ದಾವಣಗೆಗೆ ವಿವಿ: ಅರ್ಜಿ ಅವಧಿ ವಿಸ್ತರಣೆ

223

ದಾವಣಗೆರೆ : ದಾವಣಗೆರೆ ವಿವಿಯ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ೨೦೨೧-೨೨ನೇ ಶೈಕ್ಷಣಿಕ ಸಾಲಿನಲ್ಲಿ ಲಭ್ಯವಿರುವ ಪಿ.ಹೆಚ್‌ಡಿ/ಪಿಡಿಎಫ್/ಡಿ.ಎಸ್ಸಿ/ಡಿ.ಲಿಟ್ ಸಂಶೋಧನಾ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಿದ್ದು, ಕೋವಿಡ್ ಹಿನ್ನೆಲೆ ಯಲ್ಲಿ ಕರ್ನಾಟಕ ಸರ್ಕಾರವು ಏ.೨೭ ರಿಂದ ಮೇ ೨೧ರವರೆಗೆ ಲಾಕ್ ಡೌನ್‌ಗೆ ಆದೇಶ ನೀಡಿರುವುದರಿಂದ ಹಾಗೂ ಕುಲಪತಿಗಳ ಅನುಮೋದನೆ ಮೇರೆಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಮೇ ೧೨ ರವರೆಗೆ ಅವಧಿ ವಿಸ್ತರಿಸಲಾಗಿದೆ.
ಪಿಹೆಚ್.ಡಿ/ಪಿಡಿಎಫ್/ಡಿ.ಎಸ್‌ಸಿ/ಡಿ.ಲಿಟ್ ಸಂಶೋಧನಾ ಸ್ಥಾನಗಳಿಗೆ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಲು ವಿವಿ ವೆಬ್‌ಸೈಟ್(ಅಂತಜಲದ) www.davanagere university.ac.in ಸಂಪರ್ಕಿಸಬಹುದು ಎಂದು ದಾವಣಗೆರೆ ವಿವಿ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿzರೆ.