ತಾಯಿ- ಮಗು ಕಾಣೆಯಾಗಿದ್ದಾರೆ

430

ಶಿವಮೊಗ್ಗ: ಶಿವಮೆಗ್ಗ ಕುವೆಂಪು ನಗರದಲ್ಲಿ ವಾಸಿಸುತ್ತಿರುವ ಲೋಕೇಶಪ್ಪರವರ ತಮ್ಮ ರಾಮರವರ ಪತ್ನಿ ರತ್ನಮ್ಮ (೨೫) ಎಂಬ ಮಹಿಳೆಯು ತನ್ನ ಮಗ ಸಾಥ್ವಿಕ್(೨)ನನ್ನು ಕರೆದುಕೊಂಡು ಸೆ.೨೯ ರಂದು ಮನೆಯಿಂದ ಬಿಟ್ಟು ಹೊರಗೆ ಹೋದವರು ಈವರೆಗೆ ಮರಳಿ ಬಂದಿರುವುದಿಲ್ಲ.
ರತ್ನಮ್ಮನವರ ಚಹರೆ; ಸಾಧಾರಣ ಮೈಕಟ್ಟು, ೫.೫ ಅಡಿ ಎತ್ತರ, ಎಣ್ಣೆಕೆಂಪು ಮೈಬಣ್ಣ ಹೊಂದಿರುವ ಈ ಮಹಿಳೆಯು ಕಾಣೆಯಾಗುವ ದಿನದಂದು ಕಪ್ಪು ಬಣ್ಣದ ಟಾಪ್, ಕೆಂಪು ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ.
ಮಗು ಸಾಥ್ವಿಕ್ ಚಹರೆ: ೨ ಅಡಿ ಎತ್ತರ, ತೆಳುವಾದ ಮೈಕಟ್ಟು, ಎಣ್ಣೆಕೆಂಪು ಮೈಬಣ್ಣ, ಉದ್ದಮುಖ, ಮೈಮೇಲೆ ಕೆಂಪು ಟೀ ಶರ್ಟ್ ಮತ್ತು ಕಪ್ಪ ಚಡ್ಡಿ ಧರಿಸಿzನೆ.
ಈ ಚಹರೆ ಹೊಂದಿರುವ ತಾಯಿ ಮಗನ ಕುರಿತು ಮಾಹಿತಿ ಸಿಕ್ಕಲ್ಲಿ ಸಾರ್ವಜನಿಕರು ಗ್ರಾಮಾಂತರ ಪೊಲೀಸ್ ಠಾಣೆಯನ್ನು ಖುzಗಿ ಅಥವಾ ಫೋ: ೦೮೧೮೨-೨೬೧೪೧೮/೨೬೧೪೧೦/ ೨೬೧೪೨೨/ ೯೪೮೦೮೦೩೩೫೦ ಗಳನ್ನು ಅಥವಾ ಕಂಟ್ರೋಲ್ ರೂಂ ನಂ.೧೦೦ ಗಳಿಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.