ನಗರದ ಶರಣ್ಯ ಸೇವಾ ಸಂಸ್ಥೆಯಿಂದ ಆ.೫ರಂದು ವಿಶೇಷ ಸೇವಾ ವಾರ್ಡ್ ಕಟ್ಟಡ ಭೂಮಿ ಪೂಜೆ

421

ಶಿವಮೊಗ್ಗ: ಅಸಹಾಯಕ ಮಾರಣಾಂತಿಕ ರೋಗ ಪೀಡಿತರಿಗೆ ಆರೈಕೆ ನೀಡುತ್ತಿರುವ ಶರಣ್ಯ ಸಂಸ್ಥೆ ವತಿಯಿಂದ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಗಾಜನೂರಿನಲ್ಲಿ ವಿಶೇಷ ಸೇವಾ ವಾರ್ಡ್‌ನ ಕಟ್ಟಡ ಕಾಮಗಾರಿ ಪೂಜೆಯನ್ನು ಆ.೫ರ ಸಂಜೆ ೪ ಗಂಟೆಗೆ ನೆರವೇರಿಸಲಾಗು ವುದು ಎಂದು ಸಂಸ್ಥೆ ಕಾರ್ಯದರ್ಶಿ ಡಿ.ಎಲ್.ಮಂಜುನಾಥ್ ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಗಾಜನೂರು ಅಗ್ರಹಾರದ ಶರಣ್ಯ ಆರೈಕೆ ಕೇಂದ್ರದಲ್ಲಿ ವಿಶೇಷ ಸೇವೆಯ ವಾರ್ಡ್‌ಗಳ ಸಂಕೀರ್ಣವನ್ನು ನಿರ್ಮಿಸುವ ಸಂಕಲ್ಪವನ್ನು ನಾವು ಇಟ್ಟುಕೊಂಡಿದ್ದೆವು. ಅದೀಗ ಸಾಕಾರ ವಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಗೌರವಾಧ್ಯಕ್ಷ ಡಿ.ಹೆಚ್. ಶಂಕರಮೂರ್ತಿ, ಜಿ.ಪಂ. ಸದಸ್ಯ ಕೆ.ಇ.ಕಾಂತೇಶ್, ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ವಿಶೇಷ ಅತಿಥಿಗಳಾಗಿರುತ್ತಾರೆ ಎಂದರು.
ಡಿಎಸ್‌ಎಲ್ ಟ್ರಸ್ಟ್‌ನ ಶರಣ್ಯ ಸಂಸ್ಥೆಯು ಕಳೆದ ೧೫ ವರ್ಷಗಳಿಂದ ಅಸಹಾಯಕರಿಗೆ ಉಲ್ಬಣ ಸ್ಥಿತಿಯಲ್ಲಿ ರುವ ಮಾರಣಾಂತಿಕ ರೋಗ ಪೀಡಿತರಿಗೆ ಆರೈಕೆ ಮತ್ತು ಶುಶ್ರ್ರೂಶೆ ನೀಡುತ್ತಾ ಬಂದಿದೆ. ಈಗಾಗಲೇ ೨೦ ರೋಗಿಗಳಿಗೆ ಅವಕಾಶವಿದೆ. ಈ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಹೆಚ್ಚುವರಿ ೧೬ ರೋಗಿಗಳಿಗೆ ಅನುಕೂಲವಾಗುವಂತೆ ವಿಶೇಷ ವಾರ್ಡ್ ನಿರ್ಮಿಸಲಾಗುವುದು ಎಂದರು. ಈ ವಾರ್ಡ್ ವಿಶೇಷವಾ ಗಿದ್ದು, ರೋಗಿಗಳ ಜೊತೆ ಅವರನ್ನು ನೋಡಿಕೊಳ್ಳುವ ಒಬ್ಬರಿಗೆ ಅವಕಾಶ ನೀಡಲಾಗುವುದು. ರೋಗಿಯು ತನ್ನ ಕೊನೆಯ ದಿನಗಳಲ್ಲಿ ನೋವುರಹಿತ ದಿನಗಳನ್ನು ಕಳೆಯಲಿ ಎಂಬುದೇ ಇದರ ಉದ್ದೇಶ. ಇಲ್ಲಿ ಎಲ್ಲ ರೀತಿಯ ಸೌಕರ್ಯಗಳಿವೆ. ಪ್ರತಿ ತಿಂಗಳು ೪ ಲಕ್ಷಕ್ಕೂ ಹೆಚ್ಚು ಖರ್ಚು ಬರುತ್ತಿದೆ. ಆದ್ದರಿಂದ ಸಾರ್ವಜನಿಕರು ದೇಣಿಗೆ ನೀಡುವಂತೆ ಮನವಿ ಮಾಡಿದರು.
ಸುದ್ದಿ ಗೋಷ್ಠಿಯಲ್ಲಿ ಟಿ.ಆರ್. ಅಶ್ವತ್ಥ ನಾರಾಯಣಶೆಟ್ಟಿ, ಸಂದೇಶ್, ಡಿ.ಕೆ.ರಾಮನಾಥ್, ಶ್ರೀನಿವಾಸ್ ಮುಂತಾದವರಿದ್ದರು.