ದಾವಣಗೆರೆ: ಇಂದು ೧೦೭ ಮಂದಿಗೆ ಕೊರೋನಾ ಪಾಸಿಟಿವ್..

463

ದಾವಣಗೆರೆ: ಜಿಯಲ್ಲಿ ಜು.೨೩ರಂದು ಬರೋಬ್ಬರಿ ೧೦೭ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ೨೬ ಮಂದಿ ಸಂಪೂರ್ಣ ಗುಣಮುಖರಾಗಿದ್ದು ಈರ್ವ ಸೋಂಕಿತರ ಸಾವು ಸಂಭವಿಸಿದೆ.
ಕೋವಿಡ್-೧೯ ದೃಢಪಟ್ಟ ಪ್ರಕರಣಗಳು ದಾವಣಗೆರೆಯಲ್ಲಿ ೬೪, ಹರಿಹರದಲ್ಲಿ ೨೬, ಜಗಳೂರಿನಲ್ಲಿ ೦೬, ಚನ್ನಗಿರಿಯಲ್ಲಿ ೧, ಹೊನ್ನಾಳಿಯಲ್ಲಿ ೨ ಪ್ರಕರಣಗಳು ಹಾಗೂ ಅಂತರ ಜಿಲ್ಲೆಯಿಂದ ೮ ಕೋವಿಡ್-೧೯ ಪ್ರಕರಣಗಳು ವರದಿಯಾಗಿದೆ.
ತಾಲ್ಲೂಕುವಾರು ಬಿಡುಗಡೆ ಯಾದವರು ದಾವಣಗೆರೆಯಿಂದ ೧೩, ಹರಿಹರದಿಂದ ೧೦, ಜಗಳೂರಿನಿಂದ ೦೧, ಹೊನ್ನಾಳಿಯಿಂದ ೧, ಅಂತರ ಜಿಲ್ಲೆಯಿಂದ ೧, ಒಟ್ಟು ೨೬ ಮಂದಿ ಇವರು ಸಂಪೂರ್ಣ ಗುಣಮುಖರಾಗಿ ಜು.೨೩ರಂದು ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಯಾಗಿzರೆ.
ಈ ದಿನ ಮರಣ ಹೊಂದಿದವರು ಡಿ.ವಿ.ಜಿ ೫೧೩, ಮತ್ತು ೮೮೧ ಈ ಇಬ್ಬರು ವ್ಯಕ್ತಿಗಳು ಜು. ೨೧ ರಂದು ಮರಣ ಹೊಂದಿzರೆ.
ಒಟ್ಟು ೧೧೭೮ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೬೬೭ ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿzರೆ. ಹಾಗೂ ೩೨ ಸಾವು ಸಂಭವಿಸಿದ್ದು. ಪ್ರಸುತ್ತ ೪೭೯ ಪ್ರಸುತ್ತ ಪ್ರಕರಣಗಳು ಇವೆ.