ತಮ್ಮ ಸಾವಿನ ನಂತರವೂ ಜನರ ಪ್ರೀತಿಗೆ ಪಾತ್ರರಾಗುವವರೇ ನಿಜವಾದ ಸಾಧಕರು: ಡಾ| ಚನ್ನಮಲ್ಲಿಕಾರ್ಜುನ ಸ್ವಾಮೀಜಿ

379

ಹೊನ್ನಾಳಿ: ತಮ್ಮ ಸಾವಿನ ನಂತರವೂ ಜನರ ಪ್ರೀತಿಗೆ ಪಾತ್ರರಾಗು ವವರೇ ನಿಜವಾದ ಸಾಧಕರು ಎಂದು ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇತ್ತೀಚೆಗೆ ನಡೆದ ಗ್ರಾಪಂ ಚುನಾವಣಾ ಫಲಿತಾಂಶ ತಿಳಿಯುವ ಮೊದಲೇ ಇಹಲೋಕ ತ್ಯಜಿಸಿದ ಮುಖಂಡ ಡಿ. ಬಸಪ್ಪ ಅವರ ಕೈಲಾಸ ಸಮಾರಾಧನೆ ಪ್ರಯುಕ್ತ ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ಏರ್ಪಡಿಸಿದ್ದ ಧರ್ಮಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ದಿ.ಡಿ. ಬಸಪ್ಪ ಅವರು ಅರಬಗಟ್ಟೆ ಗ್ರಾಪಂ ವ್ಯಾಪ್ತಿಯ ಸುಂಕದಕಟ್ಟೆ ಕ್ಷೇತ್ರದಿಂದ ಸತತವಾಗಿ ಐದು ಬಾರಿ ಸದಸ್ಯರಾಗಿ ಚುನಾಯಿತರಾಗಿದ್ದರು. ಒಮ್ಮೆ ಅರಬಗಟ್ಟೆ ಗ್ರಾಪಂ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಕೂಡ ಜಯಶಾಲಿಯಾಗುವ ಮೂಲಕ ಸತತ ೬ನೇ ಬಾರಿಗೆ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿzರೆ. ಆದರೆ, ಗೆಲುವಿನ ಸಂಭ್ರಮ ಹಂಚಿಕೊಳ್ಳುವಷ್ಟರಲ್ಲಿ ಅವರು ನಿಧನರಾಗಿರುವುದು ದುಃಖದ ಸಂಗತಿಯಾಗಿದೆ. ದಿ.ಡಿ. ಬಸಪ್ಪ ಅವರು ಸುಂಕದಕಟ್ಟೆ ಗ್ರಾಮದ ಪವಿತ್ರ ಕ್ಷೇತ್ರ ಶ್ರೀ ಮಂಜುನಾಥ ಸ್ವಾಮಿ-ಶ್ರೀ ನರಸಿಂಹ ಸ್ವಾಮಿ ದೇವಾಲಯದ ಕನ್ವೀನರ್ ಆಗಿ ಕೂಡ ಉತ್ತಮ ಸೇವೆ ಸಲ್ಲಿಸಿದ್ದರು ಎಂದು ಸ್ಮರಿಸಿದರು.
ಬಸಪ್ಪ ಅವರ ನಿಧನದಿಂದ ಮತ್ತೆ ಚುನಾವಣೆ ಅನಿವಾರ್ಯವಾಗಿದೆ. ಆಗ ಈ ಕ್ಷೇತ್ರದ ಜನತೆ ಅವರ ಮಗನನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಂಡರೆ ಉತ್ತಮ ಎಂದು ಅಭಿಪ್ರಾಯಪಟ್ಟರು.
ಗ್ರಾಪಂ ಸದಸ್ಯ ಮಂಜುನಾಥ್, ಚಂದ್ರಮ್ಮ ಹಳದಪ್ಪ, ಗುತ್ತಿಗೆದಾರ ಎಸ್.ಕೆ. ನರಸಿಂಹಮೂರ್ತಿ, ಕಾಯಿಬರುಡೆ ಸಿದ್ಧಪ್ಪ, ಹನುಮಂತಪ್ಪ, ಹಿರೇಕಲ್ಮಠದ ರೈತ ಮುಖಂಡ ಬಸವರಾಜಪ್ಪ ಮತ್ತಿತರರು ಮಾತನಾಡಿದರು.
ಮುಖಂಡರಾದ ಗಜೇಂದ್ರಪ್ಪ, ಎಸ್.ವಿ. ನಾರಾಯಣಸ್ವಾಮಿ, ವರುಣಾಚಾರಿ, ಮಂಜಪ್ಪ, ಸುರೇಶ್ ತಕ್ಕನಹಳ್ಳಿ, ಸುರೇಶ್ ಸುತ್ತುಕೋಟೆ, ರೈತ ಮುಖಂಡ ಕರಿಬಸಪ್ಪ, ಶ್ರೀ ಮಂಜುನಾಥ ಸ್ವಾಮಿ-ಶ್ರೀ ನರಸಿಂಹ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಎಸ್. ರಾಜುಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.