ದೂರಶಿಕ್ಷಣಕ್ಕೆ ಕೆಎಸ್‌ಓಯುಗೆ ಮಾತ್ರ ಪ್ರವೇಶಾತಿ ಅವಕಾಶ

417

ದಾವಣಗೆರೆ :೨೦೨೦-೨೧ನೇ ಸಾಲಿನಿಂದ ಕರ್ನಾಟಕದ ದೂರಶಿಕ್ಷಣಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿವಿ ಮಾತ್ರ ಪ್ರವೇಶಾತಿ ನೀಡಬೇಕೆಂಬ ರಾಜ್ಯ ಸರ್ಕಾರ ಆದೇಶಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು ಇದಕ್ಕಾಗಿ ಶ್ರಮಿಸಿದ ಕೆಎಸ್‌ಓಯು ಕುಲಪತಿ ಪ್ರೊ| ವಿದ್ಯಾಶಂಕರ್ ಇವರನ್ನು ಅಭಿನಂದಿಸಲು ಇಂದು ದಾವಣಗೆರೆ ಪ್ರಾದೇಶಿಕ ಕೇಂದ್ರದ ವತಿಯಿಂದ ಆನ್‌ಲೈನ್ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮೈಸೂರು ವಿವಿ ಸಂಡಿಕೇಟ್ ಸದಸ್ಯ ಪ್ರದೀಪ್ ದೀಕ್ಷಿತ್ ಮಾತನಾಡಿ, ಪ್ರೊ.ವಿದ್ಯಾಶಂಕರ್ ಕೆಎಸ್‌ಓಯು ಕುಲಪತಿಗಳಾಗಿ ಬಂದ ಮೇಲೆ ವಿಶ್ವವಿದ್ಯಾನಿಲಯವನ್ನು ಹಿಂದಿನ ಗತವೈಭವದೊಡನೆ ಕೊಂಡೊಯ್ಯಲು ಅವಿರತವಾಗಿ ಶ್ರಮಿಸುತ್ತಿರುವುದನ್ನು ಶ್ಲಾಘಿಸಲೇ ಬೇಕು. ಅವರ ದೂರದೃಷ್ಟಿಯ ಪ್ರತಿಫಲವಾಗಿ ಮುಕ್ತ ವಿವಿ ಈ ಮಾದರಿಯ ಉನ್ನತಿಯನ್ನು ಹೊಂದುತ್ತಿದೆ.
ಒಂದು ದೂರ ಶಿಕ್ಷಣ ಸಂಸ್ಥೆಯು ರೆಗ್ಯುಲರ್ ವಿವಿಗಳಿಗೆ ಸರಿಸಮನಾಗಿ ಸೇವೆ ನೀಡುತ್ತಿರುವುದರ ಹಿಂದೆ ನಿಸ್ಸಂಶಯವಾಗಿ ಕುಲಪತಿಗಳು ಇzರೆ. ಉದ್ಯೋಗ ಮೇಳ ಆಯೋಜನೆ, ಸಂಪೂರ್ಣ ಆನ್‌ಲೈನ್ ಶಿಕ್ಷಣ, ಡಿಜಿಟಲ್ ಅಂಕಪಟ್ಟಿಗೆ ಅವಕಾಶ, ನಿರಂತರ ಆನ್‌ಲೈನ್ ಸಂಪರ್ಕ ಕಾರ್ಯಕ್ರಮಗಳು, ಪ್ರತ್ಯೇಕ ಆನ್‌ಲೈನ್ ಪ್ಲಾಟ್‌ಫಾರಂ ಸ್ಥಾಪನೆ, ಡಿಜಿಟಲ್ ಪಠ್ಯಪುಸ್ತಕ ಲಭ್ಯತೆ, ಮಹಿಳೆಯರಿಗಾಗಿ ಪ್ರತ್ಯೇಕ ಕೌನ್ಸೆಲಿಂಗ್ ಸೆಲ್ ಸ್ಥಾಪನೆ, ಶೈಕ್ಷಣಿಕವಾಗಿ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವುದು, ಕೋವಿಡ್ ಸಂದರ್ಭದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಮಾರ್ಗದರ್ಶನ ಕಾರ್ಯಾ ಗಾರ ಆಯೋಜನೆ, ಸಾಮಾಜಿಕ ಚಟುವಟಿಕೆಗಳಿಗೆ ವಿವಿಯನ್ನು ತೆರೆದಿಟ್ಟದ್ದು, ರೆಗ್ಯುಲರ್ ವಿವಿಗೆ ಸಮೀಕರಿಸಬಹುದಾದ ಚಟುವಟಿಕೆ ಗಳನ್ನು, ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ವಿವಿ ಬಗ್ಗೆ ಸಾರ್ವಜನಿಕವಾಗಿ ಒಲವು ಮೂಡುವಂತೆ ಮಾಡುತ್ತಿರುವುದು ಅಭಿನಂದನಾರ್ಹ.
ರಾಜ್ಯದಾದ್ಯಂತ ಪ್ರವಾಸ ಮಾಡಿ ಪತ್ರಿಕಾಗೋಷ್ಟಿಗಳನ್ನು ನಡೆಸಿ ಶೈಕ್ಷಣಿಕ ಚಟುವಟಿಕೆಗಳನ್ನು ವಿಸ್ತರಿಸುತ್ತಿರುವ ಕುಲಪತಿಗಳನ್ನು ದಾವಣಗೆರೆ ಪ್ರಾದೇಶಿಕ ಕೇಂದ್ರವು ಶಿವಮೊಗ್ಗ ಪ್ರಾದೇಶಿಕ ಕೇಂದ್ರದ ಸಹಯೋಗ ದೊಂದಿಗೆ ಅಭಿನಂದಿಸುತ್ತಿರುವುದು ಹಾಗೂ ಈ ಕಾರ್ಯಕ್ರಮದಲ್ಲಿ ವಿವಿಧ ಕೇಂದ್ರಗಳ ಪ್ರಾದೇಶಿಕ ನಿರ್ದೇಶಕರು ಹಾಗೂ ಪ್ರಾಧ್ಯಾಪಕರುಗಳು ಹಾಜರಿರುವುದು ವಿಶೇಷ ಸಂಗತಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಸುಧಾಕರ ಹೊಸಳ್ಳಿ, ಡಾ.ವಿಜಯಪ್ರಕಾಶ್, ಡಾ.ಮೋಹನ್‌ರಾಜ್, ಡಾ.ಆನಂದಗೌಡ, ಡಾ.ಹೇಮಲತ, ಕಷ್ಣೇಗೌಡ ಇನ್ನೂ ಮುಂತಾದವರು ಉಪಸ್ಥಿತರಿದ್ದರು.