ದಾವಣಗೆರೆ: ಸೆ.೧೯ರಂದು ಮೆಗಾ ಇ-ಲೋಕ್ ಅದಾಲತ್

446

ದಾವಣಗೆರೆ : ರಾಜ್ಯದಾದ್ಯಂತ ಕಾನೂನು ಸೇವಾ ಪ್ರಾಧಿಕಾರವು ಸೆ.೧೯ ರಂದು ಇ-ಲೋಕ್ ಅದಾಲತ್ ಆಯೋಜಿಸಿದ್ದು, ಜಿಯಲ್ಲಿಯು ಇ-ಲೋಕ್ ಅದಾಲತ್ ಮೂಲಕ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥದ ಉದ್ದೇಶದಿಂದ ಮೆಗಾ ಇ-ಲೋಕ್ ಅದಾಲತ್ ಆಯೋಜಿಸಿದೆ ಎಂದು ಪ್ರಧಾನ ಜಿ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾ ಹೇಳಿದರು.
ಜಿ ನ್ಯಾಯಾಲಯ ಸಂಕೀರ್ಣ ದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಈ ಅದಾಲತ್ ಮುಖಾಂತರ ಕಕ್ಷಿದಾರರು ನ್ಯಾಯಾಲಯದಲ್ಲಿ ಬಾಕಿ ಇರುವ ತಮ್ಮ ಪ್ರಕರಣಗಳನ್ನು ರಾಜೀ ಮಾಡಿ ಕೊಳ್ಳಬಹುದು. ನ್ಯಾಯಾಲಯದಲ್ಲಿನ ತೀರ್ಪಿಗೆ ಇರುವ ಮಹತ್ವವೇ ಇ-ಲೋಕ ಅದಾಲತ್‌ನ ತೀರ್ಪಿಗೂ ಇದ್ದು, ಸಾರ್ವಜನಿಕರು ಇ-ಲೋಕ ಅದಾಲತ್‌ನ ಸದುಪಯೋಗ ಪಡೆದುಕೊಳ್ಳಬೇಕೆಂದ ತಿಳಿಸಿದರು.
ಪಕ್ಷಗಾರರು ರಾಜಿ ಅಥವಾ ಸಂಧಾನದ ಮೂಲಕ ತಮ್ಮ ಪ್ರಕರಣ ಗಳನ್ನು ಶೀಘ್ರವಾಗಿ ಹಾಗೂ ಸುಲಭ ವಾಗಿ ಯಾವುದೇ ಶುಲ್ಕವಿಲ್ಲದೇ ಇತ್ಯರ್ಥ ಮಾಡಿಕೊಳ್ಳಬಹುದು. ಹಾಗೂ ಈ ಲೋಕ ಅದಾಲತ್‌ನಿಂದ ಪಕ್ಷಗಾರರಲ್ಲಿರುವ ವೈಮನಸ್ಸು ಕಡಿಮೆ ಯಾಗಿ ಸೌಹಾರ್ದತೆ ಹೆಚ್ಚಾಗಲಿದೆ ಎಂದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಪಕ್ಷಗಾರರನ್ನು ಸಂಪರ್ಕಿಸಿ ಹಾಗೂ ಕರೆಸಿ ಅವರು ರಾಜಿಯಾಗುವಂತಿದ್ದರೆ ಅವರ ಮಧ್ಯೆ ಮಾತನಾಡಿ ರಾಜಿ ಸಂಧಾನ ದಿಂದ ತೀರ್ಪು ಪ್ರಕಟಿಸಲಾಗುವುದು ಎಂದರು.
ಈ ಬಾರಿ ಇ-ಲೋಕ್ ಅದಾಲತ್‌ನಲ್ಲಿ ಚೆಕ್ ಬೌನ್ಸ್ ಪ್ರಕರಣ ಗಳು, ವಾಹನ ಅಪಘಾತ ಪರಿಹಾರದ ಪ್ರಕರಣಗಳು, ವಿಚ್ಚೇದನ ಹೊರತು ಪಡಿಸಿದ ವೈವಾಹಿಕ ಅಥವಾ ಜೀವನಾಂಶ ಪ್ರಕರಣಗಳು, ಕುಟುಂಬ ವಿವಾದಗಳು, ಬಾಡಿಗೆದಾರ ಹಾಗೂ ಮಾಲೀಕರ ನಡುವಿನ ಪ್ರಕರಣಗಳು, ಹಣ ವಾಪಾಸಾತಿ ಪ್ರಕರಣಗಳು ಹಾಗೂ ಕಾನೂನಿನನ್ವಯ ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣ ಗಳು, ಗ್ರಾಹಕರ ವಿವಾದಗಳಿಗೆ ಸಂಬಂಧಿಸಿದ ಪ್ರಕರಣಗಳು, ರಾಜಿ ಆಗಬಹುದಾದ ಎ ತರಹದ ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಕೊಳ್ಳಬಹುದು ಎಂದು ತಿಳಿಸಿದರು.
ಪಕ್ಷಗಾರರು ಸ್ವ ಇಚ್ಛೆಯಿಂದ ರಾಜಿಗೆ ಒಪ್ಪಿಕೊಂಡರೆ ಮಾತ್ರ ಇ- ಲೋಕ್ ಅದಾಲತ್ ನಲ್ಲಿ ಪ್ರಕರಣಗಳು ತೀರ್ಮಾನವಾಗವವು, ಪಕ್ಷಗಾರರು ಒಪ್ಪದಿದ್ದಲ್ಲಿ ಅಂತಹ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಕಾನೂನು ಬದ್ದವಾಗಿ ತೀರ್ಮಾನಿಸಲಾಗುವುದು ಎಂದರು.
ಇ-ಲೋಕ್ ಅದಾಲತ್‌ನಲ್ಲಿ ಪಕ್ಷಗಾರರು ನ್ಯಾಯಾಲಯಕ್ಕೆ ಬರದೇ ತಮ್ಮ ಮನೆಯಿಂದ ಅಥವಾ ವಕೀಲರ ಕಚೇರಿಯ ಮೂಲಕ ಪ್ರಕರಣಗಳನ್ನು ವೀಡಿಯೋ ಕಾನ್ಪರೆನ್ಸಿಂಗ್ ಮೂಲಕ ಇತ್ಯರ್ಥ ಮಾಡಿಕೊಳ್ಳಬಹುದು. ಎರಡು ಪಕ್ಷದ ಕಕ್ಷಿಗಾರರು ಹಾಗೂ ನ್ಯಾಯಾವಾದಿಗಳು ಹಾಗೂ ನ್ಯಾಯಾಧೀಶರು ಈ ಅದಾಲತ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಲಂಕ ಚರ್ಚಿಸಿ ರಾಜೀ ಮಾಡುವ ಮುಖಾಂತರ ಪಕ್ಷಗಾರರಿಗೆ ಶೀಘ್ರ ಹಾಗೂ ಪಾರದರ್ಶಕ ನ್ಯಾಯದಾನ ವನ್ನು ಇ-ಲೋಕ ಅದಾಲತ್ ಮುಖಾಂತರ ನೀಡಲಾಗುವುದು ಎಂದರು.
ಜಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾಬಪ್ಪ ಮಾತನಾಡಿ, ಇ-ಲೋಕ್ ಅದಾಲತ್ ಕುರಿತು ಹೆಚ್ಚಿನ ಮಾಹಿತಿಗಾಗಿ boZbZqZಜಛ್ಟಿಛಿ ಃ ಜಞZಜ್ಝಿ.ಟಞ ಅಥವಾ ದೂರವಾಣಿ ಸಂಖ್ಯೆ-೯೪೪೯೬೨೪೩೭೦ ಸಂರ್ಪಕಿಸಬಹುದು ಎಂದರು.
ನ್ಯಾಯಾಲದಲ್ಲಿ ಕಕ್ಷಿದಾರರು ಸಾಕ್ಷಿಗಳನ್ನು ಒದಗಿಸಲು ತೊಂದg ಯಾಗುತ್ತಿರುವುದರಿಂದ ಹಳೇ ಕೋರ್ಟ್ ಬಳಿಯಿರುವ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ನಾಲ್ಕು ರಿಮೋಟ್ ಕೊಠಡಿಗಳನ್ನು ತೆರೆಯಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣ್ ಕುಮಾರ್, ಮುಖ್ಯ ಆಡಳಿತಾಧಿಕಾರಿ ಶ್ರೀಧರ್, ಆಡಳಿತ ಶಿರಸ್ತೆದಾರ್ ಮಾರುತಿ ಉಪಸ್ಥಿತರಿದ್ದರು.