ನಮ್ಮೂರಿಗೆ ಅಕೇಶಿಯಾ ಮರ ಬೇಡ : ಮಾಜಿ ಸಿಎಂಗೆ ಮನವಿ

364

ಶಿವಮೊಗ್ಗ : ಭದ್ರಾವತಿ ಎಂಪಿಎಂಗೆ ನೀಡಲಾದ ಅರಣ್ಯ ಭೂಮಿಯನ್ನ ಖಾಸಗಿಯವರಿಗೆ ನೀಡದಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಹಾಗೂ ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ವನ್ನ ಬೆಂಬಲಿಸಬೇಕೆಂದು ಎಂದು ಒತ್ತಾಯಿಸಿ ಹೋರಾಟ ಒಕ್ಕೂಟ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ನವರಿಗೆ ಮನವಿ ಸಲ್ಲಿಸಿದೆ.
ಶಿವಮೊಗ್ಗ, ದಾವಣಗೆರೆ ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಯಲ್ಲಿ ಒಟ್ಟು ಎಂಪಿಎಂಗೆ ೩೩ ಸಾವಿರ ಹೆಕ್ಟೇರ್ ಭೂಮಿಯನ್ನ ಭದ್ರಾವತಿ ಎಂಪಿಎಂ ಕಾರ್ಖಾನೆಗೆ ಆರಂಭದಲ್ಲಿ ೪೦ ವರ್ಷ ಲೀಸ್‌ಗೆ ಬಿಟ್ಟುಕೊಡಲಾಗಿತ್ತು. ನಂತರ ಅದರಲ್ಲಿ ಅರಣ್ಯ ವನ್ಯಜೀವಿ ಭೂಮಿ ಎಂದು ಹೇಳಿ ಎಂಪಿಎಂಗೆ ಕೇವಲ ೨೦೦೦೦೫.೪೨ ಹೆಕ್ಟೇರ್ ಭೂಮಿಗೆ ಉಳಿಸಿಕೊಳ್ಳಲಾಯಿತು.
ಭದ್ರಾವತಿಯ ಎಂಪಿಎಂಯನ್ನ ಒಂದು ವೇಳೆ ಖಾಸಗೀಕರಣಗೊಂಡರೆ ಅರಣ್ಯ ಭೂಮಿಯನ್ನ ಖಾಸಗಿ ಗೊಳಿಸುವ ಹಾಗೆ ಇಲ್ಲವೆಂದು ಲೀಸ್ ಅಗ್ರಿಮೆಂಟ್ ನಲ್ಲಿ ಉಖವಿದೆ. ಆದರೆ ಲೀಸ್ ಅಗ್ರಿಮೆಂಟ್ ಅವಧಿ ಆಗಸ್ಟ್ ತಿಂಗಳಿನಲ್ಲಯೇ ಮುಗಿದಿದೆ. ಆದರೆ ಅರಣ್ಯ ಭೂಮಿಯ ಕುರಿತು ಸರ್ಕಾರದ ನಿಲುವು ಸ್ಪಷ್ಟಗೊಂಡಿಲ್ಲ. ಎಂಪಿಎಂ ಅನ್ನು ಖಾಸಗಿಗೆ ಕೊಡುವ ಮಾತು ಕೇಳಿಬರುತ್ತಿದೆ.
ಹಾಗಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಸದನದ ಒಳಗೆ ತಾವು ಅರಣ್ಯ ಭೂಮಿಯನ್ನ ಲೀಸ್‌ಗೆ ನೀಡ ದಂತೆ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಬೇಕು ಹಾಗೂ ಅಕೇಶಿಯ ಮರ ಬೇಡ ಹೋರಾಟಕ್ಕೆ ಬೆಂಬಲಿಸ ಬೇಕೆಂದು ಒತ್ತಾಯಿಸಲಾಯಿತು. ಮನವಿ ನೀಡುವ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ವಕೀಲ ಶ್ರೀಪಾಲ್, ಪತ್ರಕರ್ತ ಶಶಿಸಂಪಳ್ಳಿ, ಪರಿಸರ ಬಾಬು, ಜೆಡಿಎಸ್‌ನ ಜೆ.ಡಿ ಮಂಜುನಾಥ್ ಮೊದಲಾದವರು ಹಾಜರಿದ್ದರು.