ದಾವಣಗೆರೆ: ನಾಳೆ ನಿಷೇಧಾಜ್ಞೆ

483

ದಾವಣಗೆರೆ :ಆ.೫ರ ನಾಳೆ ಪ್ರಧಾನಮಂತ್ರಿಗಳು ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಯಾದ್ಯಂತ ಬೆಳಿಗ್ಗೆ ೬ ಗಂಟೆಯಿಂದ ರಾತ್ರಿ ೧೨ ಗಂಟೆಯವರೆಗೆ ನಿಷೇಧಾಜ್ಞೆ ಜರಿಗೊಳಿಸಲಾಗಿದೆ.
ಅಯೋಧ್ಯ ವಿಚಾರವನ್ನು ಅತೀ ಸೂಕ್ಷ್ಮ ವಿಚಾರವಾಗಿ ಪರಿಗಣಿಸಲಾಗಿರುವ ಹಿನ್ನೆಲೆಯಲ್ಲಿ ಜಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆ ದಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಸೇರಿ, ದೇವರ ಫೋಟೊ, ಭಾವಚಿತ್ರಗಳನ್ನಿಟ್ಟು ಯಾವುದೇ ಧಾರ್ಮಿಕ ಪೂಜ ಕಾರ್ಯಕ್ರಮಗಳು, ಪ್ರತಿಭಟನೆ ನಡೆಸುವುದು ಜೊತೆಗೆ ಯಾವುದೇ ರೀತಿಯ ಭಾವಚಿತ್ರ, ಬ್ಯಾನರ್‍ಸ್, ಬಂಟಿಂಗ್ಸ್‌ಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ.
ಅಂದು ದೇವಸ್ಥಾನ ಕಮಿಟಿ ಮತ್ತು ಇತರೆ ಸಂಘಟನೆಗಳು ಸಿಹಿ ಹಂಚಿ ಸಂಭ್ರಮಾಚರಣೆ ಮಾಡುವ ಸಂಭವವಿದ್ದು, ಜಿಯಲ್ಲಿ ಹಿಂದು ಪರ ಸಂಘಟನೆಗಳಿಂದ ಶ್ರೀರಾಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಶ್ರೀರಾಮ ದೇವರ ಫೋಟೋ ಭಾವಚಿತ್ರಗಳನ್ನು ಅಥವಾ ಬ್ಯಾನರ್‍ಸ್, ಫ್ಲೆಕ್ಸ್ ಬೋರ್ಡ್‌ಗಳನ್ನು ಇಟ್ಟು ಪೂಜೆ ಸಲ್ಲಿಸುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ಕೆಲವು ಮತೀಯ ಸಂಘಟನೆಗಳು ಹಾಗೂ ಹೋರಾಟಗಾರರು ಅಡಚಣೆ ಉಂಟು ಮಾಡಿ ಕಾನೂನು ಸುವ್ಯವಸ್ಥೆ ಧಕ್ಕೆಯುಂಟು ಮಾಡುವ ಸಂಭವವಿದೆ. ಮೆತ್ತೊಂದೆಡೆ ಕೆಲವು ಮುಸ್ಲಿಂ ಸಂಘಟನೆಗಳಿಂದ ವಿರೋಧ ವ್ಯಕ್ತಪಡಿಸಿ ಕಪ್ಪುಬಟ್ಟೆ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಸಾಧ್ಯತೆಗಳಿವೆ.
ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಅನುಮತಿ ಇಲ್ಲದೆ ಅಳವಡಿಸಿರುವ ಭಾವಚಿತ್ರ, ಬ್ಯಾನರ್‍ಸ್, ಬಂಟಿಗ್ಸ್‌ಗಳನ್ನು ತೆರವುಗೊಳಿಸಲಾಗುವುದು. ಯಾವುದೇ ರೀತಿಯ ಮೆರವಣಿಗೆ, ಬೈಕ್ ರ್‍ಯಾಲಿ ಮತ್ತು ಇತರೆ ಯಾವುದೇ ರ್‍ಯಾಲಿಗಳು ಸೇರಿದಂತೆ ಪಟಾಕಿ ಸಿಡಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಲೈವ್ ಎಲ್‌ಇಡಿ ಡಿಸ್‌ಪ್ಲೇ ಹಾಕುವುದನ್ನು ನಿಷೇಧಿಸಲಾಗಿದೆ. ಆ.೪ ಮತ್ತು ೫ ರಂದು ಜಿಯ ಎ ಪಟಾಕಿ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಕೊರೊನಾ ಹರಡುವಿಕೆ ನಿಯಂತ್ರಣ ಸಂಬಂಧ ದೇವಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ಪೂಜೆ ಕಾರ್ಯಕ್ರಮಗಳನ್ನು ನಡೆಸುವುದನ್ನು ಸಹ ನಿಷೇಧಿಸಲಾಗಿದೆ ಎಂದು ಜಿಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿzರೆ.