ನಗರದ ವಾಣಿಜ್ಯ ಮಳಿಗೆಗಳಿಗೆ ಕನ್ನಡದಲ್ಲಿ ನಾಮಫಲಕ ಅಳವಡಿಸಲು ಆಗ್ರಹಿಸಿ ಕನ್ನಡಪರ ಸಂಘಟನೆಗಳಿಂದ ಮನವಿ

406

ಹೊಸನಾವಿಕ ನ್ಯೂಸ್
ಹರಿಹರ : ಇಲ್ಲಿನ ವಿವಿಧ ರೀತಿಯ ವಾಣಿಜ್ಯ ಮಳಿಗೆಗಳಿಗೆ ಕನ್ನಡದಲ್ಲಿ ದೊಡ್ಡ ಅಕ್ಷರದಲ್ಲಿ ನಾಮಫಲಕವನ್ನು ಅಳವಡಿಸುವಂತೆ ಒತ್ತಾಯಿಸಿ ನಗರಸಭೆ ಆಯುಕ್ತರಿಗೆ ಹರಿಹರದ ಕನ್ನಡಪರ ಸಂಘಟನೆಗಳಾದ ಜೈ ಕರ್ನಾಟಕ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಇತ್ತೀಚಿನ ದಿನದಲ್ಲಿ ನಗರದ ವರ್ತಕರು ತಮ್ಮ ಅಂಗಡಿಯ ಮುಂಭಾಗದಲ್ಲಿ ಇಂಗ್ಲಿಷ್ ಅಕ್ಷರದಲ್ಲಿ ನಾಮಫಲಕವನ್ನು ದೊಡ್ಡ ಗಾತ್ರದ ಅಕ್ಷರದೊಂದಿಗೆ ಅಳವಡಿಸಿರುತ್ತಾರೆ . ಅಲ್ಲದೆ ಕನ್ನಡದ ಹೆಸರಿನ ನಾಮಫಲಕ ವನ್ನು ಎರಡನೆ ಸ್ಥಾನವಾಗಿ ಸಣ್ಣ ಗಾತ್ರದ ಅಕ್ಷರದೊಂದಿಗೆ ಅಳವಡಿಸಿರುತ್ತಾರೆ . ಕೂಡಲೇ ಈ ರೀತಿಯ ನಾಮ ಫಲಕ ವನ್ನು ತೆರವುಗೊಳಿಸಬೇಕು ಕನ್ನಡದ ಕಂಪನ್ನು ಸಾರುವ ಜೇನಿನ ಹೊಳೆಯೋ ಹಾಲಿನ ಮಳೆಯಂತಿರುವ ಕನ್ನಡದ ಅಕ್ಷರದ ನಾಮಫಲಕವನ್ನು ಅಳವಡಿಸ ಬೇಕು. ಈ ಕೆಲಸ ಈ ೧ವಾರದಲ್ಲಿ ಆಗಬೇಕು ಇಲ್ಲವಾದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕನ್ನಡಪರ ಸಂಘಟನೆಯ ಕಾರ್ಯಕರ್ತರು ಎಚ್ಚರಿಕೆ ನೀಡಿದರು .
ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜಯ ಕರ್ನಾಟಕ ಸಂಘಟ ನೆಯ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.