಮ್ಮ ಬಳಿ ನಿರ್ಭಯದಿಂದ ಹೇಳಿಕೊಳ್ಳಬೇಕೆಂಬ ಆಶ್ವಾಸನೆ ಕೊಡಬೇಕು. ಮಾನಸಿಕ ಸ್ಥೈರ್ಯ ತುಂಬಬೇಕು. ಮಕ್ಕಳಿಗೆ ಆತ್ಮವಿಶ್ವಾಸ, ಪ್ರೇರಣೆ, ಸ್ಪಷ್ಟ ಮನೋವೃತ್ತಿ, ನಿರ್ದಿಷ್ಟ ಗುರಿ ಸಕಾರಾತ್ಮಕ ಚಿಂತನೆ ಮತ್ತು ಸುತ್ತಲಿನ ಮನೆಯ ಪರಿಸ್ಥಿತಿಯ ವಾಸ್ತವಾಂಶಗಳ ಅರಿವನ್ನು ಪೋಷಕರು ಮತ್ತು ಶಿಕ್ಷಕರು ಮಾಡಬೇಕು. ಮನೆ ಶಾಲೆ ಮತ್ತು ಮನಗಳಲ್ಲಿ ಇಂಥ ಪರಿಸರ ಇzಗ ಮಕ್ಕಳು ದೈಹಿಕವಾಗಿ ಮಾನಸಿಕವಾಗಿ ಸದಢರಾಗಲು ಸಾಧ್ಯ.

ಯು.ಎನ್ ಸಂಗನಾಳಮಠ
ವಿಶ್ರಾಂತ ಉಪನ್ಯಾಸಕರು
ಹೊನ್ನಾಳಿ. ಮೊ:೯೨೪೨೮೭೯೦೨೮