ದೇಶದಲ್ಲಿ ಕೋವಿಡ್-19 ಭೀತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರ ಮತ್ತು ವೈದ್ಯಕೀಯ ತಜ್ಞರು ಸೂಚಿಸಿದಂತೆ ಶಿವಮೊಗ್ಗ ಜಿಲ್ಲೆಯ ಜನತೆ ಸಹಕರಿಸಿಕೊಂಡು ಹೋಗಲು ಕಳಕಳಿಯಿಂದ ವಿನಂತಿಸುತ್ತೇನೆ.

495

ದೇಶದಲ್ಲಿ ಕೋವಿಡ್-19 ಭೀತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರ ಮತ್ತು ವೈದ್ಯಕೀಯ ತಜ್ಞರು ಸೂಚಿಸಿದಂತೆ ಶಿವಮೊಗ್ಗ ಜಿಲ್ಲೆಯ ಜನತೆ ಸಹಕರಿಸಿಕೊಂಡು ಹೋಗಲು ಕಳಕಳಿಯಿಂದ ವಿನಂತಿಸುತ್ತೇನೆ.

ಈ ಕೊರೊನ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುವ ರೋಗವಾಗಿದ್ದು ಪ್ರತಿಯೊಬ್ಬರು ಜಾಗೃತಿ ವಹಿಸುವುದು ಅಗತ್ಯವಾಗಿದೆ.ಮುಖ್ಯವಾಗಿ ಒಬ್ಬರಿಂದ ಒಬ್ಬರು ದೂರಉಳಿಯುವುದು ಅಗತ್ಯವಾಗಿದೆ.ಜನ ಗುಂಪು ಸೇರುವುದರಿಂದ ಇದು ಹರಡುತ್ತದಾದ್ದರಿಂದ ಸರ್ಕಾರ ಸೂಚಿಸಿದಂತೆ ಮನೆಯಲ್ಲೇ ಉಳಿದು ಖಾಯಿಲೆ ಹರಡುವುದನ್ನು ತಡೆಯಬೇಕು ಎಂದು ವಿನಂತಿಸುತ್ತೇನೆ.

ಅನಗತ್ಯ ಭಯ ಮತ್ತು ಶಂಕೆಯಿಂದ ಜನತೆ ಭಯಪಡುತ್ತಿದ್ದು ಸುಳ್ಳು ಸುದ್ದಿಗಳು ವದಂತಿಗಳು ಇದಕ್ಕೆ ಕಾರಣವಾಗಿದೆ.ಜಿಲ್ಲಾಡಳಿತದ ಅಣತಿಯಂತೆ ಕೇಳುವುದು ಮಾತ್ರವೇ ಇದಕ್ಕೆ ಪರಿಹಾರವಾಗಿದ್ದು ಖಾಯಿಲೆ ತಡೆಯಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳನ್ನು ಎಲ್ಲರೂ ಬೆಂಬಲಿಸಬೇಕಿದೆ.ಅನಗತ್ಯ ಓಡಾಟಗಳನ್ನು ಕೈಬಿಡಬೇಕು ಎಂದು ಸಾರ್ವಜನಿಕರಲ್ಲಿ ವಿನಂತಿಸುತ್ತೇನೆ

  • ಪ್ರಸನ್ನ ಕುಮಾರ್ ಕೆ ಬಿ,  ಮಾಜಿ ಶಾಸಕರು