ಟೂರಿಸಂ ಸರ್ಕ್ಯೂಟ್ ನಿರ್ಮಿಸಲು ಪ್ರಸ್ತಾವನೆ

419

ದಾವಣಗೆರೆ: ಜಿಯಲ್ಲಿ ಟೂರಿಸಂ ಸರ್ಕ್ಯೂಟ್ ಮಾಡಬೇಕೆಂಬ ಉದ್ದೇಶದಿಂದ ಸುಮಾರು ೩೫ ಕೋಟಿ ವೆಚ್ಚದ ಪ್ರಸ್ತಾವನೆ ತಯಾರಿಸಿ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಜಿಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಜಿಡಳಿತ ಮತ್ತು ಜಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಹರಿಹರದ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಸ್ವಚ್ಛತಾ ಪಕ್ವಾಡ-೨೦೨೦ ಹಾಗೂ ಆರೋಗ್ಯ ಸುರಕ್ಷತೆ ಅರಿವು ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಯು ರಾಜ್ಯದ ಹೃದಯ ಭಾಗದಲ್ಲಿದ್ದು, ಸಂಪರ್ಕದ ಕೊಂಡಿ ಯಾಗಿದೆ. ಈ ಹಿನ್ನೆಲೆಯಲ್ಲಿ ಜಿಯಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು ಇದರ ಉದ್ದೇಶ ಎಂದರು.
ರಾಜ್ಯದಿಂದ ಈ ಪ್ರಸ್ತಾವನೆಯು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಲಾ ಗುವುದು. ಬಳಿಕ ಅನುಮೋದನೆ ಗೊಳ್ಳಲಿದೆ. ಇದಕ್ಕಾಗಿ ಜಿಯ ಜನಪ್ರತಿನಿಧಿಗಳು ಕೈ ಜೋಡಿಸಿzರೆ. ಪ್ರವಾಸೋದ್ಯಮ ಇಲಾಖೆಗೆ ಏನೇನು ಅವಶ್ಯಕತೆ ಇದಿಯೋ ಅದರ ಕುರಿತು ನೀಲನಕ್ಷೆ ಸಿದ್ದಪಡಿಸುವ ಮೂಲಕ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ನಾಗರಿಕರು ಜಿಯ ಪ್ರಸಿದ್ಧ ಪ್ರವಾಸಿ ತಾಣಗಳನ್ನು ನೋಡಿ ಆನಂದಿಸುವ ಮೂಲಕ ಪ್ರವಾಸೋದ್ಯಮ ಬೆಳೆಸಬೇಕಿದೆ ಎಂದು ಹೇಳಿದರು.
ಕೊರೊನಾದಿಂದಾಗಿ ರಜೆ ಮರೆ ಯುತ್ತಿದ್ದೇವೆ. ಎ ದಿನ ಕೊರೊನಾ ದಿನವಾಗಿದ್ದು, ಪ್ರತಿದಿನ ಕೊರೊನಾ ಕುರಿತು ಯೋಚಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾವು ಕೊರೊನಾಕ್ಕೆ ಪ್ರಥಮ ಪ್ರಶಾಸ್ತ್ಯ ನೀಡಿ ನಂತರ ಉಳಿದ ಇತರ ಕೆಲಸ ಮಾಡಬೇಕಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಬಹಷ್ಟು ಜಾಗೃತಿ ವಹಿಸಬೇಕಾಗಿದೆ. ಕೊರೊನಾ ಕುರಿತು ಸಂದೇಶ ಇರು ವಂತಹ ವಿಡಿಯೋಗಳನ್ನು ಜನರಿಗೆ ತಲುಪಿಸಿ ಅವರಲ್ಲಿನ ತಪ್ಪು ಕಲ್ಪನೆ ದೂರವಾಗಿಸಬೇಕಿದೆ ಎಂದು ಸಲಹೆ ನೀಡಿದರು.
ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಕಂಡಲ್ಲಿ ಮಾತ್ರ ಜನರು ಮಾಸ್ಕ್ ಧರಿಸುವ ಪ್ರವೃತ್ತಿ ಬೆಳೆಸಿ ಕೊಂಡಿzರೆ. ಇದು ಸರಿಯಲ್ಲ. ಕೊರೊನಾ ಕುರಿತು ಯಾವುದೇ ಜಾಗೃತಿ ವಹಿಸುತ್ತಿಲ್ಲ ಎಂದು ದೂರಿದ ಅವರು, ಸಾರ್ವಜನಿಕರು ಅಧಿಕಾರಿಗಳಿಗೆ ಅಂಜ ಬೇಕಿಲ್ಲ. ಬದಲಾಗಿ ಮಹಾಮಾರಿ ಸಾಂಕ್ರಾಮಿಕ ರೋಗವಾದ ಕೊರೊನಾಕ್ಕೆ ಅಂಜುವ ಮೂಲಕ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಬೇಕು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿ ಘಟಕದ ಅಧ್ಯಕ್ಷ ಮತ್ತು ಜಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಪಾಲಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿ, ೧೯೯೭ ರಿಂದ ಅಧಿಕೃತವಾಗಿ ಪ್ರತಿವರ್ಷವೂ ಒಂದೊಂದು ಸಂದೇಶದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರಸಕ್ತ ವರ್ಷ ಪ್ರವಾಸೋದ್ಯಮ ಮತ್ತು ಗ್ರಾಮೀಣಾಭಿವೃದ್ಧಿ ಎಂಬ ಸಂದೇಶ ದೊಂದಿಗೆ ಆಚರಣೆ ಮಾಡಲಾಗು ತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕುಂಠಿತಗೊಂಡಿದ್ದು, ಚುರುಕುಗೊಳಿಸುವ ನಿಟ್ಟಿನಲ್ಲಿ ಎಡೆ ಕಾರ್ಯಕ್ರಮ ಆಚರಣೆ ಮಾಡಲಾಗುತ್ತಿದೆ ಎಂದರು.
೫ ಐತಿಹಾಸಿಕ ಪ್ರಸಿದ್ಧ ಸ್ಥಳ:
ಹರಿಹರ ಲಿಂಗೇಶ್ವರ ದೇವಸ್ಥಾನ, ಸಂತೆಬೆನ್ನೂರಿನ ಪುಷ್ಕರಣಿ, ತೀರ್ಥರಾಮೇಶ್ವರ, ಶಾಂತಿಸಾಗರ ಹಾಗೂ ಕೊಂಡಜ್ಜಿ ಕೆರೆಗಳು ಜಿಯಲ್ಲಿ ಮಹತ್ವ ಪಡೆದ ೫ ಐತಿಹಾಸಿಕ ಪ್ರಸಿದ್ಧ ಸ್ಥಳಗಳಾಗಿವೆ. ಜಿ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ೨೦ಕ್ಕಿಂತ ಅಧಿಕ ಸ್ಥಳಗಳನ್ನು ಗುರುತಿಸ ಲಾಗಿದ್ದು, ಜಿಯಲ್ಲಿ ೨೫ ಕ್ಕಿಂತ ಹೆಚ್ಚು ಐತಿಹಾಸಿಕ ಸ್ಥಳವಿದೆ. ಕೆಲ ಐತಿಹಾಸಿಕ ಸ್ಥಳಗಳಿಗೆ ಕೆಲವೊಂದು(೨ನೇ ಪುಟಕ್ಕೆ)