ಝೀಟಿವಿ ಮುಖ್ಯಸ್ಥರಿಗೆ ಜೀವ ಬೆದರಿಕೆ; ಕ್ರಮಕ್ಕೆ ತಿಮ್ಮಪ್ಪ ಆಗ್ರಹ

460

ಹೊನ್ನಾಳಿ: ಝೀ-ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಹಾನಾಯಕ ಅಂಬೇಡ್ಕರ್ ಧಾರವಾಹಿಯನ್ನು ಪ್ರಸಾರ ಮಾಡುತ್ತಿರುವ ಝೀ-ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರಿಗೆ ಜೀವ ಬೆದರಿಕೆ ಹಾಕಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮಕೈಗೊಳ್ಳ ಬೇಕೆಂದು ಜೈ ಭೀಮ್ ಸಂಘಟನೆಯ ಮುಖಂಡ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ದಿಡಗೂರು ತಿಮ್ಮಪ್ಪ ಅವರು ಆಗ್ರಹಿಸಿದರು.
ಹೊನ್ನಾಳಿಯಲ್ಲಿ ಇಂದು ನಡೆದ ಪ್ರತಿಭಟನಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜರಿಗೊಳಿಸುವಂತೆ ಈ ರ್‍ಯಾಲಿಯ ಮುಖಾಂತರ ಸರ್ಕಾರವನ್ನು ಒತ್ತಾಯಿಸುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ದಂಡಾಧಿಕಾರಿಗಳವರ ಮೂಲಕ ಮನವಿ ಸಲ್ಲಿಸಲಾಗುವುದು.
ಸರ್ಕಾರ ಕೂಡಲೇ ಸದಾಶಿವ ಆಯೋಗದ ವರದಿಯನ್ನು ಜರಿಗೊಳಿಸಬೇಕು ಮತ್ತು ಝೀ-ಟಿವಿ ಕನ್ನಡ ವಾಹಿನಿಯ ರಾಘವೇಂದ್ರ ಹುಣಸೂರ ಅವರಿಗೆ ಜೀವ ಬೆದರಿಕೆವೊಡ್ಡಿರುವವರನ್ನು ಬಂದಿಸಬೇಕು. ಈ ವಿಷಯದಲ್ಲಿ ಮೀನಾಮೇಷ ಎಣಿಸಿದರೆ ರಾಜದ್ಯಂತ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವದು ಎಂದರು.
ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಜನತೆ, ಅಂಬೇಡ್ಕರ್ ಅಭಿಮಾನಿಗಳು, ಹಿತ ಚಿಂತಕರು, ಬುದ್ಧಿಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಹೋರಾಟಕ್ಕೆ ಸಹಕರಿಸಿದ ತಮ್ಮೆಲ್ಲರಿಗೂ ನನ್ನ ಹಾಗೂ ಸಮಿತಿಯ ಅಭಿಮಾನಪೂರಕ ವಂದನೆಗಳನ್ನು ಅರ್ಪಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಉಪಾದ್ಯಕ್ಷ ಮಾರಿಕೊಪ್ಪ ಮಂಜುನಾಥ, ನ್ಯಾಮತಿ ತಾಲೂಕು ಮಾದಿಗ ದಿಂಡೋರ ಸಮಿತಿಯ ತಾಲೂಕು ಅಧ್ಯಕ್ಷ ಹರೀಶ್, ಪ್ರಮುಖರಾದ ಮಂಜುನಾಥ್, ರವಿ, ಜಯಪ್ಪ, ಮಂಜು, ರಮೇಶ, ಬೆನಕೇಶ, ಡಿ ಎಸ್ ನೀಲಕಂಠಪ್ಪ, ಶಿವು, ಕೆಂಗಲಹಳ್ಳಿ ಪ್ರಭಾಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.