ತವರಿನತ್ತ ಹೊರಟ ಗೆದ್ದು ಬೀಗಿದ ಅನ್ನದಾತರು…

95

ನವದೆಹಲಿ: ಅನಪೇಕ್ಷೀಯವಾದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಒಂದು ವರ್ಷದಿಂದ ದೆಹಲಿಯಲ್ಲಿ ಬೀಡು ಬಿಟ್ಟು ಅಹೋರಾತ್ರಿ ಪ್ರತಿಭಟನೆ ನಡೆಸಿ, ಅಂತಿಮವಾಗಿ ಜಯ ಸಾಧಿಸಿದ ರೈತರು ಇಂದಿನಿಂದ ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದಾರೆ.
ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ೨೦೨೦ರ ನ.೧೭ರಿಂದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ರಾಜ್ಯಗಳ ರೈತರು ದೆಹಲಿಯ ಸಿಂಘು, ಟಿಕ್ರಿ, ಗಾಜಿಯಾಪುರ ಗಡಿಗಳಲ್ಲಿ ಟೆಂಟ್ ಹಾಕಿಕೊಂಡು ಪ್ರತಿಭಟನೆ ಆರಂಭಿಸಿ ದ್ದರು. ಇದರಿಂದ ಸಂಚಾರ ವ್ಯತ್ಯಯ ವಾಗಿತ್ತು, ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಕೇಂದ್ರ ಸರ್ಕಾರ ೧೩ ಸುತ್ತಿನ ಮಾತುಕತೆ ನಡೆಸಿತ್ತು. ಈ ಐತಿಹಾಸಿಕ ಪ್ರತಿಭಟನೆಯಲ್ಲಿ ಸುಮಾರು ೭೫೦ ಮಂದಿ ರೈತರು ಬಲಿದಾನವಾಗಿತ್ತು.


ಯಾವುದಕ್ಕೂ ರೈತರು ಜಗ್ಗಲಿಲ್ಲ. ಕೊನೆಗೆ ಪ್ರಧಾನಿ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಕಟಿಸಿದರು. ಪ್ರಧಾನಿ ಭರವಸೆ ಹೊರತಾಗಿಯೂ ರೈತರು ಗಡಿಯಿಂದ ಕಾಲುತೆಗೆದಿರಲಿಲ್ಲ. ಸಂಸತ್‌ನಲ್ಲಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಪಟ್ಟು ಹಿಡಿದಿದ್ದರು. ಅದರಂತೆ ಚಳಿಗಾಲದ ಅಧಿವೇಶನ ಆರಂಭದ ಮೊದಲ ದಿನವೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಮೂರು ಕಾಯ್ದೆಗಳನ್ನು ಹಿಂಪಡೆದಿದೆ.
ಬೆಂಬಲ ಬೆಲೆಗೆ ಕಾನೂನಿನ ಬೆಂಬಲ ನೀಡಬೇಕು ಎಂದು ಬೇಡಿಕೆ ಮುಂದಿಟ್ಟು ರೈತರು ಪ್ರತಿಭಟನೆ ಮುಂದುವರೆಸಿದರು. ಗುರುವಾರ ನಡೆದ ರೈತರ ಸಭೆಯಲ್ಲಿ ಚರ್ಚಿಸಿ ಸದ್ಯಕ್ಕೆ ಪ್ರತಿಭಟನೆಯನ್ನು ಅಮಾನತುಗೊಳಿಸಲು ನಿರ್ಧರಿಸ ಲಾಗಿದೆ. ಕೇಂದ್ರ ಸರ್ಕಾರ ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಮುಂದಿನ ತಿಂಗಳು ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಸಲಾಗಿದೆ.
ನಿನ್ನೆ ವಿಜಯ ದಿವಸ ಆಚರಿಸಿ ಪ್ರತಿಭಟನೆಯನ್ನು ಅಂತ್ಯಗೊಳಿಸುವ ಉದ್ದೇಶ ಇತ್ತು. ಆದರೆ ಸೇನಾಪಡೆಗಳ ಮುಖ್ಯಸ್ಥ ಬಿಪಿನ್‌ರಾವತ್ ನಿಧನ ದಿಂದಾಗಿ ರೈತರು ವಿಜಯ ದಿವಸ್ ಆಚರಣೆಯನ್ನು ಕೈ ಬಿಟ್ಟಿದ್ದಾರೆ.
ಇಂದು ಬೆಳಗ್ಗೆ ಸಿಂಘು ಗಡಿಯಲ್ಲಿ ಜಮಾವಣೆಗೊಂಡ ರೈತರು, ಹರ್ಷೋದ್ಘಾರಗಳೊಂದಿಗೆ ಪಂಜಾಬ್‌ನತ್ತ ಪ್ರಯಾಣ ಆರಂಭಿಸಿ ದರು. ರೈತ ನಾಯಕ ರಾಕೇಶ್ ಟಿಕಾಯತ್ ಟ್ಯಾಕ್ಟರ್‌ಗಳ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿಸಿದರು. ಟಿಕ್ರಿ ಗಡಿಯ ಕಿಸಾನ್ ಚೌಕ್ ಮತ್ತು ಬಹದೂರ್‌ಘರ್‌ಲ್ಲಿ ಸಮಾವೇಶ ಗೊಂಡು ತಮ್ಮ ಗೆಲುವಿಗೆ ಸಂತಸ ವ್ಯಕ್ತ ಪಡಿಸಿದ್ದಾರೆ. ಗಾಜಿಯಾಪುರ ಗಡಿಯ ಮುಖ್ಯ ವೇದಿಕೆ ಬಳಿ ಸಮಾವೇಶ ಗೊಂಡು ಹರ್ಷಾಚರಣೆ ಮಾಡಿದ್ದಾರೆ.
ನಿನ್ನೆಯಿಂದಲೇ ರೈತರು ತಮ್ಮ ಟೆಂಟ್‌ಗಳನ್ನು ಬಿಚ್ಚುವ ಕೆಲಸ ಆರಂಭಿಸಿದರು. ಪ್ರತಿಭಟನೆಗೆ ಬೆಂಬಲವಾಗಿ ಸುತ್ತ ಮುತ್ತಲ ರೈತರು ಟೆಂಟ್‌ಗಳನ್ನು ನಿರ್ಮಿಸಿಕೊಳ್ಳಲು ಏಣಿ, ಟಾರ್ಪಲಿನ್, ಕಂಬಗಳು, ಹಗ್ಗಗಳನ್ನು ಬಿಚ್ಚಿ, ಥರ್ಮಕೋಲ್, ಪಿವಿಸಿ ಸಿಟ್‌ಗಳು, ಸೋಳ್ಳೆ ಪರದೆ ಗಳನ್ನು ನೀಡಿದ್ದರು. ಅವುಗಳನ್ನು ಇಂದು ತೆರವು ಮಾಡಲಾಗಿದೆ. ತಮ್ಮಲ್ಲೆಲ್ಲಾ ಸರಕುಗಳನ್ನು ಟ್ಯಾಕ್ಟರ್‌ಗಳಿಗೆ ಏರಿಕೊಂಡು ವಾಪಾಸ್ ಹೋಗುವಾಗ ರೈತರು ಬೋಲೆ ಸೋ ನಿಹಾಲ್ ಎಂದು ಘೋಷಣೆ ಕೂಗಿದ್ದಾರೆ.
ಸಾವಿರಾರು ಸಂಖ್ಯೆಯ ರೈತರು ಒಮ್ಮೇಲೆ ವಾಪಾಸ್ ಮರಳುತ್ತಿರುವುದ ರಿಂದ ದೆಹಲಿಯ ಸುತ್ತಮುತ್ತ ಸಂಚಾರ ದಟ್ಟಣೆ ಹೆಚ್ಚಾಗಿದೆ. ಐತಿಹಾಸಿಕ ಪ್ರತಿಭಟನೆಯ ಮೂಲಕ ದಿಗ್ವಿಜಯ ಸಾಧಿಸಿದ ರೈತ ನಾಯಕರನ್ನು ಅಮೃತಸರದ ಗೋಲ್ಡನ್ ಟೆಂಪಲ್ ನಲ್ಲಿ ಡಿ.೧೩ರಂದು ಸನ್ಮಾನಿಸಲು ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ ನಿರ್ಧರಿಸಿದೆ.
ಇಂದು ಬೆಳಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ರೈತ ನಾಯಕ ರಾಕೇಶ್ ಟಿಕಾಯತ್ ಅವರು, ಟೆಂಟ್‌ಗಳನ್ನು ತೆರವು ಮಾಡುವ ಕೆಲಸ ನಾಲ್ಕೈದು ದಿನಗಳಾಗಬಹುದು. ನಾನು ಡಿ.೧೫ರವರೆಗೂ ಇಲ್ಲೇ ಉಳಿದು ಎಲ್ಲರೂ ಮರಳಿದ ಬಳಿಕ ವಾಪಾಸ್ ಆಗುತ್ತೇನೆ ಎಂದಿದ್ದಾರೆ.

————————————————-
ಸುದ್ದಿ , ಜಾಹೀರಾತು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ WhatsApp : 9482482182
email: hosanavika@gmail.com
website : hosanavika.in
hosanavika.com