ಜ.೭: ಎಸ್‌ಟಿ ಮೀಸಲಾತಿಗಾಗಿ ಶಿಕಾರಿಪುರದಲ್ಲಿ ನಡೆಯಲಿರುವ ಸಮಾವೇಶದ ಪೋಸ್ಟರ್ ಅನಾವರಣ

350

ಹೊನ್ನಾಳಿ: ಎಸ್‌ಟಿ ಮೀಸಲಾತಿ ಗಾಗಿ ಶಿಕಾರಿಪುರದಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ಕುರುಬ ಸಮುದಾಯದ ಜನರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಿ ಪಂಚಾಯ್ತಿ ಮಾಜಿ ಸದಸ್ಯ ಎಂ. ರಮೇಶ್ ಹೇಳಿದರು.
ಎಸ್‌ಟಿ ಮೀಸಲಾತಿಗಾಗಿ ಶಿಕಾರಿಪುರದಲ್ಲಿ ನಡೆಸಲುದ್ದೇಶಿಸಿರುವ ಬೃಹತ್ ಸಮಾವೇಶದ ಕರಪತ್ರಗಳನ್ನು ಶನಿವಾರ ಪಟ್ಟಣದ ಸರ್ವರ್‌ಕೇರಿ ಯಲ್ಲಿನ ಶ್ರೀ ಕರಿಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಅನಾವರಣಗೊಳಿಸಿ ಅವರು ಮಾತನಾಡಿದರು.
ಕಾಗಿನಲೆ ಮಹಾಸಂಸ್ಥಾನ ಕನಕ ಗುರು ಪೀಠ ಸಮಾಜದ ಎ ಗುರುಗಳು ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ವಿಭಾಗ ಮಟ್ಟದ ಶಿಕಾರಿಪುರದ ಹೊಸ ಸಂತೆ ಮೈದಾನದಲ್ಲಿ ಬೃಹತ್ ಸಮಾವೇಶ ವನ್ನು ಜ.೭ರ ಗುರುವಾರ ಬೆಳಿಗ್ಗೆ ೧೧ ಗಂಟೆಗೆ ನಡೆಸಲು ತೀರ್ಮಾನಿಸಲಾ ಗಿದೆ. ಸಮಾವೇಶಕ್ಕೆ ಹೊನ್ನಾಳಿ ಪಟ್ಟಣ, ತಾಲೂಕು ಹಾಗೂ ನ್ಯಾಮತಿ ತಾಲೂಕಿನ ಜನರು ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸಬೇಕು ಎಂದರು.
ಹೊನ್ನಾಳಿ ಪಟ್ಟಣದ ಸರ್ವರ್ ಕೇರಿ, ಹೊಸಕೇರಿ, ದೊಡ್ಡಗಣ್ಣಾರ ಕೇರಿ, ಸಿದ್ಧಪ್ಪನಕೇರಿ, ಕಲ್ಕೇರಿ, ಕುಂಬಾರ ಗುಂಡಿಕೇರಿ, ದುರ್ಗಿಗುಡಿ ಭಾಗಗಳಲ್ಲಿ ಹಾಲುಮತ ಸಮಾಜದ ಮುಖಂಡರು ಮನೆ- ಮನೆಗೆ ತೆರಳಿ ಜಗತಿ ಮೂಡಿಸಿ ದರು. ಪಟ್ಟಣದ ಹೊಸಕೇರಿಯಲ್ಲಿನ ಕೊಪುರದ ಶ್ರೀ ವರಮಹಾಲಕ್ಷ್ಮೀ ದೇವಾಲಯ, ಸರ್ವರ್‌ಕೇರಿಯ ಶ್ರೀ ರೇವಣಸಿದ್ಧೇಶ್ವರ ದೇವಾಲಯಗಳ ಆವರಣದಲ್ಲಿಯೂ ಮುಖಂಡರು ಕರಪತ್ರಗಳನ್ನು ಅನಾವರಣಗೊಳಿಸಿ ಜನಜಗತಿ ಮೂಡಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಕೆ.ವಿ. ಚನ್ನಪ್ಪ, ಮುಖಂಡರಾದ ಎಚ್.ಎ. ಉಮಾಪತಿ, ಫಾಲಾಕ್ಷಪ್ಪ, ಕುಬೇಂದ್ರಪ್ಪ, ಚನ್ನಪ್ಪ, ಎ. ರವಿ, ಎಂ. ಸಿದ್ಧಪ್ಪ, ರಾಜು ಕಣಗಣ್ಣಾರ, ರಂಗಪ್ಪ, ಎಚ್.ಎಸ್. ರಂಜಿತ, ಹೊಸಕೇರಿ ಸುರೇಶ್, ಡಿ. ಮಂಜಪ್ಪ, ಮಂಜುನಾಥ ಇನ್ನಿತರರಿದ್ದರು.