ತಬ್ಲಿಘಿ ಜಮಾತ್‌ಗೆ ತೆರಳಿದ್ದ ೯ ಮಂದಿ ಶಿವಮೊಗ್ಗಕ್ಕೆ ಎಂಟ್ರಿ…

525

ಶಿವಮೊಗ್ಗ: ತಬ್ಲಿಘಿ ಜಮಾತ್ ಹೋಗಿದ್ದ ೯ ಮಂದಿ ಇಂದು ಶಿವಮೊಗ್ಗ ನಗರಕ್ಕೆ ವಾಪಾಸ್ ಬಂದಿದ್ದು ಅವರನ್ನೆಲ್ಲ ನಗರದ ಸಹ್ಯಾದ್ರಿ ಕಾಲೇಜು ತಪಾಸಣೆ ಒಳಪಡಿಸಲಾಗಿದೆ.
ಮಾ.೫ರಂದು ಗುಜರಾತ್‌ನ ಅಹಮದಾಬಾದ್‌ಗೆ ದಾವಣಗೆರೆಯಿಂದ ರೈಲಿನ ಮೂಲಕ ಇವರೆಲ್ಲ ತೆರಳಿದ್ದ ಇವರು, ಜಮಾತೆಯಲ್ಲಿ ಭಾಗವಹಿಸಿದ ನಂತರ ಲಾಕ್‌ಡೌನ್ ಇದ್ದಿದ್ದರಿಂದ ಅಲ್ಲಿನ ಮಸೀದಿಯೊಂದರಲ್ಲಿ ಇವರು ಆಶ್ರಯ ಪಡೆದಿದ್ದರು. ಅಲ್ಲದೇ ಲಾಕ್‌ಡೌನ್ ವೇಳೆ ಗುಜರಾತ್ ಸರ್ಕಾರ ಇವರೆಲ್ಲನ್ನೆಲ್ಲ ಕ್ವಾರಂಟೈಲ್‌ನಲ್ಲಿ ಇರಿಸಿದ್ದು, ಅವಧಿ ಮುಗಿದ ಬಳಿಕ ಅಲ್ಲಿನ ಸರ್ಕಾರದ ಅನುಮತಿ ಮೇರೆಗೆ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದಾರೆ.
ತಬ್ಲಿಘಿಗಳನ್ನು ಸಂಪೂರ್ಣ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಜಿಲ್ಲಾಡಳಿತದ ಆದೇಶದಂತೆ ಇವರನ್ನೆಲ್ಲ ಸ್ಕ್ರ್ರೀನಿಂಗ್ ನಡೆಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಅವರನ್ನೆಲ್ಲ ಬಾಪೂಜಿನಗರದ ಹಾಸ್ಟೆಲ್‌ವೊಂದರಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಅಹಮದಾಬಾದ್ -ಮುಂಬೈ, ಬೆಳಗಾವಿ ಗಡಿಯ ಮೂಲಕ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದು ಇವರಲ್ಲಿ ಶಿಕಾರಿಪುರ ತಾಲ್ಲೂಕುನವರೇ ಹೆಚ್ಚಿನ ಜನರಿದ್ದಾರೆ ಎಂದು ತಿಳಿದುಬಂದಿದೆ.