ಡಿ.15: ಎಸ್‌ಎಂಎಸ್‌ಎಸ್‌ಎಸ್‌ನಿಂದ ಪೊಲೀಸ್ ಸಿಬ್ಬಂದಿಗಳೊಂದಿಗೆ ಕ್ರಿಸ್‌ಮಸ್ ಆಚರಣೆ

157

ಶಿವಮೊಗ್ಗ: ನಗರದ ಹೊರವಲಯದ ಸಾಗರ ರಸ್ತೆ ಆಲ್ಕೊಳ ಸರ್ಕಲ್‌ನ ಚೈತನ್ಯ ಸಭಾಂಗಣದಲ್ಲಿ
ಪ್ರತಿಷ್ಠಿತ ದಿ ಶಿವಮೊಗ್ಗ ಮಲ್ಪಿಪರ್ಪಸ್ ಸೋಶಿಯಲ್ ಸರ್ವೀಸ್ ಸೊಸೈಟಿ (ರಿ.) ವತಿಯಿಂದ ಡಿ.೧೫ರ ನಾಳೆ ಸಂಜೆ ೬.೩೦ಕ್ಕೆ ಪೊಲೀಸ್ ಸಿಬ್ಬಂದಿಗಳೊಂದಿಗೆ ಕ್ರಿಸ್‌ಮಸ್ ಆಚರಣೆ ಹಮ್ಮಿಕೊಳ್ಳಲಾಗಿದೆ.


ಬೆಕ್ಕಿನ ಕಲ್ಮಠದ ಪೂಜ್ಯ ಶ್ರೀ ಡಾ| ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳ ಸಾನಿಧ್ಯದಲ್ಲಿ ಜರುಗಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಹಾಗೂ ಎಸ್‌ಎಂಎಸ್‌ಎಸ್‌ಎಸ್‌ನ ಅಧ್ಯಕ್ಷರೂ ಆದ
ಪರಮಪೂಜ್ಯ ಡಾ| ಫ್ರಾನ್ಸಿಸ್ ಸೆರಾವೋ ಅವರು ವಹಿಸಲಿದ್ದಾರೆ.


ಶಿವಮೊಗ್ಗ ಮರ್ಕಝ್ ಸಅದ ಜನರ್ ಮ್ಯಾನೇಜರ್ ಹಾಗೂ ಎಸ್‌ಎಸ್‌ಎಫ್‌ನ ಅಧ್ಯಕ್ಷರಾದ
ಜನಾಬ್ ಅಬ್ದುಲ್ ಲತೀಫ್ ಸಅದಿ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದು, ಜಿಲ್ಲಾಧಿಕಾರಿ
ಕೆ.ಬಿ. ಶಿವಕುಮಾರ್ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ. ಲಕ್ಷ್ಮಿಪ್ರಸಾದ್ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕರಾದ ರೆ| ಫಾ| ಕ್ಲಿಫರ್ಡ್ ರೋಶನ್ ಪಿಂಟೋ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


————————————————-
ಸುದ್ದಿ , ಜಾಹೀರಾತು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ WhatsApp : 9482482182
email: hosanavika@gmail.com
website : hosanavika.in
hosanavika.com