ಜ್ಞಾನ ವಿಕಾಸ ಕಾರ್‍ಯಕ್ರಮದಡಿ ಅಣಬೆ ಕೃಷಿ ಕುರಿತು ಪ್ರಾತ್ಯಕ್ಷಿಕೆ

522

ಶಿವಮೊಗ್ಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ವತಿಯಿಂದ ಮಹಿಳಾ eನ ವಿಕಾಸ ಕಾರ್ಯಕ್ರಮದಡಿಯಲ್ಲಿ ಸಕ್ರೆಬೈಲ್ ಮುಗಿಲು eನ ವಿಕಾಸ ಕೇಂದ್ರದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ದಡಿಯಲ್ಲಿ ಅಣಬೆ ಕೃಷಿ ಮಾಹಿತಿ ಅಂಡ್ ಪ್ರಾತ್ಯಕ್ಷಿಕತೆ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಊರಿನ ಪ್ರಮುಖರಾದ ರಾಜಣ್ಣ ರವರು ನೆರವೇರಿಸಿದರು.
ಕೃಷಿ ವಿವಿಯ ನಂದೀಶ್ ಅವರು ಅಣಬೆ ಕೃಷಿ ವಿಧಾನ ಕುರಿತು ಮಾತನಾಡಿ, ಪ್ರತಿಯೊಬ್ಬರೂ ಇದನ್ನು ಸ್ವ ಉದ್ಯೋಗವಾಗಿ ಮಾಡಬಹುದು. ಇದರಿಂದ ಉತ್ತಮ ಆದಾಯವನ್ನು ಪಡೆದುಕೊಳ್ಳಬಹುದು ಎಂದು ವಿವರಿಸಿದರು.
ತಾಲೂಕಿನ eನ ವಿಕಾಸ ಸಮನ್ವಯಾಧಿಕಾರಿ ಪದ್ಮಾವತಿ ಎಂ. ಡಿ ಯೋಜನೆಯ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಎ ಸದಸ್ಯರಿಗೂ ಅಣಬೆ ಕೃಷಿ ಮಾಡಲು ಅಣಬೆ ಬೀಜ ವಿತರಿಸಲಾಯಿತು. ನಾಗರತ್ನ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿವಿಯ ಕುಮಾರಿ ಸುಚಿತ ಮತ್ತು ಗಾಜನೂರು ವಲಯದ ಮೇಲ್ವಿಚಾರಕ ವಿನೋದ ಕೆ ಸೇವಾ ಪ್ರತಿನಿಧಿ ರಮಾಮಣಿ, ಗೀತಾ ಉಪಸ್ಥಿತರಿದ್ದರು.
ಸಾಹಿರಾಬಾನು, ಇಂತಿಯಾಜ್ ಬೇಗಂ, ಗಂಗಮ್ಮ, ಶಿಲ್ಪಾ , ಮುಗಿಲು eನವಿಕಾಸ ಕೇಂದ್ರದ ಎ ಸದಸ್ಯರು ಹಾಜರಾಗಿದ್ದರು.