ನನಸಾಯ್ತು ಗ್ರಾಮಸ್ಥರ ಬಹುದಿನದ ಕನಸು

416

ಸಾಸ್ವೇಹಳ್ಳಿ : ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಹೋಬಳಿ ಕುಳಗಟ್ಟೆ ಗ್ರಾಮದಲ್ಲಿ ಪ್ರಸಿದ್ದ ಶ್ರೀ ಆಂಜನೆಯ ದೇವಸ್ಥಾನವಿದ್ದು ಹೊನ್ನಾಳಿ ತಾಲೂಕಿನಲ್ಲಿ ಮಾತ್ರವಲ್ಲದೆ ರಾಜದ್ಯಂತ ಈ ದೇವಸ್ಥಾನ ಭಕ್ತರುಗಳನ್ನು ಹೊಂದಿದೆ. ಈ ದೇವಾಲಯದ ಮುಂಭಾಗದ ಶ್ರೀ ಕಲ್ಗುಣಿ ವೆಂಕಟೇಶ್ವರ ದೇವಸ್ಥಾನವೂ ಸಹಾ ಇದ್ದು ಈ ಹಿಂದೆ ಈ ಎರಡೂ ದೇವಸ್ಥಾನಗಳ ಕಮಿಟಿಯವರು ಮತ್ತು ಗ್ರಾಮಸ್ಥರು ನಿರ್ಧರಿಸಿದಂತೆ ಗ್ರಾಮದ ದೇವಸ್ಥಾನಗಳ ಮುಂಬಾಗದಲ್ಲಿ ಗರುಡಗಂಬ ಸ್ಥಾಪಿಸುವ ಕನಸು ನಿನ್ನೆ ನನಸಾಗಿ, ಗ್ರಾಮದ ಎಲ್ಲಜನತೆ ಹಬ್ಬದ ವಾತಾವರಣದಲ್ಲಿ ಮುಳುಗಿದ್ದರು.
ನಿನ್ನೆ ಬೆಳಿಗ್ಗೆ ಗ್ರಾಮಸ್ಥರು ಶ್ರೀ ರಾಮದೇವರ ಸಾನಿಧ್ಯದಲ್ಲಿ ಗರುಡಗಂಬ ಸ್ಥಾಪನೆಯ ಧಾರ್ಮಿಕ ವಿಧಿವಿದಾನ ನೆರವೇರಿಸಿದರು. ಬೆಳಗಿನ ಶುಭ ಮಹೂರ್ತದಲ್ಲಿ ೩೦ ಅಡಿಗೂ ಎತ್ತರದ ಸುಂದರ ಕಲಾಕತಿಗಳನ್ನೊಳಗೊಂಡ ಈ ಗರುಡ ಗಂಬವನ್ನು ಕ್ರೇನ್ ಸಹಾಯದಿಂದ ಎರಡೂ ದೇವಾಲಯಗಳ ಪ್ರಾಂಗಣಕ್ಕೆ ತರಲಾಯಿತು. ಬಳಿಕ ಕಂಬವನ್ನು ಶುಭ ಮಹೂರ್ತದಲ್ಲಿ ಸಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ಪುರೋಹಿತರ ವೇದಘೋಷಣೆಗಳೊಂದಿಗೆ ಗ್ರಾಮದ ಮುಖಂಡರ ಸಮಕ್ಷಮದಲ್ಲಿ ಯಂತ್ರದ ಸಹಾಯದಿಂದ ಗರುಡ ಗಂಬ ಸ್ಥಾಪಿಸಲಾಯಿತು.