ತಳಿರು ತೋರಣಗಳಿಂದ ಶೃಂಗಾರಗೊಂಡ ಶಾಲೆಗಳು – ಹಬ್ಬದ ವಾತಾವರಣ

349

ಶಿವಮೊಗ್ಗ/ ದಾವಣಗೆರೆ: ಕೋವಿಡ್ ಲಾಕ್‌ಡೌನ್‌ನಿಂದಾಗಿ ಸ್ಥಗಿತವಾಗಿದ್ದ ಶಾಲಾ ಕಾಲೇಜುಗಳು ಬರೋಬ್ಬರಿ ೯ ತಿಂಗಳ ನಂತರ ಮತ್ತೆ ಇಂದು ಆರಂಭವಾಗಿದ್ದು, ಮೊದಲ ದಿನವಾದ ಇಂದು ಮಕ್ಕಳು ಲವಲವಿಕೆಯಿಂದಲೇ ಶಾಲಾ- ಕಾಲೇಜುಗಳಿಗೆ ಆಗಮಿಸುತ್ತಿದ್ದುದು ಕಂಡುಬಂತು.
ಕೋವಿಡ್-೧೯ ಮಾರ್ಗಸೂಚಿ ಮೇರೆಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ರಾಜದ್ಯಂತ ಇಂದಿನಿಂದ ಆರಂಭವಾದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇಂದು ಉತ್ಸಾಹದಿಂದಲೇ ಶಾಲೆಗೆ ತೆರಳುತ್ತಿದ್ದದ್ದು ಕಂಡು ಬಂತು. ಒಂದೆಡೆ ಹೊಸವರ್ಷ ಮತ್ತೊಂದೆಡೆ ಶಾಲೆ ಆರಂಭ ಎರಡೂ ಖುಷಿ ಮಕ್ಕಳ ಮುಖದಲ್ಲಿ ಕಾಣುತ್ತಿತ್ತು.
ಮನೆಯಲ್ಲಿದ್ದು ಬೇಸರಗೊಂಡು ಯಾವಾಗ ಶಾಲೆಗೆ ಹೋಗುತ್ತೇವೋ ಎಂಬಂತಾಗಿದ್ದ ಮಕ್ಕಳು ಒಂದೆಡೆಯಾದರೆ ಶಾಲೆ ಓಪನ್ ಆಯ್ತ ಎಂದು ಒಲ್ಲದ ಮನಸ್ಸಿನಿಂದ ಶಾಲೆಕಡೆ ಮುಖಮಾಡಿದ್ದ ಮಕ್ಕಳು ಇದ್ದರು.
ಮಕ್ಕಳಿಗಾಗಿ ಶಾಲೆಗಳು ಹಸಿರು ತೋರಣ, ಬಾಳೆ ಕಂಬ ಇತ್ಯಾದಿ ಗಳಿಂದ ಶೃಂಗರಿಸಲ್ಪಟ್ಟಿದ್ದವು. ಕಳೆದ ೨ ದಿನದಿಂದ ಶಾಲೆಗಳನ್ನು ಸ್ಯಾನಿಟೈಜ್ ಮಾಡಿಸಲಾಗಿತ್ತು.
ಬಹುತೇಕ ಶಾಲಾ- ಕಾಲೇಜಿನವರು ವಿದ್ಯಾರ್ಥಿಗಳಿಗೆ ಹೂ ಗುಚ್ಛ ನೀಡಿ ಸ್ವಾಗತಿಸಿದರು. ಇನ್ನು ಕೆಲವೆಡೆ ಚಾಕಲೇಟ್ ನೀಡಿ ಸ್ವಾಗತಿಸ ಲಾಯಿತು. ಶಾಲೆಗಳ ಮುಂಭಾಗದಲ್ಲಿ ಬಾಳೆಕಂದು, ಮಾವಿನ ತೋರಣದಿಂದ ಸಿಂಗರಿಸಲಾ ಗಿತ್ತು. ಕೋವಿಡ್-೧೯ ಮಾರ್ಗಸೂಚಿ ಯಂತೆ ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಪ್ರತಿ ಕೊಠಡಿಗೆ ಸ್ಯಾನಿಟೈಜರ್ ಸಿಂಪಡಣೆ, ಶೌಚಾಲಯ ವ್ಯವಸ್ಥೆ, ಸ್ವಚ್ಛತೆ ಸೇರಿದಂತೆ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದರ ಜತೆಗೆ ವಿದ್ಯಾರ್ಥಿಗಳು ತಾವು ತಂದ ತಿಂಡಿ ಇನ್ನಿತರ ಪದಾರ್ಥಗಳನ್ನು ಬೇರೊಬ್ಬರೊಂದಿಗೆ ಹಂಚಿಕೊಳ್ಳದಂತೆ ಸಿಬ್ಬಂದಿಗೆ ನೋಡಿಕೊಳ್ಳುವ ಹೊಣೆಗಾರಿಕೆ ನೀಡಲಾಗಿದೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಲ್ಲಿ ವಿದ್ಯಾರ್ಥಿಗಳ ಗುರುತಿನ ಚೀಟಿ ತೋರಿಸಿದರೆ ಉಚಿತವಾಗಿ ಓಡಾಡಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಬಹುತೇಕ ಶಾಲೆಗಳಿಗೆ ವಿದ್ಯಾರ್ಥಿಗಳು ಆಗಮಿಸಿದ್ದು ತರಗತಿಗಳು ಪ್ರಾರಂಭ ವಾಗಿದ್ದವು. ಇನ್ನೂ ಹಲವು ಶಾಲೆಗಳಿಗೆ ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರು. ಕೆಲವು ಪೋಷಕರಲ್ಲಿ ಇನ್ನೂ ಆತಂಕ ದೂರವಾಗಿಲ್ಲ. ಇನ್ನೂ ನಾಲ್ಕಾರು ದಿನ ಪರಿಸ್ಥಿತಿ ನೋಡಿಕೊಂಡು ಮಕ್ಕಳನ್ನು ಶಾಲೆಗೆ ಕಳುಹಿಸಲು ತೀರ್ಮಾನಿಸಿದ್ದೇವೆ ಎಂದು ಹಲವು ಪೋಷಕರು ಹೇಳುತ್ತಾರೆ.
ಕರೋನ ಮುನ್ನೆಚ್ಚರಿಕೆ ಫಲಕಗಳು ಶಾಲೆಗಳಲ್ಲಿದ್ದವು. ಮಕ್ಕಳ ಕೈ ಗಳಿಗೆ ಸ್ಯಾನಿಟೈಜರ್ ಹಾಕಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೊಠಡಿಗಳಲ್ಲಿ ಕೂರಿಸಲಾಯಿತು.
ಶಾಲೆಗಳಿಂದಲೇ ಥರ್ಮಲ್ ಸ್ಕಾನರ್ ಖರೀದಿಸಿ ಬಳಸಲಾಗುತ್ತಿದೆ. ಯಾವ ಶಾಲೆಗಳಲ್ಲಿ ಹಣ ಇಲ್ಲವೋ ಅವರಿಗೆ ಗ್ರಾ.ಪಂ. ಚುನಾವಣೆಗೆ ಬಳಸಿದ ಥರ್ಮಲ್ ಸ್ಕ್ಯಾನರ್‌ಗಳನ್ನು ಜಿಲ್ಲಾಧಿಕಾರಿಗಳು ಒದಗಿಸಿದ್ದಾರೆ. ಈ ರೀತಿ ಶೇ.೨೫ರಷ್ಟು ಸರ್ಕಾರಿ ಶಾಲೆಗಳಿಗೆ ಥರ್ಮಲ್ ಸ್ಕ್ಯಾನರ್ ಒದಗಿಸಿದೆ.
ಪ್ರತಿ ಶಾಲೆಯಲ್ಲಿ ಗರಿಷ್ಠ ೨೦ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿತ್ತು. ಇಂದು ಹೊಸ ವರ್ಷವಾಗಿದ್ದರಿಂದ ಅನೇಕ ಮಕ್ಕಳು ಶಾಲೆಗೆ ಬಂದಿರಲಿಲ್ಲ, ಒಟ್ಟಾರೆ ಶೇ.೫೦ಕ್ಕಿಂತ ಹೆಚ್ಚು ಮಕ್ಕಳು ಎಲ್ಲಾ ಶಾಲೆಗಳಲ್ಲಿ ಕಂಡು ಬಂದರು. ಕೋವಿಡ್ ನಿಯಮ ಪಾಲಿಸಿ ಶಿಕ್ಷಕರು ಪಾಠವನ್ನು ಪ್ರಾರಂಭಿಸಿದರು.
ಸರ್ಕಾರ ವಿದ್ಯಾಗಮನ ವ್ಯವಸ್ಥೆ ಯಡಿ ೬ಮತ್ತು ೭ ನೇ ತರಗತಿ ಮಕ್ಕಳಿಗೆ ದಿನ ಬಿಟ್ಟು ದಿನ ಶಾಲೆ ಮಾಡುತ್ತಿದೆ. ಮಕ್ಕಳು ಕಡಿಮೆ ಇರುವ ಶಾಲೆಗಳಲ್ಲಿ ಪ್ರತಿದಿನ ಶಾಲೆ ನಡೆಸಲು ಸೂಚಿಸಿದೆ.
ಪ್ರತ್ಯೇಕ ಕೊಠಡಿ: ಶಾಲೆಗೆ ಬಂದ ಮಕ್ಕಳಿಗೆ ಕರೋನ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗುವುದು. ಇದಕ್ಕಾಗಿಯೇ ಎಲ್ಲಾ ಶಾಲೆಗಳಲ್ಲಿ ಪ್ರತ್ಯೇಕ ಕೊಠಡಿ ಕಲ್ಪಿಸಲಾಗಿದೆ.
ಮುಖ್ಯ ಶಿಕ್ಷಕರು ಸಮೀಪದ ಆರೋಗ್ಯಕೇಂದ್ರದೊಂದಿಗೆ ಸಂಪರ್ಕ ದಲ್ಲಿದ್ದು, ಯಾವುದೇ ಮಗುವಿಗೆ ಆರೋಗ್ಯದಲ್ಲಿ ತೊಂದರೆ ಕಂಡು ಬಂದಲ್ಲಿ ತಕ್ಷಣ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಶಾಲೆಗಳಿಗೆ ಬರುವ ಮಕ್ಕಳಿಗೆ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯವಾ ಗಿದ್ದು, ಹೆಚ್ಚಿನ ಪೋಷಕರು ಶಾಲೆ ನಡೆಸಲು ಒಪ್ಪಿದ್ದಾರೆ ಎನ್ನಲಾಗಿದೆ.
ಸರ್ಕಾರ ಈ ಬಾರಿ ಶೇ.೩೦ರಷ್ಟು ಪಠ್ಯವನ್ನು ಕಡಿತಗೊಳಿಸಿರುವುದರಿಂದ ಮಕ್ಕಳಿಗೆ ಹೊರೆಯಾಗುವುದಿಲ್ಲ, ಈಗಾಗಲೇ ಶಿಕ್ಷಕರಿಗೆ ಪಠ್ಯದ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಾಗಿದೆ.
ಇಂದು ಡಿಡಿಪಿಐ ರಮೇಶ್‌ರವರು ನಗರದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಹಾಜರಾತಿ, ಕೋವಿಡ್ ನಿಯಮ ಪಾಲನೆ ಬಗ್ಗೆ ಪರಿಶೀಲನೆ ನಡೆಸಿದರು.
ಬ್ರಿಟನ್‌ನ ರೂಪಾಂತರಗೊಂಡ ಕೊರೊನಾ ಭೀತಿ ನಡುವೆಯೂ ಸರ್ಕಾರದ ಸಾಕಷ್ಟು ಜಾಗೃತಿ, ಅಗತ್ಯ ಮುನ್ನೆಚ್ಚರಿಕೆ ನಡುವೆ ಶಾಲಾ- ಕಾಲೇಜುಗಳು ಆರಂಭವಾದವು. ರಾಜದ್ಯಂತ ವಿದ್ಯಾಗಮ ತರಗತಿಗಳನ್ನು ಪ್ರಾರಂಭಿಸಲಾಯಿತು.
ಶಾಲಾ-ಕಾಲೇಜುಗಳಲ್ಲ, ಇವು ಸುರಕ್ಷತಾ ಕೇಂದ್ರಗಳೆಂದು ಭಾವಿಸಿ ಎಂದು ಸಿಎಂ ಯಡಿಯೂರಪ್ಪ , ಶಿಕ್ಷಣ ಸಚಿವ ಸುರೇಶ್‌ಕುಮಾರ್, ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟ ಭರವಸೆ ನೀಡಿ ಪೋಷಕರಿಗೆ ಅಭಯ ನೀಡಿರುವುದರಿಂದ ಹಿನ್ನೆಲೆಯಲ್ಲಿ ಮಕ್ಕಳನ್ನು ಪೋಷಕರು ನಿರಾತಂಕವಾಗಿ ಕಳುಹಿಸಿದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು, ಶಿವಮೊಗ್ಗ, ದಾವಣಗೆರೆ ಮೈಸೂರು, ಮಂಗಳೂರು, ಉಡುಪಿ, ಬೆಳಗಾವಿ, ರಾಯಚೂರು, ಧಾರವಾಡ, ಕೊಪ್ಪಳ, ಚಿತ್ರದುರ್ಗ, ಚಾಮರಾಜನಗರ, ಮಂಡ್ಯ ಸೇರಿದಂತೆ ರಾಜದ್ಯಂತ ಎಲ್ಲ ಶಾಲೆಗಳಲ್ಲೂ ವಿದ್ಯಾರ್ಥಿಗಳ ಕಲರವ ಕಂಡುಬಂತು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿಗಳನ್ನು ಪ್ರಾರಂಭಿಸ ಲಾಯಿತು. ೧೦ ತಿಂಗಳಿನಿಂದ ಮನೆಯಲ್ಲೇ ಕುಳಿತು ಆನ್‌ಲೈನ್ ಶಿಕ್ಷಣದಿಂದ ಬೇಸತ್ತಿದ್ದ ಮಕ್ಕಳು ಇಂದು ಶಾಲೆಗೆ ತೆರಳಿ ತಮ್ಮ ಸ್ನೇಹಿತರು, ಶಿಕ್ಷಕರು, ಉಪನ್ಯಾಸಕರೊಂದಿಗೆ ಬೆರೆತು ಸಂತಸ ಪಟ್ಟರು.
ಹಾಜರಾಗುವುದು ಕಡ್ಡಾಯವಲ್ಲ: ಶಾಲೆಗೆ ಹಾಜರಾಗುವುದು ಕಡ್ಡಾಯ ವಲ್ಲ. ಆನ್‌ಲೈನ್ ಮೂಲಕವೂ ಕಲಿಯಬಹುದು. ಪೋಷಕರ ಒಪ್ಪಿಗೆ ಪತ್ರ ನೀಡಬೇಕು. ಮಕ್ಕಳ ಆರೋಗ್ಯದ ಬಗ್ಗೆ ಶಿಕ್ಷಕರೊಬ್ಬರು ನಿಗಾ ಇಟ್ಟಿರುv ರೆ. ತರಗತಿಗಳು ಕೆಲವೇ ಗಂಟೆಗಳು ನಡೆಯಲಿವೆ. ಮಕ್ಕಳಿಗೆ ಮನೆಯಿಂದಲೇ ಕುಡಿಯುವ ನೀರು ಕಳುಹಿಸಿಕೊಡಿ. ಶೈಕ್ಷಣಿಕ ಭವಿಷ್ಯಕ್ಕಿಂತ ಮಕ್ಕಳ ಆರೋಗ್ಯ ಮುಖ್ಯ ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್ ಸಲಹೆ ನೀಡಿದ್ದಾರೆ.