ದೀಪ ಹಚ್ಚಿ; ಚಪ್ಪಾಳೆ ತಟ್ಟಿ ಕೊರೋನಾ ಓಡಿಸಿದ್ದಾಯ್ತು ಈಗ ಪಟಾಕಿ ನಿಷೇಧದಿಂದ ಕೊರೋನಾ ಕಂಟ್ರೋಲ್ ಆಗುತ್ತೆ ಎಂದ ಸರ್ಕಾರದ ವಿರುದ್ಧ ಪಟಾಕಿ ಸಿಡಿಸಿ ಪ್ರತಿಭಟಿಸಿ ವಾಟಾಳ್

468

ಬೆಂಗಳೂರು: ದೀಪಾವಳಿ ಹಬ್ಬದಲ್ಲಿ ಪಟಾಕಿ ನಿಷೇಧ ಮಾಡಿರುವ ಕ್ರಮ ಸಂಪ್ರದಾಯಕ್ಕೆ ಮಾಡಿರುವ ಅಪಚಾರ ಎಂದು ಆರೋಪಿಸಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, ಇಂದು ಪಟಾಕಿ ಸುಡುವ ಮೂಲಕ ಸರ್ಕಾರದ ಕ್ರಮ ವಿರೋಧಿಸಿ ಪ್ರತಿಭಟನೆ ನಡೆಸಿದರು.
ನಂತರ ಮಾತನಾಡಿದ ವಾಟಾಳ್, ಪಟಾಕಿ ಹಚ್ಚುವುದರಿಂದ ಕೊರೊನಾ ಬರುತ್ತದೆ ಎಂಬ ಸರ್ಕಾರದ ಹೇಳಿಕೆ ಅತ್ಯಂತ ಅವೈeನಿಕವಾಗಿದೆ. ಕೊರೊನಾ ಸಾಂಕ್ರಾಮಿಕ ರೋಗ ಪಟಾಕಿಯಿಂದ ಬರುತ್ತದೆ ಎಂದು ಎಲ್ಲೂ ಸಾಬೀತಾಗಿಲ್ಲ. ಕೊರೊನಾ ಸೋಂಕು ಜನರ ಮುನ್ನೆಚ್ಚರಿಕೆ ಕ್ರಮ ದಿಂದ ಸ್ವಾಭಾವಿಕವಾಗಿಯೇ ಕಡಿಮೆ ಯಾಗುತ್ತಿದೆ ಎಂದರು.
ಪಟಾಕಿ ಇಲ್ಲದಿದ್ದರೆ ದೀಪಾವಳಿ ಹಬ್ಬವೇ ಇಲ್ಲ. ದೀಪಾವಳಿ ಹಬ್ಬ ಯಾವುದೇ ಒಂದು ಪ್ರದೇಶ, ರಾಜ್ಯಕ್ಕೆ ಸೀಮಿತವಾಗಿಲ್ಲ. ಇದು ದೇಶಾದ್ಯಂತ ಆಚರಿಸುವ ಸಂಪ್ರದಾಯ ಹಬ್ಬ ವಾಗಿದೆ. ಪಟಾಕಿ ನಿಷೇಧಿಸುವುದರಿಂದ ಸಂಪ್ರದಾಯಕ್ಕೆ ಸರ್ಕಾರ ಕಳಂಕ ತಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡಲೇ ಈ ನಿಷೇಧ ಕ್ರಮವನ್ನು ಹಿಂತೆಗೆದು ಕೊಳ್ಳಬೇಕು ಎಂದು ತಿಳಿಸಿದರು.
ರಾಜದ್ಯಂತ ಜನ ಎಚ್ಚರದಿಂದ ಪಟಾಕಿ ಸಿಡಿಸಿ ಸಂಭ್ರಮದಿಂದ ದೀಪಾವಳಿ ಹಬ್ಬ ಆಚರಿಸುವಂತಾಗಲಿ. ಸರ್ಕಾರ ಪಟಾಕಿ ನಿಷೇಧಿಸುವ ಕ್ರಮ ವನ್ನು ಜಾರಿಗೊಳಿಸಿ ಜನರನ್ನು ಗೊಂದಲದಲ್ಲಿಟ್ಟಿದೆ. ಹಸಿರು, ಕೆಂಪು ಪಟಾಕಿ ಎಂದು ಹೇಳಿ ಪಟಾಕಿ ಮಾರಾಟಗಾರರು, ಉತ್ಪಾದಕರ ಮೇಲೆ ಗದಾಪ್ರಹಾರ ಮಾಡಿದೆ ಎಂದು ಅವರು ಆರೋಪಿಸಿದರು.
ಕಳೆದ ೮ ತಿಂಗಳಿನಿಂದ ಕೊರೊನಾ ಸೋಂಕು ವ್ಯಾಪಿಸಿದೆ. ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧಿಸುವುದಿದ್ದರೆ ಆರು ತಿಂಗಳ ಮುಂಚೆಯೇ ನಿಷೇಸ ಬೇಕಿತ್ತು. ಪಟಾಕಿ ಉತ್ಪಾದಕರು ತಮ್ಮ ಉತ್ಪಾದನೆಯನ್ನು ನಿಲ್ಲಿಸುತ್ತಿದ್ದರು. ಕೋಟ್ಯಂತರ ರೂ. ವೆಚ್ಚ ಮಾಡಿ ಪಟಾಕಿ ಉತ್ಪಾದಿಸಿ ಮಳಿಗೆ ತೆರೆದವರ ಪರಿಸ್ಥಿತಿ ಏನಾಗಬೇಕು ? ಏಕಾಏಕಿ ನಿರ್ಧಾರ ತೆಗೆದುಕೊಂಡಿರುವ ಕ್ರಮ ಸರಿಯಲ್ಲ ಎಂದರು.
ಕೊರೊನಾ ಸೋಂಕು ದೀಪ ಹಚ್ಚಿದರೆ ಹೋಗುತ್ತದೆ, ಚಪ್ಪಾಳೆ ತಟ್ಟಿದರೆ ಹೋಗುತ್ತದೆ ಎಂದು ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡುವು ದರ ಜತೆಗೆ ಪಟಾಕಿ ನಿಷೇಧಿಸುವು ದರಿಂದ ಕೊರೊನಾ ನಿಯಂತ್ರಣ ವಾಗುತ್ತದೆ ಎಂದು ಹೇಳುತ್ತಿzರೆ. ಇದೂ ಕೂಡ ಹಾಸ್ಯಾಸ್ಪದವಾಗಿದೆ ಎಂದು ವಾಟಾಳ್ ಹೇಳಿದರು.
ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಿ ಅಪಾಯ ರಹಿತ ಪಟಾಕಿಗಳನ್ನು ಮಾರಾಟ ಮಾಡಲಿ ಮತ್ತು ಜನ ಹಚ್ಚುವ ಮೂಲಕ ದೀಪಾವಳಿ ಆಚರಿಸಲಿ ಎಂದು ಅವರು ಹೇಳಿದರು.