ತಡೆಯಾಜ್ಞೆ :ಗೌಡರ ಡಿಸಿಸಿ ಬ್ಯಾಂಕ್ ಗದ್ದುಗೆ ಸೇಫ್

492

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ಹೈಕೋರ್ಟ್ ಈ ಚುನಾವಣೆಗೆ ತಡೆಯಾe ನೀಡಿದ್ದಲ್ಲದೆ ಆರ್.ಎಂ. ಮಂಜುನಾಥಗೌಡ ಅವರ ಬ್ಯಾಂಕ್ ಸದಸ್ಯತ್ವದ ರದ್ದತಿಗೂ ತಡೆ ನೀಡಿದೆ.
ಈ ಮಹತ್ವದ ಬೆಳವಣಿಗೆಯಿಂದಾಗಿ ಇಂದು ನಿಗಧಿಯಾಗಿದ್ದ ಡಿಸಿಸಿ ಬ್ಯಾಂಕ್‌ನ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೂ ರದ್ದಾಗಿದೆ. ಹೈಕೋರ್ಟ್‌ನ ಹಿರಿಯ ನ್ಯಾಯಾಧೀಶರಾದ ದೇವದಾಸ್ ಅವರು ಇಂದು ಬೆಳಿಗ್ಗೆ ಈ ಮಧ್ಯಂತರ ಆದೇಶ ನೀಡಿದ್ದು, ನಿನ್ನೆಯೇ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬಾರದೆಂದು ತಿಳಿಸಿದ್ದರು ಎನ್ನಲಾಗಿದೆ.
ಈ ತಡೆಯಾeಯಿಂದಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣ ಆರ್.ಎಂ. ಮಂಜುನಾಥಗೌಡ ಅವರೇ ಮುಂದು ವರೆಯಲಿದ್ದಾರೆ. ಹಳೆಯ ಕಮಿಟಿಯೇ ಕಾರ್ಯ ನಿರ್ವಹಣೆ ಮಾಡಲಿದೆ.
ಡಿಸಿಸಿ ಬ್ಯಾಂಕಿನಲ್ಲಿ ಈ ಹಿಂದೆ ನಡೆದಿದ್ದ ಹಗರಣವನ್ನು ಮುಂದಿಟ್ಟು ಕೊಂಡು ಆಗ ಅಧ್ಯಕ್ಷರಾಗಿದ್ದ ಮಂಜುನಾಥಗೌಡರನ್ನು ಸರ್ಕಾರ ಸಹಕಾರಿ ಕಾಯ್ದೆ ೨೯(ಸಿ) ಅಡಿಯಲ್ಲಿ ಬ್ಯಾಂಕಿನ ಸದಸ್ಯತ್ವವನ್ನೇ ೧೫ ದಿನಗಳ ಹಿಂದೆ ಸಹಕಾರಿ ಇಲಾಖೆ ಜಂಟಿ ನಿರ್ದೇಶಕರು ರದ್ದು ಮಾಡಿದ್ದರು.
ಇದರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದ ಮಂಜುನಾಥಗೌಡರು ತಮ್ಮ ಸದಸ್ಯತ್ವ ರದ್ದಿನ ವಿರುದ್ಧ ಹೈಕೋರ್ಟ್‌ನಲ್ಲಿ ತಡೆಯಾe ಕೋರಿದ್ದರು ಹಾಗೂ ಹೊಸ ಅಧ್ಯಕ್ಷರ ಆಯ್ಕೆಯ ಚುನಾವಣೆಗೂ ತಡೆ ನೀಡಲು ಅರ್ಜಿ ಸಲ್ಲಿಸಿದ್ದರು.
ಈಗ ತಡೆಯಾe ಬಂದಿರುವುದ ರಿಂದ ಮಂಜುನಾಥ ಗೌಡರು ಮತ್ತೆ ಡಿಸಿಸಿ ಬ್ಯಾಂಕ್‌ನ ಅಧಿಕಾರದ ಚುಕ್ಕಾಣಿ ಹಿಡಿದು ತಮ್ಮ ಆಡಳಿತ ಮುಂದುವರೆಸಲಿದ್ದಾರೆ.
ಹೈಕೋರ್ಟ್‌ನ ಈ ತಡೆಯಾe ಬ್ಯಾಂಕಿನ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ಸದಸ್ಯರಿಗೆ ಭಾರೀ ಹಿನ್ನೆಡೆ ಆದಂತಾಗಿದೆ. ಕಳೆದ ೩ ದಶಕಗಳಿಂದ ಡಿಸಿಸಿ ಬ್ಯಾಂಕ್ ಮೇಲೆ ಹಿಡಿತ ಹೊಂದಿರುವ್ದ ಮಂಜುನಾಥ ಗೌಡರನ್ನು ಬ್ಯಾಂಕಿನಿಂದಲೇ ಹೊರ ಹಾಕುವ ಬಿಜೆಪಿ ಪ್ರಯತ್ನ ಕೊನೆ ಘಳಿಗೆಯಲ್ಲಿ ಕೈಕೊಟ್ಟಂತಾಗಿದೆ.
ಚುನಾವಣಾದಿಕಾರಿ ಸ್ಪಷ್ಟನೆ: ಡಿಸಿಸಿಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಸಂಬಂಧ ಜು.೨೦ರಂದೇ ಪ್ರಕ್ರಿಯೆ ಆರಂಭಿಸಿ ಎಲ್ಲಾ ನಿರ್ದೇಶಕರಿಗೆ ಮಾಹಿತಿ ನೀಡಲಾಗಿತ್ತು. ಆದರೆ ನಿನ್ನೆ ಸಂಜೆ ಹೈಕೋರ್ಟ್ ನ್ಯಾಯಾಧೀಶರು ಸೂಚನೆ ಕಳುಹಿಸಿ ತಾವು ಜು.೩೦ರ ಇಂದು ಬೆಳಿಗ್ಗೆ ೧೦.೩೦ಕ್ಕೆ ಈ ಚುನಾವಣೆ ಬಗ್ಗೆ ಮಧ್ಯಂತರ ಆದೇಶ ನೀಡುವುದರಿಂದ ಚುನಾವಣೆ ಪ್ರಕ್ರಿಯೆಯನ್ನು ಸ್ಥಗಿತ ಮಾಡಲು ತಿಳಿಸಿದ್ದರು.
ಅದರಂತೆ ಇಂದು ಬೆಳಿಗ್ಗೆ ಅವರು ಮಧ್ಯಂತರ ಆದೇಶ ನೀಡಿದ್ದು, ಮಂಜುನಾಥಗೌಡರ ಬ್ಯಾಂಕ್ ಸದಸ್ಯತ್ವ ರದ್ದತಿಗೆ ತಡೆ ನೀಡಿದ್ದಾರೆ ಹಾಗೂ ಚುನಾವಣೆ ನಡೆಸಲು ತಡೆಯಾe ನೀಡಿದ್ದಾರೆ. ಇದರಿಂದಾಗಿ ಇಂದು ಚುನಾವಣೆಯನ್ನು ರದ್ದು ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆದರೆ ಎಂ.ಡಿ. ಬದಲಾವಣೆ ಮಾಡಿರುವ ವಿಚಾರ ಇದಕ್ಕೆ ಸಂಬಂಧಿಸುವುದಿಲ್ಲ ಎಂದಿದ್ದಾರೆ.
ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡರು, ರಾಜ್ಯ ಬಿಜೆಪಿ ಸರ್ಕಾರದ ಸೇಡಿನ ರಾಜಕಾರಣಕ್ಕೆ ವಿಷಾದಿಸಿದರು. ನ್ಯಾಯದೇವತೆ ತಮ್ಮ ಪರವಿರುವಾಗ ಯಾವುದೇ ಕುತಂತ್ರಗಳು ನಡೆಯುವುದಿಲ್ಲ ಎಂದು ನುಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.