ತಮಿಳುನಾಡಿನಲ್ಲಿ ಲಘು ಭೂಕಂಪ

56
ತಮಿಳುನಾಡಿನಲ್ಲಿ ಲಘು ಭೂಕಂಪ
ಚೆನ್ನೈ: ತಮಿಳುನಾಡಿನ ಉತ್ತರ ಭಾಗದಲ್ಲಿರುವ ವೆಲ್ಲೂರ್ ಪಟ್ಟಣದಲ್ಲಿ ಇಂದು ನಸುಕಿನ ಜಾವ ಲಘು ಭೂಕಂಪ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಆಫ್ ಸಿಸ್ಮಾಲಜಿ ತಿಳಿಸಿದೆ.
ರಿಕ್ಟರ್ ಮಾಪಕದಲ್ಲಿ ೩.೬ ತೀವ್ರ ದಾಖಲಾದ ಭೂಕಂಪ ಇಂದು ನಸುಕಿನ ಜವ ಭಾರತೀಯ ಕಾಲಮಾನ ೦೪:೧೭:೨೨ರಲ್ಲಿ ಘಟಿಸಿದೆ ಎಂದು ಎನ್‌ಸಿಎಸ್ ಹೇಳಿದೆ.
೨೫ ಕಿ.ಮೀಗಳಷ್ಟು ಆಳದ ಭೂಕಂಪ ಇದಗಿದ್ದು, ವೆಲ್ಲೂರಿನಿಂದ ೫೯ ಕಿ.ಮೀಗಳಷ್ಟು ಆಚೆಗೆ ಮತ್ತು ಚೆನ್ನೈನಿಂದ ಪಶ್ಚಿಮಕ್ಕೆ ೧೮೪ ಕಿ.ಮೀ ಗಳಷ್ಟು ದೂರದಲ್ಲಿ ಕಂಪನ ಉಂಟಾಗಿದೆ ಎಂದು ಭೂ ವಿಜನಗಳು ಸಚಿವಾಲಯದ ಅಡಿಯಲ್ಲಿ ಬರುವ ಎನ್‌ಸಿಎಸ್ ಮಾಹಿತಿ ನೀಡಿದೆ.