ಧರ್ಮಸ್ಥಳ ಸಂಘದ ಕಾರ್‍ಯಚಟುವಟಿಕೆ ಗ್ರಾಮೀಣ ಭಾರತ ನಿರ್ಮಾಣಕ್ಕೆ ಸಹಕಾರಿ

453

ಸಾಗರ: ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಕಾರ್ಯ ಚಟುವಟಿಕೆ ಗ್ರಾಮೀಣ ಭಾರತ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ತಿಳಿಸಿದರು.
ಇಲ್ಲಿನ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ವತಿಯಿಂದ ಗಾಂಧಿ ಸ್ಮರಣೆ ಅಂಗವಾಗಿ ಜನಮಂಗಳ ಕಾರ್ಯಕ್ರಮದಡಿ ವಿಕಲಚೇತನರಿಗೆ ಸಾಧನಾ ಸಲಕರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಡಾ. ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಗಾಂಧೀಜಿ ಯವರು ಕಂಡ ರಾಮರಾಜ್ಯದ ಕನಸು ಸಾಕಾರಗೊಳ್ಳುತ್ತಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ೨೦೦೬ರಿಂದ ಜರಿಗೆ ಬಂದಿದೆ. ಅಂದಿನಿಂದ ಇಂದಿನವರೆಗೂ ನಿರಂತರತೆಯನ್ನು ಕಾಯ್ದುಕೊಂಡು ಗ್ರಾಮೀಣ ಭಾಗದ ಮಹಿಳೆರಲ್ಲಿ ಆರ್ಥಿಕ ಚೈತನ್ಯ ತುಂಬುವ ಕೆಲಸ ಯೋಜನೆ ಅತ್ಯಂತ ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿದೆ. ಧರ್ಮಸ್ಥಳ ಗ್ರಾಮಾಭಿವದ್ದಿ ಯೋಜನೆ ಪ್ರಾರಂಭ ವಾದ ಮೇಲೆ ನೂರಾರು ಫೈನಾನ್ಸ್ ಕಂಪನಿಗಳು ಬಾಗಿಲು ಮುಚ್ಚಿವೆ. ಬಡ್ಡಿ, ಚಕ್ರಬಡ್ಡಿ, ಸುಸ್ತಿಬಡ್ಡಿ ಹೆಸರಿನಲ್ಲಿ ನಗರ ಹಾಗೂ ಗ್ರಾಮೀಣ ಮಹಿಳೆಯರನ್ನು ಶೋಷಣೆ ಮಾಡುತ್ತಿದ್ದ ಖಾಸಗಿ ಫೈನಾನ್ಸ್‌ಗಳಿಂದ ಮುಕ್ತಿ ಸಿಕ್ಕಿದೆ. ಪ್ರತಿವರ್ಷ ಹೊಸಹೊಸ ಯೋಜನೆ ಜರಿಗೆ ತರಲಾಗುತ್ತಿದೆ. ವಿಶೇಷವಾಗಿ ವಿಕಲಚೇತನರಿಗೆ ಸಾಧನಾ ಸಲಕರಣೆ ನೀಡುತ್ತಿರುವುದು ಯೋಜನೆಯ ಶ್ರೇಷ್ಟ ಕೆಲಸಗಳಲ್ಲಿ ಒಂದಾಗಿದೆ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ವಿ.ಹಿತಕರ ಜೈನ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ರಾಮ ರಾಜ್ಯದ ಪರಿಕಲ್ಪನೆಯಡಿಯಲ್ಲಿ ಕೆಲಸ ಮಾಡುತ್ತಿದೆ. ಪ್ರತಿ ಗ್ರಾಮಗಳಲ್ಲೂ ಯೋಜನೆ ತನ್ನ ಕಾರ್ಯಕ್ಷೇತ್ರ ವಿಸ್ತರಿ ಸಿದ್ದು, ಕೃಷಿ, ಹೈನುಗಾರಿಕೆ ಸೇರಿದಂತೆ ಅನೇಕ ಸ್ವಯಂ ಉದ್ಯೋಗಕ್ಕೆ ಯೋಜನೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಯೋಜನೆಯ ಜಿ ನಿರ್ದೇಶಕ ಶೇಖರ ಗೌಡ ಮಾತನಾಡಿ, ಡಾ. ವೀರೇಂದ್ರ ಹೆಗಡೆ ಅವರು ಗಾಂಧೀಜಿ ಯವರು ಕಂಡ ಕನಸು ನನಸು ಮಾಡುತ್ತಿರುವ ದೇಶದಲ್ಲಿಯೆ ಮೊಟ್ಟಮೊದಲ ವ್ಯಕ್ತಿಯಾಗಿzರೆ. ಯೋಜನೆ ಅಡಿಯಲ್ಲಿ ಮದ್ಯಪಾನ ಮುಕ್ತ ಸಮಾಜ ನಿರ್ಮಾಣ, ನಶೆಮುಕ್ತ ಸಮಾಜ ನಿರ್ಮಾಣದಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವೇದಿಕೆಯಲ್ಲಿ ಯೋಜನೆಯ ಜಿ ನಿರ್ದೇಶಕಿ ಕಸ್ತೂರಿ ನಾಗರಾಜ್, ನಗರಸಭೆ ಸದಸ್ಯೆ ಸವಿತಾ ವಾಸು, ಮಾಜಿ ಸದಸ್ಯ ಸಂತೋಷ್ ಆರ್. ಶೇಟ್, ಯೋಜನೆಯ ಕುಸುಮಾ, ಸುಶೀಲಾ, ಬಂಗಾರೇಶ್ವರ ಉಪಸ್ಥಿತರಿ ದ್ದರು. ಸವಿತಾ ಪ್ರಾರ್ಥಿಸಿದರು. ತಾಲ್ಲೂಕು ಯೋಜನಾಧಿಕಾರಿ ನಾರಾಯಣ ಗೌಡ ಸ್ವಾಗತಿಸಿದರು. ಮಲ್ಲಿಕಾರ್ಜುನ್ ವಂದಿಸಿದರು. ಹರೀಶ್ ಪಿ. ನಿರೂಪಿಸಿದರು.