ಡಿಕೆಶಿ ಅಭಿಮಾನಿಗಳ ಸಂಘದಿಂದ ಕರೋನಾ ವಾರಿಯರ್‍ಸ್‌ಗಳಿಗೆ ಸನ್ಮಾನ

468

ಶಿವಮೆಗ್ಗ: ಗಡಿಯಲ್ಲಿ ಕಾವಲು ಕಾಯುವ ಸೈನಿಕರು ದೇಶ ರಕ್ಷಕರಾದರೆ ಕೋವಿಡ್-೧೯ ಎಂಬ ಮಾರಕ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಹಾಗೂ ನಿವಾರಿಸಲು ಹಗಲಿರುಳು ಹೋರಾಡುತ್ತಿರುವ ಕರೋನಾ ವಾರಿಯರ್‍ಸ್‌ಗಳು ಮಾನವನ ದೇಹ ರಕ್ಷಕರು ಎಂದು ಯಕ್ಷಗಾನ ಕಲಾವಿದ, ಡಿವಿಎಸ್ ಕಾಲೇಜಿನ ಉಪನ್ಯಾಸಕ ವಿ| ದತ್ತಮೂರ್ತಿ ಭಟ್ ಹೇಳಿದರು.
ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದಿಂದ ಮಥುರಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರೋನಾ ವಾರಿಯರ್‍ಸ್, ಆಶಾ ಕಾರ್ಯಕರ್ತೆ ಯರಿಗೆ ಸನ್ಮಾನ ಹಾಗೂ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಶ್ರದ್ಧಾಂಜಲಿ ಹಾಗೂ ನುಡಿ ನಮನ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಕೋವಿಡ್ ೧೯ ಸೋಂಕಿನ ವಿರುದ್ಧ ಅವಿರತವಾಗಿ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಆಶಾ ಕಾರ್ಯಕರ್ತೆಯರು ಮತ್ತು ಮಾಧ್ಯಮದವರ ಸೇವೆ ಶ್ಲಾಘನೀಯ. ಇವರೆಲ್ಲರೂ ತಮ್ಮ ಪ್ರಾಣ ಪಣಕ್ಕಿಟ್ಟು ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಎಂದರು.
ದೇಶ ಹಾಗೂ ರಾಜ್ಯದಲ್ಲಿ ಕರೋನ ಸೋಂಕಿನ ಮಹಾಮಾರಿಗೆ ಈವರೆಗೆ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಪ್ರತಿ ನಿತ್ಯ ರೋಗಿಗಳ ಸಂಖ್ಯೆ ಹೆಚ್ಚತ್ತಲೇ ಇದೆ. ಸಂಘಟಿತ ಪ್ರಯತ್ನದಿಂದ ಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ಎಸ್. ಅಂಗಡಿ, ಜಿಲ್ಲಾಧ್ಯಕ್ಷ ಆರ್. ಮೋಹನ್, ಕೆ.ಎಸ್. ಪ್ರಶಾಂತ್, ರುದ್ರೇಗೌಡ ಪಿ. ಪಾಟೀಲ್, ರಾಮಚಂದ್ರ ನಾಯಕ್, ಆನಂದ್ ಮಿಶ್ರಾ, ಪತ್ರಕರ್ತ ಹೆಚ್. ಜಿ. ಪೂರ್ಣೇಶ್ ಇನ್ನಿತರರಿದ್ದರು.