ತಪೋವನದ ಮಾಣಿಕ್ಯ ಡಾ| ಶಶಿಕುಮಾರ್ ಮುಡಿಗೆ ಮದರ್ ಥೆರೇಸಾ ಅವಾರ್ಡ್

494

ಹರಿಹರ: ಗೌರವ ತಾನಾಗೇ ಹುಡುಕಿಕೊಂಡು ಬರುವುದಲ್ಲ. ಸಮಾಜಕ್ಕೆ ನಾವೊಂದು ಕೊಡುಗೆ ಕೊಟ್ಟಾಗ ಪ್ರಶಸ್ತಿಗಳು ನಮ್ಮನ್ನು ಹುಡುಕಿಕೊಂಡು ಬಂದೇ ಬರುತ್ತವೆ. ಈ ಸಾಲಿಗೆ ಇದೀಗ ದಾವಣಗೆರೆ ಜಿಯ ಹರಿಹರ ತಾಲೂಕಿನ ದೊಡ್ಡಬಾತಿ ಬಳಿ ಇರುವ ತಪೋವನ ಸಂಸ್ಥೆ ಪಾತ್ರವಾಗಿದೆ.
ತಪೋವನ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ ಶಶಿಕುಮಾರ್ .ವಿ.ಎಮ್ ವಿಶ್ವದ ಕರುಣಾಮಯಿ ಎಂದೇ ಪ್ರಖ್ಯಾತರಾಗಿರುವ ಮದರ್ ಥೆರೇಸಾ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿzರೆ.
ಅಂತರ ರಾಷ್ಟ್ರೀಯ ದಾದಿಯರ ದಿನದ ಅಂಗವಾಗಿ ದಿ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಸಂಸ್ಥೆಗಳು ತಪೋವನದ ಅಧ್ಯಕ್ಷ ಶಶಿಕುಮಾರ್ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿವೆ.
ಇದರೊಂದಿಗೆ ರಾಜಕೀಯ, ಪತ್ರಿಕೋದ್ಯಮ, ಪೊಲೀಸ್, ಆರೋಗ್ಯ, ಕೃಷಿ, ಸಂಗೀತ, ಸಿನಿಮಾ, ಕ್ರೀಡೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಆದರೆ, ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ತಪೋವನ ಸಂಸ್ಥೆಯನ್ನು ಸಂಸ್ಥೆಗಳು ಗುರುತಿಸಿದ್ದು, ಅಧ್ಯಕ್ಷ ಡಾ.ಶಶಿಕುಮಾರ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿವೆ.
ಸಾಮಾಜಿಕ ಕಳಕಳಿಯಿಂದ ತಪೋವನ ಸಂಸ್ಥೆ ನಡೆಸುತ್ತಿರುವ ಸಂಸ್ಥೆ ಅಧ್ಯಕ್ಷ ಶಶಿಕುಮಾರ್ ಅವರು ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿzರೆ.
ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡುವ ಉದ್ದೇಶದಿಂದ ಶಶಿಕುಮಾರ್ ಕಳೆದ ೨೫ ವರ್ಷಗಳ ಹಿಂದೆ ತಪೋವನ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿzರೆ. ಅನಾಥ ಮಕ್ಕಳು, ವೃದ್ದರು ಹಾಗೂ ನಿರ್ಗತಿಕರನ್ನು ಕರೆತಂದು ವೃದ್ಧಾಶ್ರಯ ತೆರೆಯುವ ಮೂಲಕ ಆರೈಕೆ ಮಾಡುತ್ತಿzರೆ. ಈ ಮೂಲಕ ಡಾ. ಶಶಿಕುಮಾರ ಅನಾಥರ ಬಾಳಿಗೆ ಬೆಳಕಾಗಿ ಅವರ ಜೀವನಕ್ಕೆ ಒಂದು ಹೊಸ ದಿಕ್ಕನ್ನು ತೋರುವುದಕ್ಕಾಗಿ ಸಮಾಜ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿzರೆ.
ಇಷ್ಟೆ ಅಲ್ಲದೇ, ಆರೋಗ್ಯ ಕ್ಷೇತ್ರದಲ್ಲೂ ಡಾ| ಶಶಿಕುಮಾರ್ ಜನರ ನೆರವಿಗೆ ನಿಂತಿದ್ದು, ನಿರ್ಗತಿಕ ಹಾಗೂ ಬಡವರಿಗೆ ಉಚಿತ ಚಿಕಿತ್ಸೆಯನ್ನು ಮುಂದವರಿಸಿzರೆ. ಇದೀಗ ಮನುಕುಲದ ಮೇಲೆ ಹಾವಳಿ ನಡೆಸಿರುವ ಮಹಾಮಾರಿ ಕೊರೊನಾ ನಿಯಂತ್ರಣ ಹಾಗೂ ಜನರ ಆರೋಗ್ಯ ದೃಷ್ಟಿಯಿಂದ ಡಾ| ಶಶಿಕುಮಾರ್ ಹಲವಾರು ಪ್ರಯೋಗಗಳನ್ನು ಮಾಡಿzರೆ.
ಜನರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ಅವರಿಗೆ ಚವನ್ ಪ್ರಾಶ್ ಹಾಗೂ ಚೂರ್ಣ ವನ್ನು ತಮ್ಮ ತಪೋವನ ಸಂಸ್ಥೆಯ ತಯಾರು ಮಾಡಿದ್ದು, ಜನರಿಗೆ ನೀಡಲಾಗುತ್ತಿದೆ. ಇದನ್ನು ಪ್ರಯೋಗಿಸಿರುವ ಜನರಿಗೆ ಇದು ಸಾಕಷ್ಟು ಉತ್ತಮ ಫಲಿತಾಂಶವನ್ನು ನೀಡಿದೆ.
ಅಲ್ಲದೇ, ತಪೋವನ ಸಂಸ್ಥೆ ತಯಾರಿಸುವ ಚವನ್ ಪ್ರಾಶ್ ಹಾಗೂ ಚೂರ್ಣ ಇದೀಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಈ ಮೂಲಕ ತಪೋವನ ಸಂಸ್ಥೆ ಅಧ್ಯಕ್ಷ ಡಾ| ಶಶಿಕುಮಾರ್ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿzರೆ.
ಇವರ ಈ ಸೇವೆಯನ್ನು ಹುಡುಕಿಕೊಂಡು ಇದೀಗ ಮಾನವತಾ ಮಾತೆ ಮದರ್ ಥೆರೇಸಾ ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿದೆ. ಡಾ| ಶಶಿಕುಮಾರ್ ಅವರಿಗೆ ಈ ಪ್ರಶಸ್ತಿ ದೊರೆತಿರುವುದು ಹರಿಹರ ಸೇರಿದಂತೆ ದಾವಣಗೆರೆ ಜಿಯ ಜನರಿಗೆ ಅತೀವ ಸಂತಸ ತಂದಿದೆ.