ತಬ್ಲಿಘಿಗಳ ವಿರುದ್ಧ ಕೆಂಡಕಾರಿದ ಎಂಎಲ್‌ಸಿ ಆಯ್ನೂರ್..

91

ಶಿವಮೊಗ್ಗ: ದೇಶದಲ್ಲಿ ಕೋವಿಡ್-೧೯ ಪ್ರಕರಣಗಳು ದಿನೇ ದಿನೇ ಏರು ಮುಖದಲ್ಲಿ ಸಾಗುತ್ತಿದ್ದು, ಚಿಕಿತ್ಸೆಗೆ ಸಹಕಾರ ನೀಡದ ತಬ್ಲಿಘಿಗಳ ವರ್ತನೆಯನ್ನು ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ ಹಾಗೂ ರಾಜಕೀಯ ನಾಯಕರು ಖಂಡಿಸುವುದರ ಜೊತೆಗೆ ನಿಯಂತ್ರಿಸಬೇಕೆಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಆಗ್ರಹಿಸಿದ್ದಾರೆ.
ಸುದ್ಧಿಗೋಷ್ಟಿಯಲ್ಲಿಂದು ಈ ಕುರಿತು ಮಾತನಾಡುತ್ತಾ ಕೆಂಡಕಾರಿದ ಅವರು, ಕೊರೊನಾ ಸೋಂಕು ಹರಡುವಲ್ಲಿ ಕಾರಣರಾಗಿರುವ ತಬ್ಲಿಘಿಗಳ ಬಗ್ಗೆ ಕರುಣೆ ತೋರಿಸುವ ಅವಶ್ಯಕತೆ ಇಲ್ಲ. ಅಲ್ಪಸಂಖ್ಯಾತ ಧಾರ್ಮಿಕ ಮತ್ತು ರಾಜಕೀಯ ನಾಯಕರು ತಬ್ಲಿಘಿಗಳ ವರ್ತನೆಗೆ ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ ಎಂಬ ಶಂಕೆ ಇದ್ದು, ಇಡೀ ಸಮುದಾಯವನ್ನು ಅನುಮಾನದಿಂದ ನೋಡುವಂ ತಾಗಿದೆ. ತಬ್ಲಿಘಿಗಳಿಗೆ ವಿದೇಶಿ ಭಯೋತ್ಪಾದಕರ ನಂಟಿದೆ ಎಂಬ ಸಂಶಯಕ್ಕೆ ಅವರ ವರ್ತನೆಗಳೇ ಒಂದು ರೀತಿಯಲ್ಲಿ ಕಾರಣ ಎಂದು ಆರೋಪಿಸಿದರು.
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಪತ್ತೆಯಾದ ಕೊರೊನಾ ಸೋಂಕಿತರಲ್ಲಿ ಇಬ್ಬರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಅವರನ್ನು ಹಿಡಿಯಲಾಗಿದೆ. ಹಸಿರು ವಲಯವಾಗಿದ್ದ ಶಿವಮೊಗ್ಗ ಜಿಲ್ಲೆ ನೆಮ್ಮದಿಯಿಂದ ಇದ್ದು, ನಿನ್ನೆಯ ಪ್ರಕರಣದಿಂದ ಆತಂಕ ಪಡುವಂತಾ ಗಿದೆ. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನಲೆ ಹೊನ್ನಾಳಿ, ಚನ್ನಗಿರಿಯಲ್ಲಿ ತಬ್ಲಿಘಿಗಳ ಪ್ರವೇಶ ಭಯಮೂಡಿಸಿದೆ ಎಂದರು.
ಸೋಂಕು ಪೀಡಿತ ತಬ್ಲಿಘಿಗಳನ್ನು ಮದ್ರಸಾಗಳಲ್ಲಿ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡುವಂತೆ ಆಯನೂರು ಮಂಜುನಾಥ್ ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.